ಬೆಂಬಲಿಗರು

ಗುರುವಾರ, ಏಪ್ರಿಲ್ 16, 2015

ಕೆ ಎಂ ಸಿ ಹೌಸ್ ಸರ್ಜನ್ ಸಿ ನೆನಪುಗಳು

ಕೆ ಎಂ ಸಿ ಹುಬ್ಬಳ್ಳಿ ಯ ಇಂಟರ್ನ್ ಶಿಪ್ ದಿನಗಳು .ಮೆಡಿಕಲ್ ಓ ಪಿ ಡಿ ಯಾವತ್ತೂ 

ಭಾರೀ ರಶ್ .ಕೊನೆ ಕೊನೆಗೆ ಬಂದವರನ್ನು ಸರಿಯಾಗಿ ಪರೀಕ್ಷಿಸಲೂ ಸುಸ್ತು .

ಅದ್ದರಿಂದ ಸ್ತೆತೋಸ್ಕಾಪ್  ಎದೆಗೆ ಮುಟ್ಟಿಸಿ  ಬಿ ಕಾಂಪ್ಲೆಕ್ಸ್ ಇಂಜೆಕ್ಷನ್ ಬರೆದು 

ಸಾಗ ಹಾಕುವುದು . ಕೆಲವರು ಗಂಟು ನೋವು ಎಂದು ಬರುವರು .ಕೂಡಲೇ 

ಓ ಪಿ ಹಾಳೆಯಲ್ಲಿ ? ರುಮಾಟಿಕ್ ಫೀವರ್? ಬರೆದು ರಕ್ತ  ಪರೀಕ್ಷೆ  ಮಾಡಿ ಬರ್ರೀ 

ಎಂದು ಕಳುಹಿಸುತ್ತಿದ್ದೆವು. ಮರು ದಿನ  ಅದೇ ವ್ಯಕ್ತಿ  ಪೇಟೆ ಕೆಲಸ ಎಲ್ಲಾ ಮುಗಿಸಿ 

ಮಧ್ಯಾಹ್ನ  ಬಂದಾಗ ಬೇರೆ ಯೂನಿಟ್ ನ ಡಾಕ್ಟರ್ಸ್ .ಅವನ ಓ ಪಿ ಹಾಳೆ ನೋಡಿ 

ಏನೂ ಪರೀಕ್ಷೆ ಮಾಡದೆಯೇ  ನೋನ್ ಕೇಸ್ ಆಫ್ ರುಮಾಟಿಕ್  ಫಿವರ್  ಎಂದು 

ಬರೆದು  ಪೆನಿಸಿಲಿನ್ ಇಂಜೆಕ್ಷನ್ ತೆಗೆದು ಕೊಳ್ಳಲು ಇಂಜೆಕ್ಷನ್ ರೂಂ ಗೆ  ಸಾಗ 

ಹಾಕುತ್ತಿದ್ದರು .ಮುಂದೊಮ್ಮೆ ಆತ ಬಂದಾಗ  ಅವನ ಓ ಪಿ ಹಾಳೆಯಲ್ಲಿ  

ಓಲ್ಡ್ ಕೇಸ್ ಆಫ್ ರುಮಾಟಿಕ್ ಫೀವರ್ ಎಂದು ಬರೆಯುವರು .ಸುಮ್ಮನೆ ಮೈ ಕೈ 

ನೋವು ಇದ್ದವರು  ರುಮ್ಮಾಟಿಕ್ ಜ್ವರ ರೋಗಿಗಳಾಗುವರು .

   ಸರ್ಜರಿ  ಓ ಪಿ ಡಿ ಯಲ್ಲಿ  ಗಾಯಗಳಿಗೆ  ಡ್ರೆಸ್ಸಿಂಗ್ ಮಾಡಿಸಲು ಬಹಳ ಮಂದಿ 

ಬರುತ್ತಾರೆ ,ಅದರಲ್ಲಿ    ಅಲ್ಸರ್ - ಕ್ಲೀನ್ ಅಂಡ್ ಡ್ರೆಸ್ ಎಂದು ಗೀಚಿ  ಡ್ರೆಸ್ಸಿಂಗ್ 

ರೂಮಿಗೆ ಕಳು ಹಿಸುವುದು . ಒಮ್ಮೆ  ಪೆಪ್ತಿಕ್ ಅಲ್ಸರ್ (ಹೊಟ್ಟೆ ಹುಣ್ಣು ) ರೋಗಿಯ 


ಹಾಳೆಯಲ್ಲಿ  ಪೆಪ್ತಿಕ್  ಶಬ್ದ ಬಿಟ್ಟು ಹೋಗಿ  ವೈದ್ಯರೊಬ್ಬರು   ಅಲ್ಸರ್ - ಕ್ಲೀನ್ ಅಂಡ್ 

ಡ್ರೆಸ್ ಎಂದು  ಕಳುಸಿದ್ದೂ ಇದೆ .


ವಾರ್ಡ್ ನಲ್ಲಿ   ಓ ಡಿ ಎಂದರೆ  ದಿನಕ್ಕೆ ಒಂದು ಭಾರಿ   ಕೊಡುವ ಚುಚ್ಚು ಮದ್ದು 

ನಾವು ಹೌಸ್ ಸರ್ಜನ್ ಗಳು ಮತ್ತು  ಉಳಿದ ಇಂಜೆಕ್ಷನ್  ವಾರ್ಡ್ ಸಿಸ್ಟರ್ಸ್ 

ಕೊಡಬೇಕಿತ್ತು .ಅದಕ್ಕೆ  ಕೆಲವರು ಮರಿ ವೈದ್ಯರು ಅಡ್ಮಿಟ್ ಮಾಡುವಾಗ  

ಎಲ್ಲಾ ಇಂಜೆಕ್ಷನ್ ಗಳನ್ನೂ  ಬಿ ಡಿ(ದಿನಕ್ಕೆ ಎರಡು ಬಾರಿ) ಅಥವಾ ಟಿ ಐಡಿ ಎಂದು 

ಬರೆಯುತ್ತಿದ್ದರು.

 ಐಸೊಲೆಶನ್  ವಾರ್ಡ್ ಎಂಬುದು ಗಾಳಿ ಬೆಳಕು ಇಲ್ಲದ   ನೆಲ ಮಾಳಿಗೆಯಲ್ಲಿ 

ಇತ್ತು .ಇಲ್ಲಿ ಹಲವು ಸಾರಿ ರೋಗಿ ಮೃತ ಪಟ್ಟು  ಬಹಳ ಸಮಯದ ನಂತರ 

ರೋಗಿ  ಸೀರಿಯಸ್  ಮೇಲುಸಿರು ಬಿಡುತ್ತಿದ್ದಾರೆ ಎಂದು ನಮಗೆ ಕಾಲ್ ಬರುತ್ತಿತ್ತು 

ನಾವು ಹೋಗಿ ನೋಡಿದರೆ ರೋಗಿಗೆ ರೈಗರ್ ಮಾರ್ಟಿಸ್ ಎಂದರೆ  ಸತ್ತು  ಹಲವು 

ಗಂಟೆಗಳ ತರುವಾಯ ಆಗುವ ಮಾಂಸ ಖಂಡ ಗಳ  ಸೆಟೆತ ಆಗಿರುವುದು .ಇಲ್ಲಿ 

ಕೆಲವೊಮ್ಮೆ  ದೊಡ್ಡ ಸಿರಿಂಜ್ ನಲ್ಲಿ ಇಂಜೆಕ್ಷನ್  ಲೋಡ್ ಮಾಡಿ  ಒಬ್ಬೊಬ್ಬರಿಗೆ 

ಒಂದೊಂದು ಸಿ ಸಿ ಕೊಡುತ್ತಿದ್ದವರೂ ಇಲ್ಲದಿಲ್ಲ .ಆದರೂ ರೋಗಿಗಳು ಬದುಕಿ 

ಗುಣಮುಖರಾದರು .

ಹೌಸ್ ಸರ್ಜನ್ ಗಳ ಕೆಲಸ  ತುಂಬಿದ ಮನೆಯ ಗೃಹಿಣಿಯ  ಕೆಲಸಂತೆ 

ಮುಗಿಯುವುದು ಎಂದು ಇರಲಿಲ್ಲ .ರೋಗಿಯ  ರಕ್ತ ಲ್ಯಾಬ್ ಗೆ ಒಯ್ಯುವುದು 

ಬ್ಲಡ್ ಬ್ಯಾಂಕ್ ನಲ್ಲಿ  ರಕ್ತ ಬೇಡುವುದು ,ಕ್ರಾಸ್ ಮ್ಯಾಚಿಂಗ್ ಮಾಡುವುದು 

ಕ್ಷ ರೇ ರೂಂ ನಲ್ಲಿ  ಸ್ಕ್ರೀನಿಂಗ್ (ಲೈವ್ ಎಕ್ಷ ರೇ ) ಏನು ಉಂಟು ಏನು ಇಲ್ಲಾ .

ಆಸ್ಪತ್ರೆಯ ತಳ ಮಹಡಿಯಲ್ಲಿ ಒಂದು  ಸಾರ್ವಜನಿಕ ಲೈಬ್ರರಿ  ಇತ್ತು .ಬಾತ್ 

ರೂಮನ್ನ್ನು  ವಾಚನಾಲಯ  ಆಗಿ  ಪರಿವರ್ತಿಸಿದ್ದರು ,.ನನಗೆ ಅದು ಬಹಳ 

ಅನುಕೂಲ ಆಯಿತು .

ನಾವು ಇಂಟರ್ನ್ ಆಗಿದ್ದಾಗ ನರ ಗುಂದ ರೈತ ಬಂಡಾಯ ಆಯಿತು .ಉದ್ರಿಕ್ತ 

ರೈತರು ಸಿಕ್ಕಿದ ಪೋಲಿಸ್ ,ರೆವೆನ್ಯೂ ಅಧಿಕಾರಿಗಳನ್ನೆಲ್ಲ  ತದುಕಿ ಬಾವಿ ಕೆರೆಗಳಿಗೆ 

ಎಸೆದರು .ಆಸ್ಪತ್ರೆಯಲ್ಲಿ ಪೋಲಿಸಿನವರ  ತಲೆ ಬುರುಡೆ  ಓಪನ್ ಮಾಡಿದ್ದೇ

ಮಾಡಿದ್ದು .ಆಗ  ಸಿ ಟಿ ಸ್ಕ್ಯಾನ್ ಇರಲಿಲ್ಲ .ತಲೆ ಬುರುಡೆ ಓಪನ್ ಮಾಡುವ 

ಯಂತ್ರ ಗಳೂ ಇಲ್ಲ್ಲ ,ಉಳಿ ,ಮತ್ತು ಗರಗಸದಂತ  ಉಪಕರಣ ಬಳಸಿ ದಿನ ರಾತ್ರಿ 

ದುಡಿದೆವು . ಮೂಳೆ ತಜ್ಞರಿಗೂ ಬಿಡುವಿಲ್ಲ .

ಮಕ್ಕಳ ಸರ್ಜರಿ ಎಂಬ ವಿಭಾಗ ,ಇಲ್ಲಿ ಸಂಕೀರ್ಣ ಶಸ್ತ್ರ ಚಿಕಿತ್ಸೆಗಳು .ಆಪರೇಷನ್ 

ಆದ ಬಳಿಕ ನಾವು ಮಗುವಿನ  ಮೂತ್ರವನ್ನು ಅಳೆಯುವುದು ,ಆಗಾಗ ರಕ್ತ ದ 

ಲವಣಗಳ ಪರೀಕ್ಷೆಗಾಗಿ  ಲಾಬ್ ಗೆ ಓಡುವುದು .ಇಸ್ಟೆಲ್ಲಾ ಆದರೂ  ಬಹಳಷ್ಟು 

ಮಕ್ಕಳು ಸಾವನ್ನು ಆಪ್ಪುತ್ತಿದ್ದವು .ಆಗ ಆಪರೇಷನ್ ಮಾಡಿದ ಸರ್ಜನ್ ನಮ್ಮನ್ನು

ಬೈಯ್ಯುತ್ತಿದ್ದರು ,

ಇದನ್ನೆಲ್ಲಾ ಓದಿ ಮೆಡಿಕಲ್ ಕಾಲೇಜ್ ಆಸ್ಪತ್ರೆ ಚಿಕಿತ್ಸೆ ಅಪಾಯಕಾರಿ ಎಂದು 

ತಿಳಿಯಬೇಡಿ.ಆಗಿನ್ನೂ ಕೆ ಎಂ ಸಿ ಗೆ ಒಳ್ಳೆಯ ಹೆಸರು ಮತ್ತು  ಸೇವಾ ಮನೋಭಾವ 

ದ  ಅಧ್ಯಾಪಕ ವೃಂದ ಇತ್ತು .ಒಳ್ಳೆಯ ನರ್ಸಿಂಗ್ ಸ್ಟಾಫ್ ಇದ್ದರು .ಖ್ಯಾತ 

 ವೈದ್ಯ ಲೇಖಕ ಅತುಲ್ ಘವಂಡೆ ಅವರ ಪ್ರಸಿದ್ದ ಕೃತಿ  ಕಾಮ್ಪ್ಲಿಕೆಶನ್  ನಲ್ಲಿ 

ಕಲಿಯುವ ವೈದ್ಯರು ಇರುವ ಅಸ್ಪತ್ರೆಯ ಮರಣ ಪ್ರಮಾಣ  ಕೇವಲ ನುರಿತ 

ವೈದ್ಯರು ಸೇವೆ ಯಲ್ಲಿರುವ ಅಸ್ಪತ್ರೆಗಿಂತ ಕಮ್ಮಿ ಎಂದು ಕಂಡು ಹಿಡಿದಿರುವ 

ಅಧ್ಯಯನ  ವನ್ನು ಉಲ್ಲೇಖಿಸಿದ್ದಾರೆ .









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ