ನನಗೆ ದೇಶದ ಎಲ್ಲಾ ನಾಗರಿಕರಂತೆ ನ್ಯಾಯಾಂಗದ ಮೇಲೆ ಬಹಳ
ವಿಶ್ವಾಸ .ಅದರಲ್ಲೂ ಎಚ್ ,ಅರ್.ಖನ್ನಾ ಮತ್ತು ಜಗ ಮೋಹನ್ ಲಾಲ್
ಸಿನ್ಹಾ ಅವರಂತಹ ನ್ಯಾಯಾಧೀಶರು ನಮ್ಮ ಈ ನಂಬಿಕೆ ಅಲುಗಾಡದಂತೆ
ನಡೆದುಕೊಂಡು ಇತಿಹಾಸ ಸೃಷ್ಟಿಸಿದ್ದಾರೆ .
ಶಾಂತಿ ಭೂಷಣ್ ಪ್ರಸಿದ್ಧ ಅಗ್ರವಾಲ ಕುಟುಂಬದಲ್ಲಿ ಜನಿಸಿದವರು .ವಕೀಲ
ವೃತ್ತಿ ಆರಿಸಿ ಕೊಂಡು ಸೈ ಎನಿಸಿದವರು . ಪ್ರಸಿದ್ದಇಂದಿರಾ ಗಾಂಧಿಯವರ
ಚುನಾವಣಾ ಕೇಸ್ ನಲ್ಲಿ ವಾದಿಸಿ ಗೆದ್ದು ಇತಿಹಾಸ ಸೃಷ್ಟಿಸಿದ ಇವರಿಗೆ ಉಚ್ಚ
ನ್ಯಾಯಾಲಯದ ನ್ಯಾಯಾಧೀಶ ಹುದ್ದೆ ಅರಸಿ ಬಂದರೂ ಬಿಟ್ಟವರು .
ಜನತಾ ಪಾರ್ಟಿ ಸರಕಾರದಲ್ಲಿ ಕಾನೂನು ಸಚಿವರಾಗಿದ್ದವರು
ತನ್ನ ಮಗ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಜತೆ ಸಾರ್ವಜನಿಕ ಹಿತಾಸಕ್ತಿ
ಯ ಮೊಕದ್ದಮೆಗಳಿಗೆ ಬಹುತೇಕ ಉಚಿತವಾಗಿ ವಾದಿಸಿ ದನಿ ಇಲ್ಲದವರಿಗೆ
ಮತ್ತು ಜನ ಸಾಮಾನ್ಯನಿಗೆ ದನಿ ಕೊಡುತ್ತಿರುವವರು . ನ್ಯಾಯಾಂಗದಲ್ಲಿ
ಇರುವ ಬ್ರಷ್ಟಾಚಾರದ ಬಗ್ಗೆ ತಂದೆ ಮಗ ಹೋರಾಡುತ್ತಿರುವುದು ಎಲ್ಲರಿಗೂ
ತಿಳಿದ ವಿಷಯ.
ಇವರ ಆತ್ಮ ಚರಿತ್ರೆ ಕೋರ್ಟಿ೦ಗ್ ದಿ ಡೆಸ್ಟಿನಿ ಪುಸ್ತಕ ಓದಿ ಮುಗಿಸಿದ್ದೇನೆ .
ಅದರಿಂದ ಆಯ್ದ ಕೆಲ ನುಡಿ ಮುತ್ತುಗಳು .
‘ನನ್ನ ದೃಡ ಅಭಿಪ್ರಾಯ ,ಉದ್ಯೋಗವೆಂಬುದು ಮನುಷ್ಯನಿಗೆ ಆತ್ಮ ತೃಪ್ತಿ
ತಂದು ಕೊಡುವಂತಿರ ಬೇಕು .ಲೌಕಿಕ ಅಭಿವೃದ್ದಿಗೆ (ಸಂಪಾದನೆ ) ನಂತರದ
ಸ್ಥಾನ.”
“ ಒಬ್ಬ ವಕೀಲನಿಗೆ ಅರ್ಹ ಕಕ್ಷಿಗಾರನ ಪರವಾಗಿ ಕಷ್ಟದ ವ್ಯಾಜ್ಯವನ್ನು
ಅದೂ ಉಚಿತವಾಗಿ ವಾದಿಸಿ ನ್ಯಾಯ ಒದಗಿಸಿ ಕೊಡುವುದು ,ಕೈ ತುಂಬಾ
ಫೀಸ್ ತಂದು ಕೊಡುವ ದೊಡ್ಡ ಕಕ್ಷಿದಾರ ನಿಗಾಗಿ ವಾದಿಸುವುದರಿಂದ
ಹೆಚ್ಚು ಸಂತೃಪ್ತಿ ಕೊಡುವುದು.
ಇವರ ಪತ್ನಿ ಕುಮುದ್ ಅವರು ಕ್ಯಾನ್ಸರ್ ಕಾಯಿಲೆಯಿಂದ ನಿಧನ ರಾದಾಗ
ಬಂಧುವೊರ್ವರು ಕಳುಹಿಸಿದ ಸಂದೇಶ .
“ಆರಿ ಹೋದ ಬೆಳಕಿನ ಜ್ವಾಲೆಗಾಗಿ ಮರುಗದಿರೋಣ
ಅದು ಇಷ್ಟು ಕಾಲ ಪ್ರಜ್ವಲತೆ ಯಿಂದ ಬೆಳಗಿದ್ದನ್ನು ಆಚರಿಸೋಣ “
ಇವರ ಪುತ್ರಿ ಷೆಫಾಲಿ ಚಲನಚಿತ್ರ ನಿರ್ಮಾಪಕಿ .ಮತ್ತು www.beatofindia.com ಸಂಗೀತದ ಜಾಲ ತಾಣ
ನಡೆಸುತ್ತಿದ್ದಾರೆ
ಒಂದು ತಮಾಷೆ ; ಶಾಂತಿಭೂಷಣ್ ಲಾ ಮತ್ತು ಕಂಪನಿ ಅಫೇರ್ ಮಂತ್ರಿ
ಆಗಿದ್ದಾಗ ಒಂಟಿ ವೃದ್ದ ರೋರ್ವರು ಇವರಿನ್ನು ಅಫೇರ್ ಗಾಗಿ ಕಂಪನಿ
ಕೊಡಿಸಲು ಗೋಳು ಹೊಯ್ದಿದಿದ್ದರಂತೆ !
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ