ಬೆಂಬಲಿಗರು

ಬುಧವಾರ, ಏಪ್ರಿಲ್ 3, 2013

ಮೂತ್ರದ ಕಲ್ಲುಗಳು


ಇತ್ತೀಚಿಗೆ ಮೂತ್ರಾಂಗ ಕಲ್ಲುಗಳಿಂದ ಬಳಲುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ಈ ರೋಗವು ಅಸಹನೀಯ ನೋವು ಉಂಟು
ಮಾಡುವುದಲ್ಲದೆ ಮೂತ್ರ ಪಿಂಡದ ವಿನಾಶಕ್ಕೂ ಕಾರಣವಾಗ ಬಹುದು.
                                 stone
                               stone2
                              stone3
ಬಹಳ ಮಂದಿಗೆ ಶರೀರದಲ್ಲಿ ಕಿಡ್ನಿ ಅಥವಾ ಮೂತ್ರ ಪಿಂಡ ಇರುವ ಜಾಗದ ಬಗ್ಗೆ ತಪ್ಪು ಕಲ್ಪನೆಗಳಿವೆ.ಕೆಲವರು  ವೃಷಣಗಳನ್ನೇ ಕಿಡ್ನಿ

ಎಂದು ತಿಳಿದುಕೊಂಡಿದ್ದಾರೆ.ಮೇಲಿನ ಒಂದು ಮತ್ತು ಎರಡನೇ ಚಿತ್ರದಿಂದ ಮೂತ್ರಪಿಂಡ (ಕಿಡ್ನಿ) ಶರೀರದಲ್ಲಿ ಇರುವ ಜಾಗ

ಯಾವುದೆಂದು  ತಿಳಿಯ ಬಹುದು .

ರೋಗ ಲಕ್ಷಣಗಳು.
ಮೂತ್ರಾಂಗ ಕಲ್ಲುಗಳು  ತೀವ್ರತರ ನೋವು ಉಂಟುಮಾಡುತ್ತವೆ. ಈ ನೋವು ಬೆನ್ನಿನ ಪಾರ್ಶ್ವದ ಮೇಲ್ಬಾಗದಿಂದ ,ಹೊಟ್ಟೆಯ 
ಬದಿ,ಮತ್ತು ಕೆಳಗೆ ವ್ರುಶಣದ ವರೆಗೆ ಬರಬಹುದು.
                          images
ಕಲ್ಲಿಗೆ ಕಾರಣಗಳು.
೧ ಸಾಕಷ್ಟು ನೀರು ಸೇವಿಸದಿರುವುದು

೨.ಉಪ್ಪಿನ ಅಂಶ ಅಧಿಕ ಸೇವನೆ

೩.ಆಗಾಗ್ಗೆ ವಾಹನ ಯಾತ್ರೆ  ಮಾಡುವುದು.ಪ್ರಯಾಣ ನಂತರ ಮೂತ್ರ ಹಳದಿಯಾಗುವುದಿಲ್ಲವೇ. ನಮ್ಮ ಶರೀರದಿಂದ  ನೀರು

ಆವಿಯಾಗಿ ಮೂತ್ರ ಹೆಚ್ಚು  ಸಾಂದ್ರಿತ ವಾಗುವುದು.

೪. ಫ್ಯಾನ್ ಹಾಕಿ ಮಲಗುವುದು ,ಸೊಳ್ಳೆ ಮತ್ತು  ಸೆಖೆ ತಡೆಯಲು ಫ್ಯಾನ್ ಹಾಕಿ ಮಲಗುವುದರಿಂದಲೂ ಶರೀರದ  ನೀರಿನ ಅಂಶ

ಆವಿಯಾಗುವುದು .

೫.ಅದಿಕ  ಸಸಾರ ಜನಕ (ಪ್ರೋಟೀನ್) ಸೇವನೆ.ಮುಖ್ಯವಾಗಿ ಮಾಂಸಾಹಾರ.

ಪರೀಕ್ಷೆ

ಹೊಟ್ಟೆಯ  ಅಲ್ಟ್ರಾಸೌಂಡ್ ಸ್ಕಾನ್ ಮಾಡಿಸಿ ಕಲ್ಲು ಪತ್ತೆ ಹಚ್ಚ ಬಹುದು.

ಚಿಕಿತ್ಸೆ.
ನೋವಿಗೆ ನೋವಿನ ಮಾತ್ರೆ ಮತ್ತು ಇಂಜೆಕ್ಷನ್  ಕೊಡುತ್ತಾರೆ
ನೀರು ಜಾಸ್ತಿ ಕುಡಿಯುವುದು.ದಿನಕ್ಕೆ ಕನಿಸ್ಟ ೨ ಲೀಟರ್ ನೀರು ಕುಡಿಯಬೇಕು.
೭ಮಿ.ಮಿ ಗಿಂತ ಸಣ್ಣ ಕಲ್ಲು ಔಷಧಿ ಯಿಂದ ಹೋಗ ಬಹುದು .ದೊಡ್ಡ ಕಲ್ಲುಗಳನ್ನು ಲಿತೋತ್ರಿಪ್ಸಿ ,ಎಂದರೆ ಆಪರೇಷನ್ ಇಲ್ಲದೆ 
ಹುಡಿಮಾಡಿ ತೆಗೆಯುವುದು,ಆಪರೇಷನ್ ,ಮೂತ್ರನಾಳದ ಮೂಲಕ ಟ್ಯೂಬ್ ಹಾಕಿ ತೆಗೆಯುವುದು ಇತ್ಯಾದಿ ವಿಧಾನಗಳಿವೆ .

ನೋವಿನಿಂದ  ಬಹಳ ವಾನ್ತಿಯಾದರೆ ಮಾತ್ರ ಡ್ರಿಪ್ ಹಾಕುತ್ತಾರೆ.ಉಳಿದಂತೆ ಡ್ರಿಪ್ ಹಾಕಿ ಕಲ್ಲು ತೆಗೆಯುವುದು ವಿವಾದಾಸ್ಪದ.

ಬಾಲಂಗೋಚಿ.:  ಹಿಂದೆ ರೇಶನ್ ಅಕ್ಕಿಯಲ್ಲಿ  ತೆಗೆದಸ್ಟು ಮುಗಿಯದ ಕಲ್ಲುಗಳಿರುತ್ತಿದ್ದವು.ಅದನ್ನು ತಿಂದರೂ ಯಾರಿಗೂ ಕಲ್ಲಿನ

ಉಪದ್ರ ಇರಲಿಲ್ಲ .ಈಗ  ಡಿಸ್ಟೋನ್  ಅಕ್ಕಿ .ಆದರೂ ಕಲ್ಲು .ನಾವು ಶಿಲಾ (ಕಲ್ಲು) ಯುಗಕ್ಕೆ ಹೋಗುತ್ತಿದ್ದೆವೆಯೇ?


(ಅಕ್ಕಿಯ ಕಲ್ಲಿಗೂ ಮೂತ್ರದ ಕಲ್ಲಿಗೂ ಸಂಬಂಧ ಇಲ್ಲ.)

7 ಕಾಮೆಂಟ್‌ಗಳು:

  1. ಒಂದು ತಿಂಗಳಿಂದ ಹೊಟ್ಟೆಯ ಬಲಭಾಗ ದಲ್ಲಿ ಕಡಿಮೆ ನೋವಿತ್ತು ಇಗ ತುಂಬ ನೋವಿದೆ ಆಸ್ಪತ್ರೆಗೆ ಹೊಗಿ ಬಂದಿದ್ದೆನೆ ಅವರು ಎರಡು ಕಿಡ್ನಿ ಯಲ್ಲು ಕಲ್ಲು ಬೆಳೆದಿದೆ ಎಂದು ಹೇಳಿದಾರೆ ಇದಕ್ಕೆ ಸುಲಭ ಮಾರ್ಗ ವೇನು ದಯವಿಟ್ಟು ಉತ್ತರಿಸಿ

    ಪ್ರತ್ಯುತ್ತರಅಳಿಸಿ
  2. ವಾಣಿ ನಾಯಕ್ ಅವ್ರೆ,
    ನಿಮ್ಮ ಕಿಡ್ನಿ ಯಲ್ಲಿರುವ ಕಲ್ಲು ಗಳ ಗಾತ್ರ ತಿಳಿದಿಲ್ಲ.ಸಾಮಾನ್ಯವಾಗಿ ೪ ಮಿ ಮಿ ಗಿಂತ ಕಮ್ಮಿ ಗಾತ್ರದ ಕಲ್ಲುಗಳು ದ್ರವ ಸೇವನೆ ಮತ್ತು ಔಷಧಿಗಳಿಂದ ೮೦%ದಸ್ತು ಹೋಗುತ್ತವೆ.೭ ಮಿ ಮಿ ಯಾ ವರೆಗೆ ಈ ವಿಧಾನ ದಿಂದ ಕಲ್ಲು ಹೋಗ ಬಹುದು .ದೊಡ್ಡ ಕಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಅಥವಾ ಶಾಕ್ ವೇವ್ ಚಿಕಿತ್ಸೆ ಬೇಕಾಗಬಹುದು.
    ಕಲ್ಲು ಯುರೆಟರ್ (ಕಿಡ್ನಿ ಯಿಂದ ಬ್ಲಾಡರ್ ನಡುವಿನ ನಾಳ)ನಲ್ಲಿ ಇದ್ದು ಗಾತ್ರ ೭ ಮಿ ಮಿ ಗಿಂತ ಕಂಮೋ ಇದ್ದ್ದರೆ ನೋವಿಗೆ ಸಾಮಾನ್ಯ ನೋವಿನ ಔಷಧಿಗಳಾದ ದೈಕ್ಲೋಫೆನಕ್ ಇತ್ಯಾದಿ ಕೆಲ ದಿನ ,ಕಲ್ಲು ಹೋಗಲು ತಾಮ್ಸುಲೋಸಿನ್ ೦.೪ ಮಿ ಗ್ರಾಂ ದಿನಾಲು ,ಪ್ರೆದ್ನಿಸೋಲನ್ ೨೦ ಮಿ ಗ್ರಾಂ ೫ ದಿನ ತುಂಬಾ ನೀರು
    ವೈದ್ಯರ ಸಲಹೆ ನಂತರ ತೆಗೆದು ತೆಗೆದು ಕೊಳ್ಳ ಬೇಕು .ನಿಮ್ಮ ಮನೆ ವೈದ್ಯರ ಸಲಹೆ ಕೇಳಿ ಮದ್ದು ತೆಗೆದು ಕೊಳ್ಳಿರಿ.
    ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದ. ಡಾ ಎ ಪಿ ಭಟ್

    ಪ್ರತ್ಯುತ್ತರಅಳಿಸಿ
  3. sir i am facing from kidney stone disease how can i control it . by the doctor they had said that the size of the stone is 8.8mm they had made operation and asked me to visit every week

    ಪ್ರತ್ಯುತ್ತರಅಳಿಸಿ
  4. Sir,
    Now that your stone has been removed,avoid salty food,consume plenty of water, after removing the stone your doctor if has analysed the chemical nature of it will advise some more food modification.You can also refer emedicine.medscape.com/article/437096-overview‎

    ಪ್ರತ್ಯುತ್ತರಅಳಿಸಿ
  5. ಸರ್ ನನ್ನ 2 ಕಿಡ್ನಿಗಳಲ್ಲಿ 6 ಮ್ಮ್ 4.5 ಮ್ಮ್ 5 & 3 ಮ್ಮ್ ಕಲ್ಲುಗಳಿವೆ ನೋವು ತೀರಾ ಜಾಸ್ತಿ ಆಗತಿಧೆ ಇದಕ್ಕೆ ಪರಿಹಾರ ಏನು

    ಪ್ರತ್ಯುತ್ತರಅಳಿಸಿ
  6. ಸರ್ ನನ್ನ 2 ಕಿಡ್ನಿಗಳಲ್ಲಿ 6 ಮ್ಮ್ 4.5 ಮ್ಮ್ 5 & 3 ಮ್ಮ್ ಕಲ್ಲುಗಳಿವೆ ನೋವು ತೀರಾ ಜಾಸ್ತಿ ಆಗತಿಧೆ ಇದಕ್ಕೆ ಪರಿಹಾರ ಏನು

    ಪ್ರತ್ಯುತ್ತರಅಳಿಸಿ
  7. ಸರ್ ನನ್ನ 2 ಕಿಡ್ನಿಗಳಲ್ಲಿ 6 ಮ್ಮ್ 4.5 ಮ್ಮ್ 5 & 3 ಮ್ಮ್ ಕಲ್ಲುಗಳಿವೆ ನೋವು ತೀರಾ ಜಾಸ್ತಿ ಆಗತಿಧೆ ಇದಕ್ಕೆ ಪರಿಹಾರ ಏನು

    ಪ್ರತ್ಯುತ್ತರಅಳಿಸಿ