ವಯೊಲಿನ್ ಮಾಂತ್ರಿಕ ಲಾಲ್ಗುಡಿ ಜಯರಾಮನ್ ಇನ್ನಿಲ್ಲ.ಕೆಲವು ತಿಂಗಳ ಮೊದಲು ಇನ್ನೋರ್ವ ವಯೊಲಿನ್ ದಿಗ್ಗಜ ಎಂ ಎಸ
ಗೋಪಾಲಕೃಷ್ಣನ್ ನಮ್ಮನ್ನು ಅಗಲಿದ ಆಘಾತ ಆರುವ ಮುನ್ನವೇ ಲಾಲ್ಗುಡಿ ಅವರೂ ಅವರನ್ನು ಅನುಸರಿಸಿ ಹೋದರು.
ಲಾಲ್ಗುಡಿ ಯವರ ವಾದನ ದಲ್ಲಿ ಅಬ್ಬರ ವಿರಲಿಲ್ಲ ಮಂದ ಮಾರುತನಂತೆ ,ಹಿತವಾದ ವಾದನ.ಅವರು ಪಕ್ಕ ವಾದ್ಯ
ನುಡಿಸುವಾಗ
ಮುಖ್ಯ ಕಲಾಕಾರನ ಸಹಜ ವಿಧೇಯತೆಯಿಂದ ಅನುಸರಣೆ ಮಾಡುತ್ತಿದ್ದರು.ಮದುರೈ ಮಣಿ ಐಯ್ಯರ್ ,ಜಿ ಏನ್
ಬಾಲಸುಬ್ರಹ್ಮಣ್ಯಂ
ಮದುರೈ ಸೋಮು ,ಎಂ ದಿ ರಾಮನಾಥನ್ ,ಏನ್ ರಮಣಿ ಯಂತಾ ಘಟಾನುಘತಿಗಳಿಗೆ ಸಾಥ್ ನೀಡಿದವರು .
ತ್ಯಾಗರಾಜರ ಶಬ್ದಗಳಲ್ಲಿ ಇವರ ಸಂಗೀತ ಎಂತ ಮುದ್ದೋ ಎಂತ ಸೊಗಸೋ .ಇವರಿಗೆ ಸೋಲೋಗಳಲ್ಲಿ ಸಾಥ್ ನೀಡುತ್ತಿದ್ದ
ಮೃದಂಗ ವಿದ್ವಾನ್ ವೆಲ್ಲೋರ್ ರಾಮ ಬದ್ರನ್ ಅವರು ಕೆಲ ತಿಂಗಳ ಮೊದಲು ನಮ್ಮನ್ನು ಅಗಲಿದರು.
ವಯೊಲಿನ್ ವಾದನದನ್ನಿ ಸ್ವಯಂ ಪರಂಪರೆ ಲಾಲ್ಗುಡಿ ಬಾನಿ ನಿರ್ಮಿಸಿದ ಇವರು ಒಳ್ಳೆಯ ಕೃತಿ ರಚನಾಕಾರರೂ
ಹೌದು .ಇವರು
ರಚಿಸಿದ ವರ್ಣ ,ತಿಲ್ಲಾನಗಳು ಜನಪ್ರಿಯ ವಾಗಿವೆ.
ಇಂಥವರನ್ನು ಕೊಟ್ಟ ಆ ಮಹಾದೇವರಿಗೆ ವಂದನೆಗಳು.
http://www.youtube.com/watch?v=zBbGHS0SnRE
http://www.youtube.com/watch?v=pLvSMOHcIts
ಅಪ್ಲೋಡರ್ ಗಳಿಗೆ ವಂದಿಸುತ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ