ರೋಗಿಯ ತಪಾಸಣೆಯಲ್ಲಿ ಮೊದಲ ಮತ್ತು ಪ್ರಾಮುಖ್ಯ ಅಂಗ ರೋಗ ಚರಿತ್ರೆ.
ಇತರಲ್ಲಿ ಪ್ರಸ್ತುತ ರೋಗದ ವಿವರ ,ಹಳೇ ಕಾಯಿಲೆಗಳು ,ಕುಟುಂಬ ದ ಸದಸ್ಯರ
ಅನಾರೋಗ್ಯ ಮತ್ತು ಔಷಧಿ ಸೇವನೆ ವಿವರ ಕೇಳಿ ತಿಳಿಯಬೇಕು .ಇದರಿಂದ
ರೋಗ ಪತ್ತೆ ಹಚ್ಚುವುದು ಸುಲಭವಾಗುವುದು .ಉದಾಹರಣೆಗೆ ತಂದೆ ತಾಯಿಗೆ
ಅಸ್ಥಮಾ ಇದ್ದರೆ ಮಕ್ಕಳಲ್ಲೂ ದಮ್ಮಿಗೆ ಅದುವೇ ಕಾರಣ ಇರ ಬಹುದು .ಅದೇ
ರೀತಿ ನೋವಿನ ಔಷಧಿ ತಿನ್ನುವವರಿಗೆ ಹೊಟ್ಟೆ ನೋವು ಬಂದರೆ ಅದು ಗ್ಯಾಸ್ಟ್ರಿಕ್
ಇರ ಬಹುದು .
ಕೆಲವು ವಿವಾಹಿತ ಮಹಿಳೆಯರು ತಲೆ ನೋವು ಎಂದು ಬರುತ್ತಾರೆ .ಅವರಿಗೆ
ನಾವು ನಿಮ್ಮ ಗಂಡ ಎಲ್ಲಿ ಇರುವುದು ಎಂದು ಕೇಳುತ್ತೇವೆ .ತಲೆ ನೋವಿಗೂ
ಗಂಡನಿಗೂ ಎಲ್ಲಿಯ ಸಂಭಂದ ಎಂದು ನೀವು ಕೇಳ ಬಹುದು .ಉಂಡಾಡಿ
ತಲೆಹರಟೆ ಗಂಡ ತಲೆ ಶೂಲೆಗೆ ಕಾರಣ ಇರ ಬಹುದಾದರೂ ಗಂಡ ದೂರದ
ಊರಿನಲ್ಲಿ ಇರುವುದು (ಇದನ್ನು ನೀವು ಬೇಕಾದರೆ ಗಂಡಾಂತರ ಎಂದು ಕರೆಯಿರಿ
ಗಂಡ ಹೆಂಡತಿ ನಡುವೆ ದೂರದ ಅಂತರ )ಬಹಳ ಮಂದಿ ಹೆಂಗಳೆಯರ ತಲೆ
ನೋವಿಗೆ ನಿಜಕ್ಕೂ ಕಾರಣ .ಗಲ್ಫ್ ನಾಡಿನಲ್ಲಿ ಏಕಾಂಗಿಯಾಗಿ ನೆಲೆಸಿರುವ
ಪತಿಯಂದಿರ ಕುಟುಂಬದಲ್ಲಿ ಕಂಡು ಬರುವ ಕಾಯಿಲೆ .ವೈದ್ಯ ಶಾಸ್ತ್ರದಲ್ಲಿ
ಇದನ್ನು ಉದ್ವೇಗದ ತಲೆನೋವಿನ ಗುಂಪಿಗೆ ಸೇರಿಸಿದ್ದಾರೆ .
ಈ ಪರಿಯಲ್ಲಿ ಚರಿತ್ರೆ ಕೇಳುವಾಗ ನಮ್ಮ ಗಮನ ಮುಖ್ಯ ಕತೆಯಿಂದ ದೂರ
ಹೋಗುವುದೂ ಇದೆ.ಉದಾಹರಣೆಗೆ ಒಬ್ಬರು ಕಾಲು ನೋವಿಗೆ ಔಷಧಿಗೆಂದು
ಬಂದ ಅಜ್ಜಿ .ತಾನು ಉಪ್ಪಿನಕಾಯಿಯನ್ನು ತೆಗಯಲು ಸ್ಟೂಲ್ ಇಟ್ಟು ಭರಣಿಗೆ
ಕೈ ಹಾಕುವಷ್ಟರಲ್ಲ್ಲಿ ಜಾರಿ ಬಿದ್ದೆ ಎಂದು ಹೇಳಿದಾಗ ನನಗೆ ಅವರ ಕಾಲು ನೋವು
ಮರೆತು ಉಪ್ಪಿನ ಕಾಯಿ ಭರಣಿಗೆ ಏನಾಯಿತು ,ಕಡೆಗೆ ಊಟಕ್ಕೆ ಉಪ್ಪಿನ ಕಾಯಿ
ಸಿಕ್ಕಿತೋ ಎಂಬೆಲ್ಲಾ ಪ್ರಶ್ನೆಗಳು ಉದ್ಭವಿಸುತ್ತವೆ .ಇದೇ ರೀತಿ ಹಾಲು ಕರೆಯಲು
ಕರುವನ್ನು ಹಸುವಿನ ಬಳಿ ಕೊಂಡು ಹೋಗುವಾಗ ಹಗ್ಗ ಕಾಲಿಗೆ ಸಿಕ್ಕಿ ಬಿದ್ದೆ
ಎಂದಾಗ ಕರುವಿಗೆ ಏನಾಯಿತು ? ಹಾಲು ಕರೆದರೇ ಬಿಟ್ಟರೇ ಎಂಬ ಕುತೂಹಲ .
ನಾಯಿ ಕಚ್ಚಿ ರಕ್ತ ಸ್ರಾವ ಮತ್ತು ನೋವಿನಿಂದ ರೋಗಿ ಬಂದಾಗ ನಾಯಿಯ
ಅರೋಗ್ಯ ಹೇಗಿದೇ? ಎಂದು ಕೇಳಿದರೆ ರೋಗಿಯು ನಾನು ಇಲ್ಲಿ ನೋವಿಂದ
ಸಾಯ ಬಿದ್ದಿರುವಾಗ ಇವರಿಗೆ ನಾಯಿಯ ಆರೋಗ್ಯದ ಚಿಂತೆ .ಅಲ್ಲದೆ ಚುಚ್ಚಿಸಿ
ಕೊಂಡು ಹೋಗುವಾಗ ನಾಯಿಯನ್ನು ಚೆನ್ನಾಗಿ ಗಮನಿಸಿ ಅದಕ್ಕೆ ಏನಾದರೂ
ಆದರೆ ಕೂಡಲೇ ಬರುವುದು ಎಂದಾಗ ಅವರ ಸಿಟ್ಟು ಇನ್ನೂ ಏರದಿರುತ್ತದೆಯೇ ?
ವೈದ್ಯ ವಿದ್ಯಾರ್ಥಿಗಳು ರೋಗ ಚರಿತ್ರೆ ತೆಗೆದು ಕೊಳ್ಳುವಾಗ
ಹೀಗೆ ಆಗುವುದುಂಟು ,ಉದಾಹರಣೆಗೆ ಮರದಿಂದ ಬಿದ್ದು ಗಾಯವಾಗಿ ಬಂದವನ
ಬಳಿ ನಿಮ್ಮ ಮನೆಯಲ್ಲಿ ಯಾರಾದರೂ ಮರದಿಂದ ಬಿದ್ದಿದ್ದಾರೆಯೇ .ಅಥವಾ
ಹಾವು ಕಡಿದು ಬಂದವರ ಬಳಿ ನಿಮ್ಮ ಮನೆಯಲ್ಲಿ ಹಾವು ಕಚ್ಚಿದ ಇತಿಹಾಸ
ಇದೆಯೇ ಇತ್ಯಾದಿ ಕೇಳಿದರೆ ತಪ್ಪಿಲ್ಲದಿದ್ದರೂ ಅಭಾಸ ವಾಗುವುದು
ಬಾಲಂಗೋಚಿ : ಮೊನ್ನೆ ಬಸ್ಸಿನಲ್ಲಿ ಪುತ್ತೂರಿನಿಂದ ಮಂಗಳೂರಿಗೆ
ಪ್ರಯಾಣಿಸುತ್ತಿದ್ದೆ .ನನ್ನ ಮುಂದಿನ ಸೀಟಿನಲ್ಲಿ ಕುಳಿತವರ ಸಂಭಾಷಣೆ .
ನಿಮ್ಮ ಅತ್ತೆ ಹೇಗಿದ್ದಾರೆ ?
'ಅವರೋ ಅವರ ಕತೆ ಏನು ಹೇಳುವುದು ,ಯಾವ ಡಾಕ್ಟರಿಗೆ ತೋರಿಸಿದರೂ
ರೋಗದ ಮೂಲ ತಿಳಿಯಲಿಲ್ಲ .ಕೊನೆಗೆ ಪುತ್ತೂರಿನಲ್ಲಿ ಎ ಪಿ ಭಟ್ ಎಂಬವರಿಗೆ
ತೋರಿಸಿದೆ .ಐದೇ ದಿನದ ಚಿಕಿತ್ಸೆ .
ಏನು ಗುಣವಾಯಿತೋ?
ಇಲ್ಲ ದೇವರ ಪಾದ ಸೇರಿದರು .
ಹೌದಾ ಮಾರಾಯರೇ ನನಗೂ ಅವರ ಅಡ್ರೆಸ್ ಕೊಡಿ ,ನನ್ನ ಅತ್ತೆಯನ್ನು ತೋರಿಸ
ಬೇಕು .ಅಂದ ಹಾಗೆ ರಶ್ ಇರುತ್ತದೋ .
:ಇಲ್ಲಪ್ಪ ,ಸುಮ್ಮನೆ ಕಂಪ್ಯೂಟರ್ ನಲ್ಲಿ ಕುಟ್ಟುತ್ತಾ ಇರುತ್ತಾರೆ .ಟೋಕನ್ ಏನೂ
ಬೇಡ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ