ಬೆಂಬಲಿಗರು

ಶುಕ್ರವಾರ, ಏಪ್ರಿಲ್ 12, 2013

ವಿಷು ಹಬ್ಬ

ದಕ್ಷಿಣ ಕನ್ನಡ ಮತ್ತು ಕೇರಳದಲ್ಲಿ ಉತ್ಸಾಹದಿಂದ ಆಚರಿಸಲ್ಪಡುವ ಹಬ್ಬ.ಮೇಷ ತಿಂಗಳ ತಿಂಗಳ  ಒಂದನೇ ದಿನ ಸೌರಮಾನ

ವರ್ಷ ದ ಆರಂಭ.ಹಣ್ಣು ಹಂಪಲು ಹೂ ಯಥೇಚ್ಛ ಇರುವ ಕಾಲ.ಮಕ್ಕಳಿಗೂ ರಜಾ ದಿನಗಳು.ಅಂದರೆ ಕೇಳಬೇಕೇ?

ಈ ದಿನ ಬೆಳಗೆ ಹೂ ಹಣ್ಣು ತರಕಾರಿಗಳನ್ನು ದೇವರ ಮುಂದೆ ಇರಿಸಿ ನಮಸ್ಕಾರ ಮಾಡಬೇಕು.ಇದನ್ನು ಕಣಿ ಇಡುವುದು

ಎನ್ನುತ್ತಾರೆ.ಬೆಳಗ್ಗೆ ಎದ್ದೊಡನೆ ಕಣ್ಣು ಮುಚ್ಚಿ ಕೊಂಡೆ ದೇವರ ಕೋಣೆಗೆ ಹೋಗಿ ಕಣ್ತೆರೆದು  ಕಣಿಯಿಂದ ಅಲಂಕೃತ ದೇವರನ್ನು

ನೋಡಬೇಕೆಂಬ ನಂಬಿಕೆ.

                                                    


                                             
 
ಆಮೇಲೆ ಹಿರಿಯರೆಲ್ಲರಿಗೆ ನಮಸ್ಕಾರ ಮಾಡಿ ಆಶೀರ್ವಾದ  ಪಡೆಯ ಬೇಕು .ಹಿಂದಿನ ದಿನಗಳಲ್ಲಿ
 
ಒಕ್ಕಲಿನವರು,ಕೆಲಸಕ್ಕೆ ಬರುವ ಕಾರ್ಮಿಕರು  ಕಣಿ ಕಾಣಿಕೆ ಕೊಟ್ಟು ಧಣಿಗಳಿಗೆ  ನಮಸ್ಕರಿಸುತ್ತಿದ್ದರು.
 
ಮಧ್ಯಾಹ್ನ ಭೂರಿ ಭೋಜನ.ಎಳೆಯ ಗೇರು ಬೀಜದ  ಪಾಯಸ ವಿಶೇಷ.ಮಕ್ಕಳಿಗೆ
 
ಕಣಿಗೆ ಹಣ್ಣು ,ತರಕಾರಿ ಹೂ ಸಂಗ್ರಹಿಸಿ ಇಡುವುದರಲ್ಲಿ ಅಘೋಷಿತ  ಸ್ಪರ್ದೆ.
 
ಕೇರಳದಲ್ಲಿ  ಕಣಿಗೆ  ಹಳದಿ ಬಣ್ಣದ ಕೊನ್ನೇ ಹೂ ಬಹಳ ವಿಶೇಷ .ವಿಶುವಿಗಾಗುವಾಗ  ಅದು
 
ಸಮೃದ್ದ.ಯಾ ರಾಜ್ಯದಲ್ಲಿ  ಇದೊಂದು ಸಾರ್ವತ್ರಿಕ ಹಬ್ಬ. ಮಧ್ಯಾಹ್ನ  ಸಸ್ಯಾಹಾರಿ  ಭೋಜನ.
 
ಹಪ್ಪಳ,ಅವಿಯಲ್, ಇನ್ಜಿಪುಳಿ,ಮಾವಿನಕಾಯಿಯ ಪುಳಿಸೇರಿ,ಪಾಯಸ ಇತ್ಯಾದಿ ಮನೆ ಮಂದಿಯೆಲ್ಲಾ ಸೇರಿ
 
ಊಟ.ಇತ್ತೀಚಿನ ದಿನಗಳಲ್ಲಿ ಹೊಟೇಲಿಗೆ ಹೋಗಿ ಆತವಾ ತರಿಸಿ ತಿನ್ನುವ ಅಭ್ಯಾಸ ಸುರು
 
ಆಗಿದೆ. ಹೋಟೆಲ್ ಗಳು ವಿಷು ಸಧ್ಯಾ ಎಂಬ ಊಟದ ಪ್ಯಾಕೇಜ್ ಒದಗಿಸುತ್ತವೆ.ವಿಷುವಿಗೆ ಟಿ ವಿ ಯಲ್ಲಿ
 
ವಿಶೇಷ ಕರ್ಯಕ್ರಮಗಲಿರುತ್ತವೆ.ಅಡುಗೆ ಮಾಡಿಕೊಂಡು ಕೂತರೆ ಅವನ್ನು ನೋಡುವುದು ಹೇಗೆ?
 
ಕೊನ್ನ ಹೂ
 
(ಚಿತ್ರಗಳಿಗೆ ಅವುಗಳ ಕರ್ತೃಗಳಿಗೆ ಅಭಾರಿ)
 
ಇದೇ ದಿನದಂದು ತಮಿಳ್ನಾಡಿನಲ್ಲಿ ಹೊಸ ವರ್ಷ ಆಚರಿಸಲಾಗುತ್ತದೆ.(ಪುದಿಯ -ಹೊಸ  ಆ೦ಡು- ವರ್ಷ--ಪುತ್ತಾಂಡು)
 
ಉತ್ತರ ಭಾರತದಲ್ಲಿ ಬೈಶಾಕಿ  ಹಬ್ಬವೆಂದು ಆಚರಿಸಲ್ಪಡುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ