ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು
ಮಳೆಯ ಬೇಸರ ಕಳೆಯಲು ಕತೆಯೊಂದನ್ನು ಹೇಳುವಂತೆ ಕೇಳಿದ
ಮನೋರಮೆ ಸಂಸ್ಕೃತ ದಲ್ಲಿ ಕಾವ್ಯ ವಾಚನ ಮಾಡಿದ ಮುದ್ದಣ್ಣನಿಗೆ
ಹೇಳಿದ ಮಾತು .ಅಂದರೆ ಸಾಧಾರಣ ಅಕ್ಷರ ಜ್ಞಾನವುಳ್ಳ ತನಗೆ ಸರಳ ಕನ್ನಡ
ವೇ ಅರಗಿಸಲು ಕಷ್ಟ ವಿರುವಾಗ ಸಂಸ್ಕೃತ ಯಾಕೆ ?
ಆದರೆ ಅಕಲೆಸಿಯ ಕಾರ್ಡಿಯಾ ಎಂಬ ಅಪರೂಪದ ಕಾಯಿಲೆಯಲ್ಲಿ
ಗಂಟಲಲ್ಲಿ ನೀರು ಇಳಿಯದು.ಅದರೆ ಕಡುಬು ಇಳಿಯುವುದು .ಅನ್ನ ನಾಳ
ಮತ್ತು ಜಠರದ ನಡುವೆ ಒಂದು ಕವಾಟ ಇದೆ .ಇದು ಸರಿ ಇಲ್ಲದಿದ್ದರೆ ಈ
ಪರಿಸ್ತಿತಿ ಬರುವುದು .
ಅನ್ನನಾಳದಲ್ಲಿ ಗಡ್ಡೆ ಬೆಳೆದರೂ ನುಂಗಲು ಕಷ್ಟ ,ಆದರೆ ಇಲ್ಲಿ ಘನ
ಆಹಾರ ಇಳಿಯದು,ದ್ರವ ಇಳಿಯ ಬಹುದು .ಕೆಲವು ಭಾರಿ ಮೆದುಳಿನ
ಅಥವಾ ಅನ್ನನಾಳದ ನರಗಳು ದುರ್ಬಲಗೊಂಡು ನುಂಗುವುದು
ಕಷ್ಟ ವಾಗುವುದು .ಇಂತಹ ಸಂದರ್ಭ ರೋಗಿಗೆ ಬಾಯಲ್ಲಿ ತಿನ್ನಲು
ಅಥವಾ ಕುಡಿಯಲು ಕೊಟ್ಟರೆ ಅದು ಹೊಟ್ಟೆಗೆ ಹೋಗುವ ಬದಲು
ಶ್ವಾಸಕೋಶ ಕ್ಕೆ ಹೋಗಿ ಕೆಮ್ಮು ಮತ್ತು ದಮ್ಮು ಉಂಟಾಗುವುದು .
ಇದಕ್ಕೆ ಪುನಃ ಬಾಯಲ್ಲಿ ಕೆಮ್ಮಿನ ಔಷಧಿ ಕೊಟ್ಟು ಪ್ರಯೋಜನ ಇಲ್ಲ .
ಬದಲಾಗಿ ಕೆಮ್ಮು ಇನ್ನೂ ಹೆಚ್ಚುವುದು . ಇದನ್ನು ಕಫ ಎಂದು ಭಾವಿಸಿ
ಚಿಕಿತ್ಸೆ ಮಾಡಿಸುವರು ,ಅದು ಸರಿಯಲ್ಲ ಇಂತಹ ಸಂದರ್ಭ ದಲ್ಲಿ ಟ್ಯೂಬಿನ
ಮೂಲಕ ಆಹಾರ ಕೊಡಬೇಕು .ಇಲ್ಲವೇ ಹೊಟ್ಟೆಯ ಮೇಲೆ ಒಂದು
ರಂಧ್ರ ಮಾಡಿ ನೇರ ಜಠರ ಕ್ಕೆ ಆಹಾರ ಕೊಡಬೇಕಾಗುವುದು ..
ಔಷಧಿ ಕಂಪೆನಿಗಳ ಪ್ರತಿನಿಧಿಗಳು ತಮ್ಮ ಮಾತ್ರೆಗಳು ಬೇರೆ ಕಂಪೆನಿಗಳಿಗೆ ಹೊಲಿಸಿದರೆ ಗಾತ್ರದಲ್ಲಿ ಬಹಳ ಸಣ್ಣದಾಗಿದ್ದು ನುಂಗಲು ಬಲು ಸುಲಭ ಎನ್ನುವರು .ನನ್ನ ಮೇಲೆ ಅದು ಪ್ರಭಾವ ಬೀರುವುದಿಲ್ಲ .ಮಾತ್ರೆ ತುಂಬಾ ಸಣ್ಣ ಇದ್ದರೆ ನುಂಗಲು ಕಷ್ಟ ,ಅಲ್ಲದೆ ಅದು ಗಂಟಲಿನ ಬದಿಯಲ್ಲಿ ಸಿಕ್ಕಿಕೊಂಡಂತೆ ಆಗುವುದು.ನೀವು ಒಂದು ಕಾಳು ಅಕ್ಕಿ ಮತ್ತು ಒಂದು ತುಂಡು ಇಡ್ಲಿ ತಿಂದು ನೋಡಿರಿ .ಯಾವುದು ಸುಲಭವಾಗಿ ಇಳಿಯುವುದು ?ಇದರಲ್ಲಿ ಗುರುತ್ವಾಕರ್ಷಣ ವೂ ಭಾಗಶಃ ಕೆಲಸ ಮಾಡುವುದು .
ಅಡಮನೆ ಪಡತಡ್ಕ ಎನ್ನ ಅಬ್ಬೆಯ ಮನೆ - ಮರಿಕೆ, ಅಲ್ಲಿ ಕೊಟ್ಟಿಗೆ ತುರುಕುತ್ತವು ಮತ್ತೆ ಕಶಾಯ!!
ಪ್ರತ್ಯುತ್ತರಅಳಿಸಿ