ಮತ್ತೊಂದು ಚುನಾವಣೆ ಬರುತ್ತಿದೆ.ಮತದಾರ ದೊಡ್ಡ ಸಂದಿಗ್ದದಲ್ಲಿ ಇದ್ದಾನೆ. ಪಕ್ಷ ನೋಡಿ ಮತ ಚಲಾಯಿಸುವಾ
ಎಂದರೆ ಹಗರಣಗಳಲ್ಲಿ ಸಿಲುಕಿರುವ ಕೇಂದ್ರ ಸರಕಾರದ ಮುಖ್ಯ ಪಾಲುದಾರ ಕಾಂಗ್ರೆಸ್. ಇಲ್ಲಿ ಸಿಕ್ಕಿದ ಅವಕಾಶ ವನ್ನು
ದುರುಪಯೋಗ ಪಡಿಸಿ ಕರ್ನಾಟಕದ ಇತಿಹಾಸ ದಲ್ಲಿಯೇ ಕಂಡು ಕೇಳರಿಯದಂತಹ ಬ್ರಷ್ಟಾಚಾರದಲ್ಲಿ ಮುಳುಗಿ
ತೇಲುತ್ತಲಿರುವ ಬಿ ಜೆ ಪಿ .ಕುಟುಂಬದ ಆಸ್ತಿ ಯಾಗಿರುವ ಜೆ ಡಿ ಎಸ. ಒಳ್ಳೆಯ ಮಂದಿ ಬೆರಳೆಣಿಕೆಯಲ್ಲಿದ್ದ್ದು ಎಲ್ಲಾ
ಪಕ್ಷಗಳಲ್ಲಿ ಹಂಚಿ ಹೋಗಿದ್ದಾರೆ.
ಶಾಸನ ಸಭೆಯ ಸದಸ್ಯರಿಗೆ ಲಾ ಮೇಕರ್ಸ್ ಅಥವಾ ಕಾನೂನು ಮಾಡುವವರು ಎಂದು ಕರೆಯುತ್ತಾರೆ.ಇವರಿಗೆ
ಪ್ರಜೆಗಳ ಬಗ್ಗೆ ಕಾಳಜಿಯೂ ,ಕಾನೂನು ,ಸಂವಿಧಾನ ದ ಬಗ್ಗೆ ತಿಳಿವೂ ಬೇಕು.ವಿಪರ್ಯಾಸವೆಂದರೆ ನಮ್ಮಲ್ಲಿ
ಶಾಸನ ಮಾಡುವವರೇ ಅದನ್ನು ಮುರಿಯುವುದರಲ್ಲಿ ಮೊದಲಿಗರಾಗಿರುತ್ತಾರೆ.
ಚುನಾವಣೆಗಳು ಯುಧ್ಧ ದಂತೆ ನಡೆಯುತ್ತಿವೆ . Everything is fair in love and war ಎಂಬಂತೆ ಲಂಗು
ಲಗಾಮಿಲ್ಲದೆ ಪ್ರಚಾರ ನಡೆಯುತ್ತದೆ. ಮಧು ದಂಡಾವತೆ ,ವೀರೇಂದ್ರ ಪಾಟೀಲ್, ಜಗನ್ನಾಥ ರಾವ್ ಜೋಷಿ
ಯಂತಹ ಸಜ್ಜನ ಪ್ರಚಾರಕರು ಯಾವ ಪಕ್ಷದಲ್ಲೂ ಸಿಗುವುದಿಲ್ಲ.
ಮೊರಾರ್ಜಿ ದೇಸಾಯಿ ಅವರ ಚುನಾವಣಾ ಸಭೆಯಲ್ಲಿ ಅವರ ಎದುರಾಳಿಯ ವಿರುದ್ಧ ಘೋಷಣೆ ಕೂಗಲು ಅವರು
ಸಂಮತಿಸುತ್ತಿರಲಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ