ಬೆಂಬಲಿಗರು

ಶನಿವಾರ, ಏಪ್ರಿಲ್ 4, 2015

ಹಿರಿಯ ಬಾಳು ಬಾಳಿದ ಸರಳ ಜೀವಿಗಳು

ನಿನ್ನೆಯ ಪ್ರಜಾವಾಣಿ ಪತ್ರಿಕೆಯಲ್ಲಿ ರಾಮಚಂದ್ರ ಗುಹಾ ಇತ್ತೀಚಿಗೆ ನಿಧನರಾದ 

 ನಾರಾಯಣ್ ದೇಸಾಯಿ ಬಗ್ಗೆ ಬರೆದಿದ್ದರು .ಗಾಂಧೀಜಿಯವರ  ಆಪ್ತ ಕಾರ್ಯದರ್ಶಿ 

ಯಾಗಿದ್ದ  ಮಹಾದೇವ ದೇಸಾಯಿ ಅವರ ಪುತ್ರ .ಕೊನೆ ತನಕ ಗಾಂಧಿ ವಾದಿ 

ಯಾಗಿಯೇ ಬದುಕಿದವರು .ಗಾಂಧಿ ಬಗೆಗಿನ ಸೆಮಿನಾರ್ ಒಂದಕ್ಕೆ ದೆಹಲಿಗೆ 

ಬಂದಿದ್ದ ಗಣ್ಯರು ಕೊನೆ ದಿನ ವಿಮಾನ ಪಯಣದ ಟಿ ಎ ತೆಗೆದು ಕೊಳ್ಳುವ 

ಧಾವಂತ ಈ ಮನುಷ್ಯ ತಾನು ರೈಲಿನಲ್ಲಿ ಬಂದುದಾಗಿಯೂ ,ನನ್ನ ಮನೆಗೆ 

ಹೋಗಲು ನನಗೆ ಬೇರೆ ಹಣದ ಅವಶ್ಯ ಇಲ್ಲ ಎಂದು ಹೇಳಿದರು ಎಂದು ಬರೆದಿದ್ದಾರೆ .

ಸರಳ  ಜೀವನವನ್ನು  ತಮ್ಮ ಸಹಜ ಶೈಲಿ ಯಾಗಿ ಮಾಡಿಕೊಂಡ ಮಹನೀಯರು .

                        ಇದನ್ನು ಓದುವಾಗ ನನಗೆ ನಮ್ಮವರೇ ಆದ ಎಚ್ ನರಸಿಂಹಯ್ಯ 

ಅವರ ನೆನಪಾಯಿತು .ಅವರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಗಿದ್ದಾಗ 

ರಾಜ್ಯದಾದ್ಯಂತ  ಸಂಚರಿಸ ಬೇಕಿತ್ತು .ಸರಕಾರದ ಸಚಿವ ಸಮಾನ ಹುದ್ದೆ .ಆದರೂ 

ಅವರು ರೈಲಿನ ಎರಡನೇ ದರ್ಜೆಯಲ್ಲಿ ಸಂಚರಿಸಿ  ಅದೇ ದರ್ಜೆಯ  ಪ್ರಯಾಣ ಭತ್ತೆ 

ಪಡೆದರು .ಅಲ್ಲದೆ ತಮ್ಮ ಕಚೇರಿಗೆ ಬರುತ್ತಿದ್ದ ವೃತ್ತ ಪತ್ರಿಕೆಗಳ ಹಳೆಯ 

ಪ್ರತಿಗಳನ್ನು ಮಾರಿ ಸರಕಾರದ ಖಜಾನೆಗೆ ಪಾವತಿಸುತ್ತಿದ್ದರು .ಈ ವಿಷಯಗಳ 

ಬಗ್ಗ್ಗೆ ಅವರ ಜೀವನ ಚರಿತ್ರೆ ಹೋರಾಟದ ಬದುಕು ವಿನಲ್ಲಿ  ಬರೆದಿರುವರು .


                    ಲಾಲ್ ಬಹಾದುರ್ ಶಾಸ್ತ್ರೀಯವರೂ ಹೀಗೆಯೇ ಬದುಕಿದವರು .

ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ  ಮಂಗಳೂರಿಗೆ ಆಗಮಿಸಿದ್ದರು .ಆ ಸಮಯ 

ಕದ್ರಿ ಯ ಪ್ರವಾಸಿ ಬಂಗಲೆಯ  ಸಾಧಾರಣ  ಕೋಣೆಯಲ್ಲಿ ಉಳಕೊಂಡು  ಅಲ್ಲಿ 

ಇದ್ದ  ವಾತಾನುಕೂಲ  ಕೋಣೆಯನ್ನು ಬಂದಿದ್ದ ರಾಜ್ಯದ ಮುಖ್ಯ ಮಂತ್ರಿ 

ನಿಜಲಿಂಗಪ್ಪನವರಿಗೆ ಬಿಟ್ಟು ಕೊಟ್ಟರು .ಈ ಬಗ್ಗೆ ಆಗ  ಜಿಲ್ಲೆಯ ಜಿಲ್ಲಾಧಿಕಾರಿ 

ಯಾಗಿದ್ದು ಮುಂದೆ ಸರ್ಕಾರದ ಕಾರ್ಯದರ್ಶಿಯಾಗಿ ನಿವೃತ್ತರಾದ  ಶ್ರೀ 

ರಾಮಚಂದ್ರನ್ ಅವರು ತಮ್ಮ  ವೃತ್ತಿ ಜೀವನ ಚಿತ್ರ ತಾಬೇದಾರಿ ಯಲ್ಲಿ  

ಉಲ್ಲೇಖಿಸಿದ್ದಾರೆ .

ಇಂತಹವರು ಈಗ ಬಹಳ ಅಪರೂಪ ಆಗುತ್ತಿದ್ದಾರೆ .ಸರಳತೆಯ ಭೋಧನೆ 

ಮಾಡುವವರು ಸ್ವಯಂ ಐಶಾರಮ ಜೀವನ ನಡೆಸುತ್ತಿದ್ದಾರೆ.ಸರಕಾರಿ ನೌಕರರೂ 

ಸಮಾಜದ ಹಣವನ್ನು ಬೇಕಾಬಿಟ್ಟಿ ಬಳಸುತ್ತಿದ್ದಾರೆ .ಸಮಾಜದ ಕೊನೆಯ ವ್ಯಕ್ತಿ 

ಕೂಡ ಗೌರವಾನ್ವಿತ ವಾಗಿ ಬದುಕುವ ಸನ್ನಿವೇಶ ಬರುವ ವರೆಗೂ ಉಳ್ಳವರು 

ತಮ್ಮ ಐಶ್ವರ್ಯ ಪ್ರದರ್ಶನ ಮಾಡುವುದು ಮಾನವಿಯತೆಗೂ ಸಮಾಜದ 

ಸ್ವಾಸ್ಥ್ಯಕ್ಕೂ ಒಳ್ಳೆಯದಲ್ಲ .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ