ಭೂತದ ಬಾಯಲ್ಲಿ ಭಗವದ್ ಗೀತೆ
ನಾವು ಕೆಟ್ಟವರೆಂದು ಪರಿಗಣಿಸುವ ವ್ಯಕ್ತಿಯ ಬಾಯಲ್ಲಿ ನಮಗೆ ಒಳ್ಳೆಯದನ್ನು ಉಪದೇಶಿಸಿದಾಗ (ಕೆಟ್ಟ ಅರ್ಥದಲ್ಲಿ )ನುಡಿಗಟ್ಟು .ಇದು ಆಂಗ್ಲ ಭಾಷೆಯ ಡೆವಿಲ್ ಕೋಟಿಂಗ್ ಸ್ಕಿಪ್ಚರ್ ಎಂಬ ಮೂಲದ ತಥಾಕಥಿತ ಕನ್ನಡ ಅನುವಾದ.ಸೈತಾನನು ಧರ್ಮ ಗ್ರಂಥಗಳನ್ನು ಉಲ್ಲೇಖಿಸಿ (ತಪ್ಪು ಅರ್ಥದಲ್ಲಿ)ಯೇಸುವನ್ನು ತನ್ನ ಹಾದಿಗೆ ತರುವ ಯತ್ನ ಮಾಡುವ ಕತೆ ಬೈಬಲ್ ನಲ್ಲಿ ಇದೆ.ಅದರಂತೆ ಶೇಕ್ಸಪಿಯರ್ ನ ನಾಟಕ ಮರ್ಚೆಂಟ್ ಆಫ್ ವೆನಿಸ್ ನಲ್ಲಿ ಈ ಸಾಲುಗಳಿವೆ
Mark you Bessanio,
The devil can cite scriptures for his purpose
An evil soul producing holy witness,
Is like villain with smiling cheek,
A goodly apple rotten at heart :
O.what a Godly outside falsehood hath.
ಆದರೆ ಕನ್ನಡದಲ್ಲಿ ಈ ಗಾದೆಯನ್ನು ದೆವ್ವದ ಬಾಯಲ್ಲಿ ಭಗವದ್ಗೀತೆ ಎನ್ನುವುದು ಸರಿಯಾದೀತು.ದಕ್ಷಿಣ ಕನ್ನಡದ ಭೂತಗಳು ದೇವರಂತೆ ಪೂಜಿಸಲ್ಪಡುವವು. ಭೂತ ಕೋಲದಲ್ಲಿ ಭೂತವು ಒಳ್ಳೆಯ ವಿಚಾರಗಳನ್ನು ಗಳನ್ನು ಸಂದರ್ಭರ್ಕ್ಕನುಸಾರ ಉಲ್ಲೇಕಿಸುವ ಕ್ರಮ ಇದೆ.ಭೂತ ಕಟ್ಟುವವರು ತಲೆ ತಲಾ೦ತರಗಳಿಂದ ಕೇಳಿ ಕಲಿತ ಜ್ಞಾನ ಭೂತ ಮುಖಾಂತರ ಪ್ರಕಟ ವಾಗುತ್ತದೆ.ಇಲ್ಲಿ ಭೂತಗಳು ರಕ್ಷಕರು.ನಮ್ಮ ಹಳ್ಳಿಯಲ್ಲಿ ಇರುವ ಮಹಾ೦ಕಾಳಿ ಭೂತವು ಅತಲ ವಿತಳ ಪಾತಾಳ ಎಲ್ಲಿದ್ದರೂ ತನ್ನನ್ನು ನಂಬುವವರ ಕಾಯುವೆ ಎಂದು ಭರವಸೆ ನೀಡುತ್ತಿತ್ತು.
ಭ್ರಷ್ಟಾಚಾರದ ಬಗ್ಗೆ ತಮ್ಮ ಎದುರು ಪಕ್ಷದವರು ಮಾತನಾಡುವುದು ದೆವ್ವದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದು ರಾಜಕಾರಿಣಿಗಳು ಹೇಳುತ್ತಾರೆ .ಇಲ್ಲಿ ದೆವ್ವಗಳು ಯಾರೋ ,ಭಗವದ್ಗೀತೆ ಯಾವುದೊ ಯಾರಿಗೆ ಗೊತ್ತು?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ