ಬೆಂಬಲಿಗರು

ಶುಕ್ರವಾರ, ಏಪ್ರಿಲ್ 17, 2015

ಧಾರವಾಡದ ಕೆಲವು ನೆನಪುಗಳು

ಕೊನೆಯ ಮೂರೂ ತಿಂಗಳು ಹೌಸ್ ಸರ್ಜನ್ಸಿ  ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ .

ಅಲ್ಲಿ ಪಿ ಜಿ ಗಳು ಇಲ್ಲ .ಅಸಿಸ್ಟೆಂಟ್ ಸರ್ಜನ್ ಗಳ ನಂತರ ನಾವೇ ಎಲ್ಲ .

ನಮಗೆ ಕೆಲಸ ಕಲಿಯಲು ಅನುಕೂಲ  ಇದರಿಂದ ಅನುಕೂಲ ಆಯಿತು .ನಾನು 

ಆಸ್ಪತ್ರೆಯ ಒಂದು ಖಾಲಿ ಬಾತ್ ರೂಂ ನಲ್ಲಿ ವಾಸ ಮಾಡುತ್ತಿದ್ದೆ .ಇ ಸಿ ಜಿ ಯಂತ್ರ 

ನನ್ನ ಸುಪರ್ದಿಯಲ್ಲಿ .ಆದುದರಿಂದ ನನಗೆ ಇ ಸಿ ಜಿ ಮಾಡಿ ಓದಲು ಅಭ್ಯಾಸ 

ಆಯಿತು .ದಿನ ರಾತ್ರಿ ಆಸ್ಪತ್ರೆಯಲ್ಲಿ ನೆಲೆಸಿ ಕಾಲ್ ತೆಗೆದು ಕೊಳ್ಳುತ್ತಿದ್ದೆ .ಆಗ 

ಕಲಿಯುವ ಉತ್ಸಾಹ ,ಬಡ ರೋಗಿಗಳಿಗೆ ಸಾಂತ್ವನ  ನೀಡುವ ಆದರ್ಶ .ಆಯಾಸ 

ಸುಳಿಯದು .ಮಕ್ಕಳ ವಾರ್ಡಿನಲ್ಲಿ  ಇಂಜೆಕ್ಷನ್ ಕೊಡಲು ರಕ್ತ ನಾಳ ಸಿಗದೇ ಇದ್ದಲ್ಲಿ 

ಕಟ್ ಡೌನ್ ಎಂಬ ಸಣ್ಣ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದೆವು .ಸಣ್ಣ ಸಣ್ಣ  ಎಲುಬು ಮುರಿತ .

ಕೀಲು ತಪ್ಪುವಿಕೆ ನಾವೇ ಸರಿ ಪಡಿಸುವ ಅವಕಾಶ .

  ಹೆರಿಗೆ ಮಾಡಿಸುವುದು ನಾವೇ ,ಏನಾದರೂ ಸಮಸ್ಯೆ ಇದ್ದರೆ ಹಿರಿಯ ವೈದ್ಯರನ್ನು 

ಕರೆಯುತ್ತಿದ್ದೆವು .ಆಗ ಸ್ಕ್ಯಾನ್ ಇರಲಿಲ್ಲ . ಒಮ್ಮೆ ಡೆಲಿವರಿ ಮಾಡಿಸುವಾಗ ಒಂದು 

ಮಗು ಜನನವಾಗಿ ಮಾಸ ಬೀಳಲು ಎದುರು ನೋಡುವಾಗ ಇನ್ನೊಂದು ಮಗುವಿನ

ಆಗಮನ ಆಯಿತು .ತಂದೆ ತಾಯಿಗಳಿಗೆ ಭಾರೀ ಸಂತೋಷ ,ನನಗೆ ಒಂದು ಮೂಟೆ

ಧಾನ್ಯ ತಂದು ಕೊಟ್ಟರು .ಅವರಿಗೆ ರಾಮ ಲಕ್ಷ್ಮಣ ಎಂದು ನನ್ನ ಸಲಹೆ  ಮೇರೆಗೆ 

ಹೆಸರು ಇಟ್ಟರು.ಇನ್ನೊಮ್ಮೆ ಜನಿಸಿದ ಮಗು ಹಾಲು ಕುಡಿದ ಕೂಡಲೇ ಹೊರ 

ಬರುತಿದ್ದು ಕೆಮ್ಮು ಬರುತ್ತಿತ್ತು .ನಾವೇ ಡಾ ಪಾಟೀಲ ಎಂಬ   ರೇಡಿಯಾಲಜಿಸ್ಟ್

ಅವರ ಸಾರಥ್ಯದಲ್ಲಿ  dye ಹಾಕಿ  ಎಕ್ಷರೇ ಮಾಡಿದಾಗ  ಅನ್ನ ನಾಳ ವು  ಅಪೂರ್ಣ 

ವಾಗಿರುವ ಅಂಶ ತಿಳಿದು ಬಂತು .ಮಗುವನ್ನು ಹುಬ್ಬಳ್ಳಿ ಕೆ ಎಂ ಸಿ ಗೆ  ಕಳುಹಿಸಿದೆವು .

ಸಿವಿಲ್ ಆಸ್ಪತ್ರೆಯಲ್ಲಿ  ದಾದಿಯರ  ಟ್ರೇನಿಂಗ ಸ್ಕೂಲ್ ಇದ್ದು ನಾನು  ಅವರಿಗೆ 

ಗೌರವ  ಅಧ್ಯಾಪಕ ಆದೆ .ಇದರಿಂದ ನನಗೆ ಪಾಠ ಮಾಡುವ ಅಭ್ಯಾಸ ಆಯಿತು .

ಅಲ್ಲದೆ  ನರ್ಸ್ ಗಳಿಗೆ  ಆಗಿ ಬರೆದ ಶ್ರೇಷ್ಠ  ಗ್ರಂಥ  ಮಾರ್ಗರೆಟ್  ಮೈಲ್ಸ್ ಅವರ 

ಮಿಡ್ ವೈಫರಿ ಯ ಅಧ್ಯಯನ ಮಾಡುವ ಅವಕಾಶ ಆಯಿತು .ನಾನು ಧಾರವಾಡ 

ಬಿಡುವಾಗ  ನರ್ಸಿಂಗ್ ವಿದ್ಯಾರ್ಥಿನಿಯರು  ನನಗೆ ಭಾವ ಪೂರ್ಣ ವಿಧಾಯ 

ಕೋರಿದರು .

ಸಿವಿಲ್ ಆಸ್ಪತ್ರೆಯಲ್ಲಿ ಡಾ ,ಗಜಾನನ ಗುಡಿಗಾರ್ ಎಂಬ  ಪಿಸಿಶಿಯನ್ ಇದ್ದರು .

ನಾನು ಕಂಡ ಅತಿ ಶ್ರೇಷ್ಠ ವೈದ್ಯರಲ್ಲಿ ಒಬ್ಬರು ,ಕ್ರಮ ಪ್ರಕಾರ ಪರೀಕ್ಷೆ ,ಅಗಾಧ 

ಜ್ಞಾನ. ಮುತ್ತಿನಂತಹ ಕೈಬರಹ ,ನಾನು ಅವರ  ಶಿಷ್ಯ ವೃತ್ತಿ ಸ್ವೀಕರಿಸಿ 

ಬಹಳ ಕಲಿತೆ ಮಾತ್ರವಲ್ಲ  ಮೂರು ತಿಂಗಳು ಅವರ ಮನೆಯಲ್ಲಿ ಊಟ ಉಪಚಾರ 

ಸ್ವೀಕರಿಸಿದೆ .ಅವರ ಪತ್ನಿ ಅಸ್ಪತ್ರೆಯ ಸ್ತ್ರೀ ರೋಗ ತಜ್ಞೆ .ನನ್ನನ್ನು ಸ್ವಂತ 

ತಮ್ಮನಂತೆ ನೋಡಿ ಕೊಂಡರು. ಗುಡಿಗಾರ್ ಅವರು ಕಾರವಾರ ದವರು .ಮೀನು 

ಎಂದರೆ ಪ್ರಾಣ .ನಾನು ಹುಬ್ಬಳ್ಳಿಗೆ ಹೋದಾಗ  ಫಿಷರೀಸ್ ಡಿಪಾರ್ಟ್ಮೆಂಟ್ ನ 

ಅಂಗಡಿಯಿಂದ  ಅವರಿಗೆ ಮೀನು ಖರೀದಿಸಿ ತಂದು ಕೊಡುತ್ತಿದ್ದೆ .ನೋಡಿ ನಾನು 

ಹೇಳಿ ಕೇಳಿ ಬ್ರಾಹ್ಮಣ .ನಾನು ಮಾಡುತ್ತಿದ್ದುದು ಗುರು ಸೇವೆ ಮಾತ್ರ .

     ಸಿವಿಲ್ ಆಸ್ಪತ್ರೆ ಊರಿನ ಹೊರ ಭಾಗದಲ್ಲಿ ಇತ್ತು .ಅಲ್ಲ್ಲಿಗೆ ರಸ್ತೆ ಇದ್ದರೂ 

ಬಸ್ ಸೌಕರ್ಯ ಇರಲಿಲ್ಲ .ಅದಕ್ಕೆ ಒಂದು ಅರ್ಜಿ ಬರೆದು ಹಲವು ರೋಗಿಗಳ 

ಸಹಿ ಹಾಕಿಸಿ ಹುಬ್ಬಳ್ಳಿ ವಿಭಾಗ ಅಧಿಕಾರಿಗಳಿಗೆ ಸಲ್ಲಿಸಿದೆವು .ಈಗ ಅಲ್ಲಿ  ಸಿಟಿ 

ಬಸ್ ಆರಂಭವಾಗಿರಬೇಕು .ಧಾರವಾಡ ದಲ್ಲಿ ಇದ್ದಾಗ ಲೇಖಕ ಶ್ರೀ ಬಸವರಾಜ 

ಕಟ್ಟಿಮನಿ ಆಸ್ಪತ್ರೆಯಲ್ಲಿ ಒಳ ರೋಗಿ ಆಗಿ ಚಿಕಿತ್ಸೆ ಪಡೆಯುತ್ತಿದ್ದರು . ಅವರ 

ಭೇಟಿ ಭಾಗ್ಯ ಸಿಕ್ಕಿತು .ಆಗ ತಾನೇ  ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ಉಪ 

ಕುಲ ಪತಿ ಗಳಾಗಿ ಬಂದಿದ್ದ ಡಾ ನಂಜುಂಡಪ್ಪನವರನ್ನು ಹೊರ ರೋಗಿಯಾಗಿ 

ನೋಡಿದ ನೆನಪು .ಎಂತಹ ಶೇಷ್ಟ ವ್ಯಕ್ತಿಗಳು

ಧಾರವಾಡದಲ್ಲಿ   ವಿದ್ಯಾವರ್ಧಕ ಸಂಘದ  ಕಾರ್ಯಕ್ರಮಗಳಿಗೆ ವಿದ್ಯಾರ್ಥಿಯಾಗಿ

ದ್ದಾಗಲೇ  ಹಾಜರಾಗುತ್ತಿದ್ದ ನಾನು ಅದನ್ನು ಸಾಧ್ಯವಾದಷ್ಟು ಮುಂದು ವರಿಸಿದೆ .

ಅಲ್ಲಿ  ಶೇಷ್ಟ ಬರಹಗಾರರಾದ  ಯು ಅರ್ ಅನಂತ ಮೂರ್ತಿ ,ಲಂಕೇಶ್ ,ಅಡಿಗ 

ಇವರನ್ನು ಕಂಡು ಕೇಳುವ ಅವಕಾಶ .ಆಗ ಚಂಪಾ ಕಾರ್ಯದರ್ಶಿ ,ಅವರ 

ಮೊನಚಾದ ಟ್ರೇಡ್ ಮಾರ್ಕ್ ಪ್ರಶ್ನೆಗಳು .ಬಹಳ ಚೇತೋಹಾರಿ .ಅನಂತ 

ಮೂರ್ತಿ ಯವರನ್ನು  ತುರ್ತುಪರಿಸ್ಥಿತಿಯ ಸಮಯದಲ್ಲಿ ನೀವು ಏಕೆ ಪ್ರತಿಭಟನೆ 

ಮಾಡಲಿಲ್ಲ ಎಂದು ಕೇಳಿದ್ದಕ್ಕೆ ಅವರು ತಾನು ಸಿಗರೆಟ್ ಸೇದಿ ಅದರ ತುಂಡುಗಳನ್ನು  

ಟಪಾಲ್ ಪೆಟ್ಟಿಗೆ ಒಳಗೆ ಹಾಕುತ್ತಿದ್ದ್ದೆಎಂದರು!ಎಂತಹ ಪ್ರತಿಭಟನೆ .ದೊಡ್ಡವರ 



ರೀತಿ .

ಆಸ್ಪತ್ರೆಯ  ನವಜಾತ ಶಿಶು ವಿಭಾಗ ಇನ್ನೂ ಶೈಶವ ಅವಸ್ಥೆಯಲ್ಲಿ  ಇತ್ತು . ಅಲ್ಲಿಗೆ 

ನನ್ನ ಷ್ಟಯಿಪೆಂಡ್ ಹಣದಲ್ಲಿ  ಒಂದು ಹೀಟರ್  ತಂದು ಕೊಟ್ಟು ನನ್ನ ಅಳಿಲ 

ಸೇವೆ  ಮಾಡಿದೆ .

1 ಕಾಮೆಂಟ್‌: