ಬೆಂಬಲಿಗರು

ಶುಕ್ರವಾರ, ಏಪ್ರಿಲ್ 5, 2013

ಘನವೆತ್ತ ರಾಜ್ಯಪಾಲರು ೧


ರಾಜ್ಯಪಾಲರ ಹುದ್ದೆಯ ವಿಶೇಷವೆಂದರೆ ನೀವು ೨೪ ಗಂಟೆ  ಸುಖವಾಗಿ ನಿದ್ದೆ ಮಾಡ ಬಹುದು ಅಥವಾ ಕೆಲಸ ಮಾಡ

ಬಹುದು ,ಯಾರೂ ಅಡ್ಡಿ ಬರರು ;ಇದು ಮಾಜಿ ರಾಜ್ಯಪಾಲ ಮತ್ತು ಮುತ್ಸದ್ಧಿ ಸಿ.ಸುಬ್ರಹ್ಮಣ್ಯಂ ಅವರ ನುಡಿಗಳು.ರಾಷ್ಟ್ರಪತಿ

ಆಳ್ವಿಕೆ ಇಲ್ಲದಿದ್ದರೆ ಅವರೊಂದು

ಉತ್ಸವ ಮೂರ್ತಿ.ವಯಸ್ಸು ಆಗಿ ನಿವೃತ್ತರಾದ ರಾಜಕಾರಿಣಿಗಳಿಗೆ ಪುನರ್ವಸತಿ ತಾಣ.ಆದರೂ ಕೆಲವರು ಈ ಹುದ್ದೆಗೆ ತಮ್ಮ

ಅವಿವೇಚನೆಯಿಂದ ಕೆಟ್ಟ ಹೆಸರು ತಂದಿದ್ದಾರೆ.ಉದಾ ಶ್ರೀ ಜಿ ದಿ ತಪಾಸೆ,.ಶ್ರೀ ರಾಮ ಲಾಲ್,ಶ್ರೀ ಬೂಟಾ ಸಿಂಗ್, ರೋಮೇಶ್


ಭಂಡಾರಿ  ಹಂಸ ರಾಜ ಭಾರದ್ವಾಜ್ ಹೆಸರಿಸ ಬಹುದಾದ ಕೆಲವರು.
ತಮ್ಮ ಸಂವಿಧಾನ ಭದ್ಧತೆ ನಿಸ್ಪಕ್ಷಪಾತ ಮತ್ತ್ತು ಮಾನವೀಯ ಗುಣಗಳಿಂದ ಈ ಹುದ್ದೆಯ ಘನತೆ ಹೆಚ್ಚಿಸಿ ಎಲ್ಲರಿಂದಲೂ ಸೈ


ಎನಿಸಿ ಕೊಂದವರೂ ಹಲವರಿದ್ದಾರೆ.ಶ್ರೀ ಸಿ.ಸುಬ್ರಹ್ಮಣ್ಯಂ ,ಪಿ ಸಿ.ಅಲೆಕ್ಷಾನ್ದರ್, ಧರ್ಮ ವೀರ ,ಬಿ ಕೆ ನೆಹರು  ಟಿ ಏನ್

ಚತುವೇದಿ ಈ ವರ್ಗಕ್ಕೆ ಸೇರಿದವರು.
                                            C s

ಇವರಲ್ಲಿ ಸಿ ಸುಬ್ರಮಣ್ಯಮ್  ಅವ ರು  ಒಬ್ಬ ಭಾರತ ರತ್ನ. ಸ್ವಾತಂತ್ರ ಹೋರಾಟಗಾರ,ಹಳೆ ಮದ್ರಾಸ್ ರಾಜ್ಯದಲ್ಲಿ

ಮಂತ್ರಿ,ಕೇಂದ್ರದಲ್ಲಿ  ಕೃಷಿ,ಅರ್ಥ,ಮತ್ತು ರಕ್ಷಣೆ ಯಂತ ಭಾರೀ ಖಾತೆಗಳನ್ನು ಯಶಶ್ವಿಯಾಗಿ ನಿರ್ವಹಿಸಿದ ಮುತ್ಸದ್ದಿ. ಇವರನ್ನು

 ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯುತ್ತಾರೆ.ಕೃಷಿ ವಿಜ್ಞಾನಿ ಎಂ ಎಸ ಸ್ವಾಮಿನಾಥನ್ ಅವರ ಬೆಂಬಲ

ದೊಂದಿಗೆ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಸಾಧಿಸಿ

ದೇಶವು ಆಹಾರ ಸ್ವಾವಲಂಬನೆ ಸಾದಿಸುವಂತೆ ಮಾಡಿದವರು.ಅಲ್ಲದೆ ಶ್ರೀ ವರ್ಗಿಸ್ ಕುರಿಯನ್ ಅವರಿಗೆ ಪ್ರೋತ್ಸಾಹ ವಿತ್ತು

ಆಪರೇಷನ್ ಫ್ಲಡ್ ಮೂಲಕ ಕ್ಷೀರ ಕ್ರಾಂತಿಗೆ ಬೆನ್ನೆಲುಬಾವದವರು.ಸ್ವಯಂ ಸಂವಿಧಾನ ರಚನಾ ಸಭೆಯ ಅಂಗವಾಗಿದ್ದ

ಹಿರಿಯರು.

ವಿಪಿ ಸಿಂಗ್ ಪ್ರಧಾನಿಯಾಗಿದ್ದಾಗ ಮದ್ರಾಸಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದ ಇವರನ್ನು ವಿನಂತಿಸಿ ಮಹಾರಾಷ್ಟ್ರ ರಾಜ್ಯದ

ರಾಜ್ಯ ಪಾಲರನ್ನಾಗಿ ಮಾಡಿದರು.ದಂತ ಗೋಪುರದಲ್ಲಿ ಸುಮ್ಮನೆ ಕುಳಿತು ಕೊಳ್ಳುವ ಪ್ರವೃತ್ತಿ ಇವರದಲ್ಲ.ರಾಜ ಭವನ ದ

ದುಂದು ವೆಚ್ಚಗಳಿಗೆ ಕಡಿವಾಣ ಹಾಕಿದರು.ರಾಜ ಭವನವನ್ನು ಜನರಿಗೆ ತೆರೆದಿಟ್ಟರು.ಅಲ್ಲಿ ಸಮಾಜ ಸೇವಾ ಸಂಸ್ತೆಗಳು

ಸಭೆಗಳನ್ನು ನಡೆಸಲು ಅನುವು ಮಾಡಿ ಕೊಟ್ಟರು.ವಿಶ್ವ ವಿದ್ಯಾಲಯಗಳ ಕುಲಾಧಿಪತಿಯಾಗಿ  ಅವುಗಳ ಆಗು ಹೋಗುಗಳಲ್ಲಿ

 ವಿಶೇಷ ಆಸಕ್ತಿ ವಹಿಸಿದರು.ರಾಜ್ಯಪಾಲರನ್ನು ಹಿಸ್

ಎಕ್ಷೆಲ್ಲನ್ಸಿ ಎಂದು ಸಂಬ್ಹೊದಿಸುವುದನ್ನು ನಿಲ್ಲಿಸ ಪ್ರಯತ್ನಿಸಿದರು.ತಾವು ಸಂಚರಿಸುವ ದಾರಿಯಲ್ಲಿ ಟ್ರಾಫಿಕ್ ನಿಲುಗಡೆ ಮಾಡಿ

ಜನ ಸಾಮಾನ್ಯರಿಗೆ ತೊಂದರೆ ಮಾಡದಂತೆ ಆದೇಶ ನೀಡಿದರು.ಒಟ್ಟಿನಲ್ಲಿ ಇವರು ಜನರ ರಾಜ್ಯಪಾಲ ಎಂದು ಹೆಸರು

ಗಳಿಸಿದರು.ಮುಂಬೈ ನಗರದ ತ್ಯಾಜ್ಯ ವಿಲೇವಾರಿ ಯಲ್ಲಿ ಆವಿಷ್ಕಾರ ತರಲು ಪ್ರಯತ್ನ ನಡೆಸಿದರು .

ಗೋವಾ ದಲ್ಲಿ ವಿಜ್ಞಾನ ಕಾಂಗ್ರೆಸ್ ನಡೆಯಿತು .ಪ್ರಧಾನಿ ನರಸಿಂಹ ರಾಯರು ಮುಖ್ಯ ಅತಿಥಿ.ರಾಜ್ಯಪಾಲ ರಾದುದರಿಂದ

ಇವರೂ ಉಪಸ್ತಿತ .ಕಾರ್ಯಕ್ರಮ ನಂತರ ವಿಶ್ರಮಿಸಲು ರಾಜಭವನಕ್ಕೆ ತೆರಳಲು ಅನುವಾದ ಇವರನ್ನು ವಿಜ್ಞಾನಿಗಳು ಚಹಾ

ಕೂಟ ಕ್ಕೆ ಬರಲು ಒತ್ತಾಯಿಸಿದರು.ಆ ಕೂಟ ದಲ್ಲಿ ಅನೌಪಚಾರಿಕವಾಗಿ ಮಾತ ನಾದುತ್ತ  ಸುಬ್ರಹ್ಮಣ್ಯಂ ಪ್ರಧಾನಿಯವರ

ಸಮಯ ಮೌಲ್ಯ ಯುತವಾದುದು.ಅವರು ಸಣ್ಣ ಪುಟ್ಟ ಉಧ್ಘಾಟನೆ ,ಚಿಲ್ಲರೆ ಕಾರ್ಯಗಳಿಗೆ ಸಮಯ ವ್ಯಯಿಸದೇ ರಾಷ್ಟ್ರ ದ

ಪ್ರಮುಖ ಸಮಸ್ಯೆಗಳ

ತ್ತ ಗಮನ ಹರಿಸ ಬೇಕೆಂದು ಹೇಳಿದರು.ಇದು ಒಂದು ಆಫ್ ದಿ ರೆಕಾರ್ಡ್ ಹೇಳಿಕೆ .ಇದನ್ನು ಅಲ್ಲಿದ್ದ ಒಬ್ಬ ಪತ್ರಕರ್ತ ರಾಜ್ಯ

ಪಾಲರಿಂದ

ಪ್ರಧಾನಿಗಳ ಕಾರ್ಯ ವೈಖರಿಯ ಟೀಕೆ.ಎಂದು ದೊಡ್ಡದಾಗಿ ಪ್ರಕಟಿಸಿದರು.ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗ.

ಇದರಿಂದ ಮನನೊಂದು ಸುಬ್ರಹ್ಮಣ್ಯಂ ರಾಜೀನಾಮೆ ನೀಡಿದರು.ಪ್ರಧಾನಿಯಾಗಲಿ ರಾಷ್ಟ್ರಪತಿಗಳಾಗಲೀ ಅವರನ್ನು

ಹಿಂತೆಗೆಯುವಂತೆ ಕೇಳಲಿಲ್ಲ.

ಖ್ಯಾತ ನ್ಯಾಯವಾದಿ ಸಂವಿದಾನ ತಜ್ಞ ನಾನಿ ಪಾಲ್ಕಿವಾಲ ಹೀಗೆ ಪ್ರತಿಕ್ರಿಯೆ ನೀಡಿದರು,' ಶ್ರೀ ಸುಬ್ರಹ್ಮಣ್ಯಂ ಅವರ

ರಾಜೀನಾಮೆ ಅನಾವಶ್ಯಕ ವಾಗಿದ್ದರೆ ಅದನ್ನು ಒಪ್ಪಿ ಕೊಂಡ ಸರಕಾರ ದ ಕ್ರಮ ಬಂಡ  ತನದ ಪರಮಾವಧಿ.ಮಹಾರಾಷ್ಟ್ರದ

ಜನತೆ ಸುಬ್ರಹ್ಮಣ್ಯಂ ಅವರ ನಾಯಕತ್ವ ,ದೂರ ದೃಷ್ಟಿ ,ಮಾರ್ಗದರ್ಶನ ಮತ್ತು ಜನಸಾಮಾನ್ಯರ ಏಳಿಗೆಗೆ ಇದ್ದ ಬದ್ಧತೆ ಯನ್ನು


 ಮರೆಯಲಾರರು.'ಇವರ ಜೀವನ ಚರಿತ್ರೆ  'ಹ್ಯಾಂಡ್ ಆಫ್ ಡೆಸ್ಟಿನಿ '  ಮೂರು  ಸಂಪುಟಗಲ್ಲಿ ಭಾರತೀಯ ವಿದ್ಯಾಭವನ

 ಪ್ರಕಟಿಸಿದೆ.ಓದ ಬೇಕಾದ ಪುಸ್ತಕ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ