ಬೆಂಬಲಿಗರು

ಗುರುವಾರ, ಏಪ್ರಿಲ್ 2, 2015

ಆಶಿರ್ವಾದವೇ ಉಡುಗೊರೆ

ಇತ್ತೀಚಿಗೆ ಆಮಂತ್ರಣ ಪತ್ರಿಕೆಗಳಲ್ಲಿ   ಆಶಿರ್ವಾದವೇ ಉಡುಗೊರೆ  , ಪ್ರೆಸೆಂಟ್ಸ್ 

ಇನ್  ಬ್ಲೆಸ್ಸಿ೦ ಗ್ಸ್  ಓನ್ಲಿ ಇತ್ಯಾದಿಯಾಗಿ ಎಚ್ಚರಿಸುವುದು  ಸಾಮಾನ್ಯವಾಗಿದೆ. 

ಆಹ್ವಾನಿತರು ಉಡುಗೊರೆ ಕೊಡಬೇಕಲ್ಲಾ ಎಂದು ಚಿಂತಿಸಿ ಮದುವೆಗೆ ಹೋಗದೇ

ಇರುವುದು ಬೇಡ ಎಂಬ ಸದಾಶಯ ಇರ ಬಹುದು .ನಮ್ಮ ಮನೆಯಲ್ಲಿಯೇ ಬೇಡದ 

ಬಟ್ಟೆ ತಟ್ಟೆ ಗಡಿಯಾರಗಳು ತುಂಬಿವೆ ಇನ್ನು ನೀವೂ ಇನ್ನಷ್ಟು ಕೊಟ್ಟರೆ  ಏನು 

ಮಾಡುವುದು ? ಎಂಬ ಚಿಂತೆಯೂ ಇದರ ಹಿಂದೆ ಇರ ಬಹುದು .ಏನೇ ಇರಲಿ .

       ಕೆಲವು ಇಂಗ್ಲಿಷ್ ಆಮಂತ್ರಣ ಪತ್ರಿಕೆಯಲ್ಲಿ  ಅರ್ ಎಸ್ ವಿ ಪಿ .(RSVP) 

ಎಂದು ಬರೆದಿರುತ್ತಾರೆ .ಇದು ಫ್ರೆಂಚ್ ನುಡಿಗಟ್ಟು ಒಂದರ ಅಪಭ್ರ೦ಶ.ಅಂದರೆ 

ಸಾಧ್ಯವಾದರೆ ಈ ಪತ್ರಕ್ಕೆ ಉತ್ತರಿಸಿರಿ .ಎಂದರೆ ನೀವು  ಬರುತ್ತೀರೋ ಇಲ್ಲ್ಲವೋ 

ತಿಳಿಸಿ .ಅದರ ಪ್ರಕಾರ  ಅತಿಥೇಯರು ಔತಣ ಏರ್ಪಡಿಸುವರು .ನಮ್ಮಲ್ಲಿ  ಈ

ಪದ್ಧತಿ ಇದ್ದರೆ ಎಷ್ಟೋ ಆಹಾರ ಪದಾರ್ಥ ನಷ್ಟ ವಾಗುವುದನ್ನು ತಪ್ಪಿಸ ಬಹುದು .

ಖ್ಯಾತ ಲೇಖಕ ರೊಬ್ಬರು ತನ್ನ ಏಳಮೆಯಲ್ಲಿ  RSVP ಯನ್ನು ರಸಂ ಸಾಂಭಾರ್ 

ವಡೆ ಪೊಂಗಲ್ ಎಂದು ಮೆನು ಇರಬೇಕು ಎಂದು ಭಾವಿಸಿದ್ದಾಗಿ  ತಮ್ಮ  ಆತ್ಮ 

ಚರಿತ್ರೆಯಲ್ಲಿ ಬರೆದಿದ್ದಾರೆ . 

ಇನ್ನು ಕೆಲವು ಆಮಂತ್ರಣ ಪತ್ರಿಕೆಯಲ್ಲಿ  ವಿಷಾದಿಸುವುದಿದ್ದರೆ  ಮಾತ್ರ ಉತ್ತರಿಸಿ 

ಎಂದು ಬರೆದಿರುತ್ತಾರೆ .ರಿಪ್ಲೈ ಇಫ್  ರಿಗ್ರೆಟ್ಸ್.ಎಂದರೆ  ನಿಮಗೆ ಬರಲು 

ಅನಾನುಕೂಲವಿದ್ದಲ್ಲಿ  ಮಾತ್ರ ಉತ್ತರಿಸಿರಿ .ಅಂದರೆ ನಿಮ್ಮಿಂದ ಪ್ರತಿಕ್ರಿಯೆ 

ಬರದಿದ್ದಲ್ಲಿ  ಭೋಜನ  ಲೆಕ್ಕ ಕ್ಕೆ ನಿಮ್ಮನ್ನೂ  ಸೇರಿಸಲಾಗುವುದು ಎಂದರ್ಥ .ಅಲ್ಲ 

ಅವರ ಮಗಳಿಗೋ ಮಗನಿಗೋ ಮದುವೆ ಆದರೆ ನೀವೇಕೆ ವಿಷಾದಿಸ ಬೇಕು 

ಎಂದು ಚಿಂತೆ ಮಾಡ ಬೇಡಿ .

 ಆಯಿತು  ನೀವು ಆಮಂತ್ರಣ ಬಂತು ಎಂದು  ನೀವು  ಮುಹೂ ರ್ಥ ಕ್ಕೆ ಸರಿಯಾಗಿ 

ಹೋದರೆ  ಎಲ್ಲರೂ ಮೇಲೆ ಕೆಳಗೆ ನೋಡುವರು .ನಿಮ್ಮ ಪ್ರತಿಷ್ಠೆ  ಉಳಿಯ 

ಬೇಕಾದರೆ  ಭೋಜನ ವೇಳೆ ತೆರಳಿ ಮದು ಮಕ್ಕಳಿಗೆ  ಶುಭ ಹಾರೈಸುವ  ಶಾಸ್ತ್ರ 

ಮಾಡ ಬೇಕು .ಅಲ್ಲಿಯೂ ನಿಮ್ಮಂತೆ ಬಂದವರ ಉದ್ದ  ಕ್ಯೂ ಇರುವುದು .ಕೆಲವು 

ಬುದ್ದಿವಂತರು ಸಿನೆಮಾ   ಹಾಲ್  ,ರೈಲ್ವೆ ಟಿಕೆಟ್ ಕೌಂಟರ್ ನಲ್ಲಿ ಮಾಡಿದಂತೆ 

 ಇಲ್ಲೂ  ಕ್ಯೂ ಜಂಪ್ ಮಾಡುವರು .ಅಂತೂ ನಿಮ್ಮ ಸರದಿ ಬರುವಾಗ ನಿನಗಿಂತ 

ಮೊದಲು   ಬಂದ  ವಿ ಆಯ ಪಿ ಯವರ ವೀಡಿಯೊ ಆಗುತ್ತಿರುತ್ತದೆ .ನಿಮ್ಮನ್ನು 

ಎಲ್ಲರೂ ಬದಿಗೆ ತಳ್ಳುವರು .ಬೇಸರ ಮಾಡ ಬೇಡಿ .ಒಳ್ಳೆಯ ಊಟ ನಿಮಗಾಗಿ 

ಕಾದಿರುತ್ತದೆ .

ಒಂದು ಪ್ರಸಿದ್ದ ಉದ್ಯಮಿಯ ಮಗನ ಮದುವೆಗೆ ಹೋಗಿದ್ದೆ .ಇದ್ದ ಬದ್ದವರಿಗೆಲ್ಲ್ಲಾ 

ಆಮಂತ್ರಣ ಕೊಟ್ಟಿದ್ದರು .ಮದು ಮಕ್ಕಳಿಗೆ  ಹಾರೈಸಲು  ಹೋದಾಗ  ತಂದೆ 

ತಾಯಿ ಯಥಾ ಪ್ರಕಾರ ಊಟ ಮಾಡಿಯೇ ಹೋಗಿ ಎಂದರು .ಕೆಳಗೆ  ಭೋಜನ 

ಶಾಲೆಗೆ ಹೋದರೆ  ಎಲ್ಲಾ ಖಾಲಿ .ಹಸಿದು ಕೊಂಡೆ ಮನೆಗೆ ಮರಳಿದೆವು .

 ಇದಕ್ಕೆ ಪರಿಹಾರ ಮೊದಲು ಊಟಕ್ಕೆ ಹೋಗುವುದು .ಹೇಗೂ ವೀಡಿಯೊ  ದಲ್ಲಿ 

ನೀವು ಊಟ ಮಾಡುವ ಚಿತ್ರ ನಿಮ್ಮ ಹಾಜರಿಯನ್ನು  ಸಾಕ್ಷಿಕರಿಸುತ್ತ್ತದೆ .

                           ಮೊದಲು ನಮ್ಮ ಕಡೆ ಮದುವೆ ಮನೆಯಲ್ಲಿ  ಅಡಿಕೆ 

ಭತ್ತ ಬೆಳೆಯ ಬಗ್ಗೆ  ,ಕುಟುಂಬ ದವರ ಆರೋಗ್ಯದ ಬಗ್ಗೆ  ಉಭಯಕುಶಲೋಪರಿ

ನಡೆಯುತ್ತಿತ್ತು .ಈಗ   ಸಿ ಇ ಟಿ., ಕ್ಯಾಂಪಸ್ ಅಗಿದೋ ,ಅಮೇರಿಕಾ ಬಾಳಂತನ

ಇತ್ಯಾದಿಗಳು  ಮೇಲಿನ ವಿಷಯಗಳ ಜಾಗ ಆಕ್ರಮಿಸಿವೆ .ಅಜ್ಜ ಅಜ್ಜಿಯವರಿಗೆ 

ಹಿಂದಿನ ಹಾಗೆ ಅಗ್ರ ಮಣೆ   ಕಾಣೆಯಾಗಿದೆ .. 
         

ನಿಮಗೆ ಅನಿಸಿದೆಯೋ ಗೊತ್ತಿಲ್ಲ ,ಹಲವು  ಕಾರ್ಯಕ್ರಮಗಳಿಗೆ  ಹೋಗಿ ಬಂದ 

ಮೇಲೆ  ಅಲ್ಲಿ ಹೋಗದಿದ್ದರೂ  ನಡೆಯುತ್ತಿತ್ತು  ಎಂದು ಅನಿಸುತ್ತದೆ .ಕೆಲವು 

ಕಡೆ ನಮ್ಮ ಅದೃಷ್ಟ ಒಳ್ಳೆಯದಿದ್ದರೆ  ಇಲ್ಲಿಗೆ ಬಾರದಿದ್ದರೆ ಎಷ್ಟು ಕಳೆದು ಕೊಳ್ಳುತ್ತಿದ್ದ್ದೆ 

ಎಂದೂ ತೋರಿದ್ದುಂಟು .





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ