ಪಿ ಸಿ ಅಲೆಕ್ಷಾನ್ದರ್
ಪಿ ಸಿ ಅಲೆಕ್ಷಾನ್ದರ್ ದೇಶ ಕಂಡ ಅತ್ಯುತ್ತಮ ರಾಜ್ಯಪಾಲರಲ್ಲಿ ಒಬ್ಬರು. ಬ್ರಿಟನ್ ನಲ್ಲಿ ನಮ್ಮ ರಾಯಭಾರಿಯಾಗಿದ್ದ್ದ
ಅವರನ್ನು ತಮಿಳ್ನಾಡಿನ ರಾಜ್ಯಪಾಲರಾಗಿ ಹೋಗುವಂತೆ ಆಗಿನ ಪ್ರಧಾನಿ ರಾಜೀವ ಗಾಂಧಿಯವರು ಕೇಳಿದಾಗ
ಇವರು ಹಾಕಿದ ಷರತ್ತು ಕೊಂಗ್ರೆಸ್ಸ್ ಪಕ್ಷದವರು ಆಡಳಿತ ದಲ್ಲಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಬೇಕು..
ಆಗ ತಮಿನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆಯಿತ್ತು.ರಾಜೀವ ಗಾಂಧಿಯವರು ಅಸ್ತು ಎಂದ ಮೇಲೆಯೇ ಆ ಹುದ್ದ್ದೆಯನ್ನು ಒಪ್ಪಿದರು.
ವಿಶ್ವೇಶ್ವರಯ್ಯನರು ದಿವಾನ ರಾಗುವ ಮೊದಲು ತಮ್ಮ ತಾಯಿಯರನ್ನು ತಮ್ಮ ಬಂಧು ಬಳಗದವರಿಗೆ ಅನುಕೂಲ
ಮಾಡುವಂತೆ ಕೇಳಿಕೊಳ್ಳಬಾರದೆಂಬ ಷರತ್ತು ಇಟ್ಟಿದ್ದರಂತೆ.ರಾಜ್ಯಪಾಲರಾಗಿ ಒಂದು ವರ್ಷ ರಾಷ್ಟ್ರಪತಿ ಆಳ್ವಿಕೆಯನ್ನು
ಎಲ್ಲರೂ ಬೇಶ್ ಎನ್ನುವಂತೆ ನಡೆಸಿದರು.ಅಲೆಕ್ಷಾನ್ದರ್ ಅಂತವರು ರಾಜ್ಯಪಾಲರಾಗಿದ್ದರೆ ಚುನಾಯಿತ ಪ್ರತಿನಿಧಿಗಳ
ಸರಕಾರಕ್ಕಿಂತಲೂ ಉತ್ತಮ ಎಂದು ಎಲ್ಲರೂ ಹೇಳುವಂತೆ ಆಯಿತು.
ಒಂದು ದಿನ ಇವರ ಮಗಳು ಟ್ರಾಫಿಕ್ ಸಿಗ್ನಲ್ ಅಲಕ್ಷಿಸಿದ್ದುದಕ್ಕೆ ಕಾನ್ಸ್ಟೇಬಲ್ ನಿಲ್ಲಿಸಿ ಫೈನ್ ಹಾಕಿದರು.ಆ ಮೇಲೆ ಗವರ್ನರ್
ಅವರ ಮಗಳೆಂದು ತಿಳಿದು ಒಡನೆ ರಾಜಭವನಕ್ಕೆ ತೆರಳಿ ಕ್ಷಮೆ ಕೇಳಿದಾಗ 'ನೀನು ಮಾಡಿದ ತಪ್ಪು ಎಂದರೆ ಕರ್ತವ್ಯ ಪಾಲಿಸಿದ
ಬಗ್ಗೆ ಕ್ಷಮೆ ಕೇಳಿದ್ದು.'ಕಾನೂನು ಎಲ್ಲರಿಗು ಒಂದೇ.ಒಳ್ಳೆಯ ಕೆಲಸ ಮಾಡಿದೆಯೆಂದು ಬೆನ್ನು ತಟ್ಟಿ ಕಳಿಸಿದರು.ಇವರ ನೇಮಕ
ವಾದಾಗ ಕಾಂಗ್ರೆಸ್ ಪಕ್ಷದ ಏಜೆಂಟ್ ಎಂದು ವಿರೋದಿಸಿದ್ದ ಕರುಣಾನಿಧಿಯವರೂ ಇವರನ್ನು ಬಿಳ್ಕೊಡುವಾಗ 'ಒಬ್ಬ
ಅಲೆಕ್ಷಾನ್ದರ್ ಹಿಂದೆ ನಮ್ಮ ದೇಶವನ್ನು ಗೆದ್ದರೆ,ಈ ಅಲೆಕ್ಷಾನ್ದರ್ ತಮಿಳರ ಹೃದಯವನ್ನೇ ಗೆದ್ದ 'ಎನ್ನುವಂತೆ ಆಯಿತು.
ಮುಂದೆ ಇವರು ಮಹಾರಾಷ್ಟ್ರದ ರಾಜ್ಯಪಾಲರಾದಾಗಲೂ ಬಿ ಜೆ ಪಿ ಶಿವಸೇನೆಯವರು ಮೊದಲು ಸಂಶಯದಿಂದ
ನೋಡಿದರೂ
ಇವರ ನಿಷ್ಪಕ್ಷಪಾತ ನಡವಳಿಕೆ ಕಂಡು ಎರಡನೇ ಅವಧಿಗೆ ಮುಂದುವರಿಸುವಂತೆ ಮಾಡಿದರು.ಮೊದಲು ಇವರನ್ನು
ನೇಮಿಸಿದುದು ಕಾಂಗ್ರೆಸ್ ಸರಕಾರ ,ಪ್ರಧಾನಿ ನರಸಿಂಹ ರಾಯರು.ಆಗ ಮಹಾರಾಸ್ತ್ರದಲ್ಲೂ ಅವರ ಪಕ್ಷದ ಆಢಳಿತ ವಿತ್ತು.
ಎರಡನೇ ಅವಧಿಗೆ ಆಗುವಾಗ ಕೇಂದ್ರದಲ್ಲಿ ವಾಜಪೇಯಿ ಪ್ರಧಾನಿ.ರಾಜ್ಯದಲ್ಲಿ ಶಿವಸೇನ ಬಿ ಜೆ ಪಿ ಆಡಳಿತವಿತ್ತು.ಹಿಂದೂ
ವಾದಿಗಳಾದ ಶಿವಸೆನೆಯವರೇ ಇವರ ಎರಡನೇ ಅವಧಿಗೆ ಒತ್ತಾಯಿಸಿದರೆಂದರೆ ಇವರ ಹಿರಿಮೆ ಅರ್ಥ ವಾಗುವುದು.
ಏನ್ ಡಿ ಎ ಇವರನ್ನು ರಾಷ್ಟ್ರಪತಿ ಮಾಡಬೇಕೆನ್ದಿತ್ತು.ಆದರೆ ಕಾಂಗ್ರೆಸ್ ನ ಅಸಹಕಾರದಿಂದ ಅದು ಸಾಧ್ಯವಾಗಲಿಲ್ಲ.
ಏನ್.ಸಿ.ಪಿ. ಬೆಂಬಲಿತ ಹುರಿಯಾಳಾಗಿ ಮಹಾರಾಷ್ಟ್ರ ವಿಧಾನ ಸಭೆಯಿಂದ ರಾಜ್ಯಸಭೆಗೆ ಸ್ಪರ್ದಿಸಿದ ಇವರನ್ನು ೩/೪
ಬಹುಮತದಿಂದ ಆರಿಸಿ ಮಾರಾಟಿಗಳು ಕೃತಜ್ಞತೆ ಮೆರೆದರು.
ಶ್ರೀ ಅಲೆಕ್ಷಾನ್ದರ್ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಕಾಲದಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಮುಖ್ಯ
ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದವರು.ಉದಾರ ಚರಿತರು.
ಇವರ ಜೀವನ ಚರಿತ್ರೆ' ಥ್ರೂ ದ ಕಾರಿದೊರ್ಸ್ ಆಫ್ ಪವರ್ ' ಭಾರತೀಯರೆಲ್ಲಾ ಓದ ಬೇಕಾದ ಪುಸ್ತಕ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ