ಬೆಂಬಲಿಗರು

ಶುಕ್ರವಾರ, ಏಪ್ರಿಲ್ 17, 2015

ಹೌಸ್ ಸರ್ಜೆನ್ಸಿ ನೆನಪುಗಳು ೨

ಹೌಸ್ ಸರ್ಜೆನ್ಸಿ ಆರಂಭವಾದ  ದಿನಗಳು.ಗೊತ್ತಿದ್ದುದು ಪರೀಕ್ಷೆ ಪಾಸಾಗಲು  ಬೇಕಾದ  ಕೆಲವು  ವಿಚಾರಗಳು.ಮೆಡಿಸಿನ್ ಪೋಸ್ಟಿಂಗ್ .ಒಂದು ದಿನ ಮಧ್ಯಾಹ್ನ ನಮ್ಮ ಯೂನಿಟ್ ನ ಓ ಪಿ ಮುಗಿಸಿ ಸುಸ್ತಾಗಿ ವಾರ್ಡಿಗೆ ಬಂದು ಕೇಸ್ ಶೀಟ್ ಬರೆಯುತ್ತಿದ್ದೆ . ಆಯಾ ಒಬ್ಬಳು ಕಾಲ್ ಬುಕ್ ಹಿಡಿದು ಕೊಂದು ಓಡಿ ಬಂದಳು.ನಾಲ್ಕನೇ ಯೂನಿಟ್ ನ  ಒಬ್ಬ ರೋಗಿ ಸೀರಿಯಸ್ ಕೂಡಲೇ ಬರುವುದು .ಎಂಬ ವಾರೆಂಟ್ .ಹತ್ತಿರ ಪಿ ಜಿ ಗಳಾಗಲೀ ಅಧ್ಯಾ  ಪಕ ರಾಗಲಿ  ಯಾರೂ ಇರಲಿಲ್ಲ .ಏನೂ ಮಾಡುವಂತಿಲ್ಲ ,ಯುದ್ಧಕ್ಕೆ ಹೋರಟ ಉತ್ತರ ಕುಮಾರನಂತೆ ಸ್ತೆತೋಸ್ಕಾಪ್ ತೆಗೆದು ಕೊಂಡು ಓಡಿದೆ .ರೋಗಿ ಉಸಿರಾಡಲು ಆಗದೆ ಚಡಪಡಿಸುತ್ತಿದ್ದ  . ಬೇರೆ ಯೂನಿಟ್ ನ ಕೇಸ್ ನನಗೆ ಹೊಸತು .ಕೇಸ್ ಶೀಟ್ ನೋಡಿದೆ .ಅರ್ಥ ಆಗಲಿಲ್ಲ .ಪರೀಕ್ಷೆಗೆ ಓದಿದ ಸಾವಿರಾರು ರೋಗಗಳು ಕಣ್ಮುಂದೆ 
ಬಂದವು .ರೋಗಿಯ ಪರೀಕ್ಷೆ ಹೇಗೆ ಅರ೦ಬಿಸುದು ?ಕ್ರಮ ಪ್ರಕಾರ  ನೋಡು ,ಮುಟ್ಟು .ತಟ್ಟು,ಮತ್ತು ಕೇಳು (inspection,palpation ,percussion.ascultation) ಕ್ರಮ ವೋ ,ಹಾಗಾದರೆ ಯಾವ ಅಂಗ ದಿಂದ ಆರಂಭಿಸುವುದು ಇತ್ಯಾದಿ ಎಲ್ಲಾ ತಲೆಯಲ್ಲಿ  ಓಡುತ್ತಿದ್ದಂತೆ ರೋಗಿ  ಸ್ಥಿತಿ ನಿಮಿಷ 
ನಿಮಿಷಕ್ಕೆ  ಗ೦ಭೀರವಾಗುತ್ತಿತ್ತು . ರೋಗಿಗಳ ಬಂಧುಗಳು ,ಸ್ಟಾಫ್ ನರ್ಸ್ ನನ್ನನ್ನೇ  ನೋಡುತ್ತಿದ್ದರು .ಆಗ ಈಗಿನಂತೆ ಮೊಬೈಲ್ ಫೋನ್ ಇರಲಿಲ್ಲ .ಇದ್ದರೆ ಪಿ ಜಿ ಗಾದರೂ ಕೇಳ ಬಹುದಿತ್ತು .ನಾನು ಏನು ಮಾಡಿದೆನೋ ಏನು ಕೊಟ್ಟೆನೋ ನನ್ನ 
ಕಣ್ಣೆದುರೇ ಆತ ಕೊನೆಯುಸಿರು ಎಳೆದ .ಎಂ ಬಿ ಬಿ ಎಸ ಪಾಸಾಗಿ ಬೀಗುತ್ತಿದ್ದ 
ನನಗೆ  ನನ್ನ ಭಂಡವಾಳದ ಅರಿವಾಯಿತು .ಆ ಯೂನಿಟ್ ನ  ಪ್ರೊಫೆಸರ್ ನನ್ನನ್ನು 
ಕರೆದು ಸಹಸ್ರನಾಮ ಮಾಡುವರು ಎಂದು ಕೊಂಡು ಡೆತ್ certify ಮಾಡಿ ಹೋದೆ .
ಆಮೇಲೆ ಯಾರೂ ಈ  ವಿಷಯ ನನ್ನಲ್ಲಿ ಕೇಳಲಿಲ್ಲ .ಕ್ರಮೇಣ ಇಂತಹ ತುರ್ತುಪರಿಸ್ಥಿತಿಯನ್ನು ನಿಭಾಯಿಸುವ ಅನುಭವ ಆಯಿತೆನ್ನಿ .
  ಡಾ. ಎಸ ಏನ್ ಕೌಲ್ ಗುಡ್ ಬಗ್ಗೆ ನನ್ನ ಬ್ಲಾಗ್ ನಲ್ಲಿ ಮೊದಲೇ ಬರೆದಿರುವೆನು .ನನ್ನ ಪೋಸ್ಟಿಂಗ್ ಅವರ ಯೂನಿಟ್ ನಲ್ಲಿ .ಅವರು ಭಾವಜೀವಿ .ಬೇಗ ಕೋಪ ,ಅಷ್ಟೇ ಬೇಗ ಶಾಂತ .ರೋಗಿಯ ಗಂಡಂದಿರು ಪತ್ನಿಯ ಬಗ್ಗೆ ಅನಾಸ್ತೆ ತೋರಿದರೆ ಎರಡು ಬಿಗಿದದ್ದೂ ,ತಾವೇ ರೋಗಿಗಳಿಗೆ ರಕ್ತ ಕೊಟ್ಟದ್ದೂ ಇದೆ. ಪಿ ಜಿ ಗಳ ಸಣ್ಣ ಸಣ್ಣ ತಪ್ಪುಗಳಿಗೆ  ದೊಡ್ಡ ದನಿಯಲ್ಲಿ ಬಯ್ಯುವರು .ಒಂದು ದಿನ ಪಿ ಜಿ ಒಬ್ಬಾಕೆ ಡಿ ಅಂಡ್ ಸಿ ಮಾಡುವಾಗ ಗರ್ಭಕೋಶ ತೂತು ಆಯಿತು .ಹೆದರಿ ಪ್ರೊಫೆಸರ್ ಗೆ ಹೇಳಿದಾಗ 
ಕೂಲಾಗಿ ಬಂದು ಧೈರ್ಯ ಹೇಳಿ ಅದನ್ನು ಸರಿ ಪಡಿಸಿ ಕೊಟ್ಟರು .ಎಂತಹ ಸರ್ಜನ್! 
 ಓ ಟಿ ಯಲ್ಲಿ ಅವರಿಗೆ ಸಹಾಯಕನಾಗಿ ಕೆಲಸ ಮಾಡುವಾಗ ಎಂತಹ ಕ್ಲಿಷ್ಟ ಶಸ್ತ್ರಕ್ರಿಯೆಗಲೂ ಮಕ್ಕಳ ಆಟದಂತೆ ತೋರುತ್ತಿದ್ದವು .
 ಹೆರಿಗೆ ವಾರ್ಡ್ ನಲ್ಲಿ ಕೆಲವು ಅನಾಥ ಮಕ್ಕಳು ಇದ್ದುವು .ಅವರನ್ನು ವಾರ್ಡಿನ ಸ್ಟಾಫ್  ತಮ್ಮ ಮಕ್ಕಳಂತೆ ಮುದ್ದಾಗಿ ಸಾಕುತ್ತಿದ್ದರು .ಅವರ ಹುಟ್ಟಿದ ಹಬ್ಬಕ್ಕ್ಕೆ ಸ್ವಂತ ಹಣ ಹಾಕಿ ಡ್ರೆಸ್ ಸಿಹಿ ತಿಂಡಿ ತರುತ್ತಿದ್ದರು.ಮಕ್ಕಳಿಲ್ಲದವರು ದತ್ತು ತೆಗೆದು ಕೊಂದು ಹೋದ  ಮಕ್ಕಳು ಅನೇಕರು ಇಂದು ದೇಶ ವಿದೆಶಗಳಲ್ಲಿ ಸುಖ ವಾಗಿ ಜೀವಿಸುತ್ತಿರ ಬಹುದು .ಅವರಿಗೆ ಈ ಅಮ್ಮಂದಿರ ತ್ಯಾಗ ಸೇವೆ ಯ ಅರಿವು ಇರದು .


    ಮಕ್ಕಳ ವಾರ್ಡಿನಲ್ಲಿಯೂ ಕೆಲವು ಮಕ್ಕಳು ಗುಣಮುಖವಾಗದ ಧೀರ್ಘಕಾಲದ 
ಕಾಯಿಲೆ (ಉದಾ ಮಕ್ಕಳ ಸಕ್ಕರೆ ಕಾಯಿಲೆ .ಇದಕ್ಕೆ ಇನ್ಸುಲಿನ್ ದಿನಾಲೂ ಚುಚ್ಚಬೇಕು .ಹಳ್ಳಿಯಲ್ಲಿ ದಿನಾಲೂ ಇಂಜೆಕ್ಷನ್ ತೆಗೆದು ಕೊಳ್ಳುವುದು ಕಷ್ಟ .ಅಲ್ಲದೆ ಹಣ ದ ಸಮಸ್ಯೆ ) ಯಿಂದ ಬಳಲುವ  ಮಕ್ಕಳು ಇದ್ದರು .ಆಗ ಡಾ ಮಾಲತಿ ಯಶವಂತ್ ಎಂಬವರು ಮಕ್ಕಳ ವಿಭಾಗದ ಮುಖ್ಯಸ್ಥರು .ಅವರ ಅನುಮತಿ ಪಡೆದು 
ಅಂತಹ ಮಕ್ಕಳಿಗೆ ಬಿಡುವಿನ ವೇಳೆಯಲ್ಲಿ ಅಕ್ಷರಾಭ್ಯಾಸ  ಮಾಡ ತೊಡಗಿದೆವು .
ನನ್ನ ಜೊತೆ ಡಾ ಸಂಜೀವ ಕುಲಕರ್ಣಿ (ಈಗ ಧಾರವಾಡದ ಪ್ರಸಿದ್ಧ ಸ್ತ್ರೀ ರೋಗ ತಜ್ಞರು ),ಡಾ ಇಕ್ಬಾಲ್ ಮನಿಯಾರ್ ,ಮತ್ತು ಕೆಲವು ಸ್ನೇಹಿತರು ಇದ್ದ ನೆನಪು .ಕಾರ್ಯಕ್ರಮ ಚೆನ್ನಾಗಿ ನಡೆಯಿತು .ಆಗ ವಿಭಾಗದಲ್ಲಿ ಇದ್ದ  ಇನ್ನೊಬ್ಬ ಪ್ರಾಧ್ಯಾಪಕರು ನಮ್ಮನ್ನು ಅಪಹಾಸ್ಯ ಮಾಡುತ್ತಿದರು ,ಅವರು ಈ ಮಕ್ಕಳನ್ನು ತಮ್ಮ ಮನೆಕೆಲಸಕ್ಕೆ  ಉಪಯೋಗಿಸುತ್ತಿದ್ದರಲ್ಲದೆ  ಹಾಗೆ ಮಾಡದಿದ್ದರೆ  ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವುದಾಗಿ  ಧಮಕಿ ಹಾಕುತ್ತಿದ್ದರು .ನಮ್ಮ  ಕ್ಲಾಸ್ ಗಳಿಂದ ಅವರ ಮನೆ ಕೆಲಸಕ್ಕೆ ಸ್ವಲ್ಪ ತೊಂದರೆ ಆಯಿತು ಎಂದು ಕಾಣುತ್ತದೆ ,ಇದೇ ವ್ಯಕ್ತಿ ರೇಡಿಯೋ ,ಪತ್ರಿಕೆಯವರನ್ನು ನಾವು ಈ ಮಕ್ಕಳಿಂದ ಏರ್ಪಡಿಸಿದ್ದ ಮಕ್ಕಳ ದನ  ಕಾರ್ಯಕ್ರಮಕ್ಕೆ ಕರೆಸಿ ತಮ್ಮದೇ ಕಾರ್ಯಕ್ರಮ ವೆಂದು ಬಿಂಬಿಸಿದರು .ಈ ವ್ಯಕ್ತಿಯ ಪತ್ನಿ ಕೂಡ ನಮ್ಮ ಪ್ರಾಧ್ಯಾಪಕರಾಗಿದ್ದು ತುಂಬಾ ಒಳ್ಳೆಯವರು.

                    
                                                                    
 ಇದು ಡಾ ಮಾಲತಿ ಯಶವಂತ್ ಅವರು ನನಗೆ ಕೊಡಮಾಡಿದ  ಸರ್ಟಿಫಿಕೇಟ್ .


ಸರ್ಜರಿ ವಾರ್ಡ್ ನಲ್ಲಿ  ಬೆಳಿಗ್ಗೆ ಸಾಲಾಗಿ ಡ್ರೆಸ್ಸಿಂಗ್ ಕೆಲಸ .   ದ್ರೆಸ್ಸ್ಸಿಂಗ್ ಟ್ರೇ ಹಿಡಿದು ಒಬ್ಬ ಸಹಾಯಕ .ಅದರಲ್ಲಿ dettol  ದ್ರಾವಣ ದ  ಒಂದು ಪಾತ್ರೆ . ಗಾಯ ತೊಳೆದು ಡ್ರೆಸ್ಸಿಂಗ್ ಬದಲಿಸಿ   ಕೈ ದೆತ್ತೊಲ್ ದ್ರಾವಣದಲ್ಲಿ  ಅದ್ದಿ ಶುಚಿ ಮಾಡುವುದು .ಆಮೇಲೆ ಇಂಜೆಕ್ಷನ್ ,ನಂತರ  ರೌಂಡ್ಸ್ ,ಇದರಲ್ಲಿ ಒಂದು  ಹಯರಾರ್ಕಿ ಇದೆ .ಪ್ರೊಫೆಸರ್  ನಂತರ ಅಸಿಸ್ಟೆಂಟ್ ಸ್,ಮತ್ತೆ ಪಿ ಜಿ ,ಲಾಸ್ಟ್ ಇಂಟರ್ನ್ .ಕೆಲಸ ಮಾಡಲು ಇಂಟರ್ನ್  ಬೈಗಳು ತಿನ್ನಲು ಇಂಟರ್ನ್ ಶ್ರೇಯಸ್ ಮಾತ್ರ ಹಿರಿಯರಿಗೆ .
ನಮ್ಮ ಸರ್ಜರಿ ಹೆಡ್ ಡಾ ಎಸ ಅರ್ ಕೌಲ್ ಗುಡ್ .ಮಿತ ಭಾಷಿ .ಮತ್ತು ಸಜ್ಜನ .ಒಳ್ಳೆಯ ಪ್ರಾಧ್ಯಾಪಕ ಮತ್ತು ಸರ್ಜನ್ .



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ