ಬೆಂಬಲಿಗರು

ಭಾನುವಾರ, ಮಾರ್ಚ್ 22, 2015

ಓದಿನ ಬಂಡಿ

ಓದುವ ಅಭ್ಯಾಸವೇ ಹಾಗೆ .ಹಾಡಿನ ಬಂಡಿಯಂತೆ ಒಂದು ಇನ್ನೊಂದಕ್ಕೆ  

ಇನ್ನೊಂದು ಮತ್ತೊಂದಕ್ಕೆ .ನನ್ನ ಈ ಉದಾಹರಣೆ ನೋಡಿ .

 


ಖ್ಯಾತ ಕನ್ನಡ  ಲೇಖಕ  ಕೆ ಟಿ ಗಟ್ಟಿ ಯವರ ಅರಗಿನ ಮನೆ ಕಾದಂಬರಿ ಓದಿದ್ದೆ .

ಇಥಿಯೋಪಿಯಾ ದೇಶದಲ್ಲಿ  ಉದ್ಯೋಗ ಅರಸಿ ಹೋದ ಕನ್ನಡಿಗನ ಕತೆ .ಒಂದು 

ರೀತಿಯಲ್ಲಿ ಜೀವನ ಕಥಾತ್ಮಕ ವಾದುದು.ಇಥಿಯೋಪಿಯ  ಆಫ್ರಿಕಾ ದಲ್ಲಿ  ತನ್ನದೇ 

ವಿಶಿಷ್ಟ ಚರಿತ್ರೆಯುಳ್ಳ ದೇಶ. ಅತ್ಯಧಿಕ  ಜನ ಸಾಂದ್ರತೆಯ ನಾಡು .ಅಲ್ಲಿಯ ವರ್ಣ 

ರಂಜಿತ ಚಕ್ರವರ್ತಿ.ಜನರ ವಿಚಿತ್ರ ಕಟ್ಟು ಪಾಡುಗಳು ,ಅದರೊಡನೆ ಇಲ್ಲಿಂದ  

ಉದ್ಯೋಗಕ್ಕಾಗಿ ಹೋದವರ ಕಷ್ಟ ಕಾರ್ಪಣ್ಯಗಳು ,ಇಲ್ಲಿರಲಲಾರೆ ,ನಾಡಿಗೆ ಮರಳಲೂ ಅರೆ ಎಂಬ 

ಸ್ಥಿತಿಗಳನ್ನು ಮನ ಮುಟ್ಟುವಂತೆ ಕಥಾ ರೂಪದಲ್ಲಿ ಹೇಳುವ ಕೃತಿ .

    ಇಥಿಯೋಪಿಯ ಬಗ್ಗೆ ನನ್ನ ಕುತೂಹಲ ನನ್ನನ್ನು   ವೈದ್ಯ ಸಾಹಿತಿ ಡಾ ಅಬ್ರಹಾಂ 

ವೆರ್ಗಿಸ್ ಅವರ ರೋಚಕ ಕಾದಂಬರಿ ಕಟಿಂಗ್ ಫಾರ್ ಸ್ಟೋನ್ಸ್ ಓದಲು 

ಪ್ರೇರೇಪಿಸಿತು .ಉತ್ತಮ ಕೃತಿ .
                    


    ಈ ಇಥಿಯೋಪಿಯ ಬೇಟೆ  ಶ್ರೀ ನಟವರ್ ಸಿಂಗ್ ಅವರ ಪುಸ್ತಕ  ವಾಕಿಂಗ್  ವಿಥ್ 

ಲಯನ್ಸ್ ಓದಲು ಪ್ರೇರೇಪಿಸಿತು .ಇದರಲ್ಲಿ  ಇಥಿಯೋಪಿಯ ದ ಚಕ್ರವರ್ತಿ  ಹಾಲೇ

ಸಾಲೆ  ಯವರ  ವಿಚಿತ್ರ ನಡವಳಿಕೆಗಳು ,ರಾಜ ಮತ್ತು ಪ್ರಜೆಗಳ ಅಸುರಕ್ಷಿತ  ಭಾವ 

ಇತ್ಯಾದಿಗಳನ್ನು ಚೆನ್ನಾಗಿ ಬರೆದಿದ್ದಾರೆ . ಈ ಪುಸ್ತಕದ ಮೂಲಕ  ನಟವರ್ ಸಿಂಗ್ 

ಎಂಬ  ಲೇಖಕನ ಪರಿಚಯ ಆಯಿತು (ಅಲ್ಲಿಯ ವರೆಗೆ ಅವರ ರಾಜತಾಂತ್ರಿಕ 

ಮತ್ತು ರಾಜಕೀಯ ಮುಖದ ಬಗ್ಗೆ ಮಾತ್ರ ಅರಿವಿತ್ತು ) ನಟವರ್ ಅವರ  ಯಾವದೇ 

ಕೃತಿ ಇರಲಿ  .ಅದರಲ್ಲಿ ಅವರು ಕಂಡ ಲೇಖಕರು ಓದಿದ ಪುಸ್ತಕಗಳ ಬಗ್ಗೆ 

ಮಾಹಿತಿ ಯಥೇಚ್ಛ ದೊರೆಯುತ್ತದೆ . ಮುಂದೆ ಅವರ  ವಿವಾದಾತ್ಮಕ  ಜೀವನ 

ಚರಿತ್ರೆ  ಒನ್ ಲೈಫ್ ಇಸ್ ನಾಟ್  ಇನಫ್  ನಲ್ಲಿ  ತಮ್ಮ  ರಾಜತಾಂತ್ರಿಕ 

ಜೀವನದ  ದಿನಗಳಲ್ಲಿ  ಚೀನಾ ದಲ್ಲಿ ಖ್ಯಾತ ಲೇಖಕಿ ಹಾನ್ ಸುಯಿನ್ ಅವರನ್ನು 


ಬೇಟಿಯಾಗಿ   ಅವರ ಜೊತೆ ಅಡ್ಡಾಡಿದ ಬಗ್ಗೆ  ಬರೆದಿರುವರಲ್ಲದೆ  ಈ ಲೇಖಕಿಯ 

ಜೀವನ ಚರಿತ್ರೆ   ಮೈ ಹೌಸ್ ಹ್ಯಾಸ್  ಗಾಟ್ ಟೂ ಡೋರ್ಸ್ ನಲ್ಲಿ  ತನ್ನ ಬಗ್ಗೆ 

ಬರೆದಿದ್ದಾರೆ  ಎಂಬ ಮಾಹಿತಿ ನೀಡಿದ್ದಾರೆ. 


ಇದರಿಂದ ನನಗೆ ಈ ಪುಸ್ತಕ ಕೊಂಡು ಓದುವ ಪ್ರೇರಣೆಯಾಯಿತು .ಹಾನ್ 

ಸುಯಿನ್  ಅವರದು ವರ್ಣಮಯ ಜೀವನ .ಚೈನೀಸ್ ತಂದೆ ಮತ್ತು ಬೆಲ್ಜಿಯಂ 

ತಾಯಿಗೆ ಜನಿಸಿದ ಅವರು  ಮೂರು ಭಾರಿ ವಿವಾಹವಾಗಿದ್ದು  ಅವರ ಕೊನೆ 

ಪತಿ ಭಾರತೀಯ  ವಿನ್ಸೆಂಟ್ ರಾಮಸ್ವಾಮಿ . ಹೊಂಗ್ ಕೊಂಗ್ , ಮಲಯಾ ,

ಚೀನಾ ಮತ್ತು ಅಮೇರಿಕಾ .ಭಾರತ ,ನೇಪಾಳ ,ಇಂಗ್ಲೆಂಡ್  ಮತ್ತು ಸ್ವಿಟ್ಜರ್ಲ್ಯಾಂಡ್

ದೇಶಗಳ ಚಿತ್ರಣ ಅವರ ಜೀವನ ಚರಿತ್ರೆಯಲ್ಲಿ ಇದೆ .ಅವರೊಬ್ಬ ವೈದ್ಯೆ 

ಹೊಂಗ್ ಕೊಂಗ್ ಮತ್ತು ಮಲಯಾ ಮತ್ತು ಸಿಂಗಾಪುರ್ ಗಳಲ್ಲಿ  ತಮ್ಮ 

ವೈದ್ಯಕೀಯ ವೃತ್ತಿ ಬಗ್ಗೆ ಚಿತ್ರಣ ನೀಡಿದ್ದಾರೆ , ಸಿಂಗಾಪುರ್ ನ  ಖ್ಯಾತ 

ನನ್ಯಂಗ್ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ತನ್ನ ಪಾತ್ರ ,  ಕಮ್ಯುನಿಸ್ಟ್  ಚೀನಾ ದ 

ನಾಯಕರಾದ ಚೌ ಏನ್ ಲಾಯ್ ಮತ್ತು ಮಾವೋ ,ನಮ್ಮ ನೆಹರು  ಅವರೊಡನೆ 

ಒಡನಾಟ ಇವುಗಳ ಬಗ್ಗೆ ಮಾಹಿತಿ ಇದೆ .



 ಈ ಪುಸ್ತಕದಲ್ಲಿ ಚೈನೀಸ್ ಲೇಖಕ ಲಾವೋ ಶೇ ಅವರ ಬಗ್ಗೆ  

ಬರೆದಿದ್ದಾರೆ,ಇದರಿಂದ  ಪ್ರೇರಿತನಾಗಿ  ಈ  ಲೇಖಕನ  ಕಾದಂಬರಿ 

ರಿಕ್ಷಾ ಬಾಯ್ ಕೊಂಡಿದ್ದೇನೆ .ಓದಿ ತಿಳಿಸುವೆನು .

            

(ಚಿತ್ರಗಳ ಮೂಲಗಳಿಗೆ ಅಭಾರಿ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ