ತಲೆನೋವು ಸಹಿಸದವರಿಲ್ಲ. ತಲೆಯಿದೆ ಎಂದು ಗೊತ್ತಾಗುವುದೇ ನೋವು ಬಂದಾಗ.
ತಲೆನೋವಿನಲ್ಲಿ ಸ್ಥೂಲವಾಗಿ ಎರಡು ತರಹ.ಪ್ರಾಥಮಿಕ ತಲೆ ಸಂಬಂದಿ ನೋವು ಒಂದಾದರೆ ಇತರೇ ಕಾರಣ ಗಳಿಂದ
ಉ೦ಟಾಗುವ ನೋವು.
ಮೊದಲನೇ ವರ್ಗದಲ್ಲಿ ಮಾನಸಿಕ ಉದ್ವೇಗದಿಂದಾಗುವ ತಲೆನೋವು(Tension type headache) ಮತ್ತು ಮೈಗ್ರೈನ್ ತಲೆನೋವು ಮುಖ್ಯವಾದುವು.
ಇದರಲ್ಲಿ ಶೇಕಡಾ ೬೯ಕ್ಕಿನ್ತಲು ಹೆಚ್ಚು ಉದ್ವೇಗದಿಂದಾಗುವ ತಲೆನೋವಾದರೆ ಶೇ ೧೬ ರಷ್ಟು ಮೈಗ್ರೈನ್ ನಿಂದ
ಉಂಟಾಗುವುದು. ಮೈಗ್ರೈನ್ ನಲ್ಲಿ ಅರೆ ತಲೆ ನೋವು ,ಜುಮ್ ಜುಮ್ ತಲೆ ನೋವು ,ವಾಂತಿ ,ವಾಕರಿಕೆ ,ಸದ್ದು
ಮತ್ತು ಬೆಳಕು ಅಸಹ್ಯವಾಗುವು ಇರಬಹುದು . ಮೈಗ್ರೇನ್ ನೋವು ಅಚಾನಕ್ಕಾಗಿ ಬರುವುದು.ಉದ್ವೇಗದ ನೋವು
ಇಬ್ಬದಿ ಯಲ್ಲೂ ಇದ್ದು ತಲೆಯ ಸುತ್ತ ಬ್ಯಾಂಡ್ ಕಟ್ಟಿದ ಸಂವೇದನೆ ಇರುತ್ತದೆ.ನಿಧಾನ ವಾಗಿ ಏರಿ ಬರುವ ನೋವು .
ಇತ್ತೀಚಿಗೆ ಜೀವನ ಉದ್ವೇಗಮಯ ವಾಗಿರುವುದು ಕಾರಣ .ಸಣ್ಣ ಮಕ್ಕಳಿಗೆ ಅಡ್ಮಿಶನ್, ಹೋಂ ವರ್ಕ್ ,ಎಂಟ್ರನ್ಸ್,
ರಾಂಕ್ ಗಳಿಸುವುದು,ಪಟ್ಯೇತರ ಚಟುವಟಿಕೆ ಎಲ್ಲವೂ ಉದ್ವೇಗ ಕಾರಕ ಗಳು.ಮುಂದೆ ದೊಡ್ಡವರಾದಾಗ ಕೆಲಸದ
ಚಿಂತೆ ,ಟಾರ್ಗೆಟ್ ತಲುಪುವ ಉದ್ವೇಗ ,ಸುಖದ ಮರೀಚಿಕೆ ಹಿಂಬಾಲಿಸಿ ಓಟ ,ಸಾಂತ್ವನಕ್ಕೆ ಅವಕಾಶವಿಲ್ಲದ
ಒಂಟಿ ಕುಟುಂಬ ಗಳೂ ಇದಕ್ಕೆ ಕಾರಣ.
ಇತರೇ ಕಾಯಿಲೆಗಳಿಂದ ಉಂಟಾಗುವ (ಸೆಕೆಂಡರಿ) ತಲೆನೋವಿನಲ್ಲಿ ಸೋಂಕು ರೋಗಗಳು ಮು೦ಚೂಣಿಯಲ್ಲಿದ್ದರೆ
ಮೆದುಳಿನ ರಕ್ತ ಸ್ರಾವ , ಮೆದುಳು ಗಡ್ದೆಗಳು ಕೆಲವು ತಲೆನೋವುಗಳಿಗೆ ಕಾರಣ . ಸೊಂಕುಗಳಲಿ
ಸಾಮಾನ್ಯ ವೈರಲ್ ಜ್ವರಗಳು ,ಡೆಂಗು, ,ಸೈನಸ್ ಮತ್ತು ಹಲ್ಲಿನ ಸೋಂಕು ,ಮಲೇರಿಯ , ಟೈಪೋಇಡ್,ಮೆದುಳಿನ
ಪೊರೆಯ ಸೋಂಕು ಕಾರಣವಾಗಬಹುದು .ಮೆದುಳು ಪೋರೆಯೊಳಗಿನ ರಕ್ತಸ್ರಾವ (ಸಬ್ ಅರಕ್ನೊಯಿದ್ ಹೆಮ್ಮೊರೆಜ್)
ಒಮ್ಮೆಲೇ ಇದುವರೆಗೆ ಸಹಿಸಿರದಂತ ತಲೆನೋವು ಉಂಟುಮಾಡುತ್ತದೆ.
ಸಾಮಾನ್ಯ ತಿಳುವಳಿಕೆಯಂತೆ ಅಧಿಕ ರಕ್ತದ ಒತ್ತಡ ತಲೆನೋವಿಗೆ ಕಾರಣವಲ್ಲ .ತಲೆವೋವು ಇರುವಾಗ ಬಿ ಪಿ ನೋಡಿದರೆ
ಜಾಸ್ತಿ ಇರಬಹುದು .ಇಲ್ಲಿ ತಲೆನೋವಿಗೆ ಚಿಕಿತ್ಸೆ ಮಾಡಬೇಕೆ ಹೊರತು ಬಿ ಪಿ ಗೆ ಅಲ್ಲ .
ಅಂತೆಯೇ ದೃಷ್ಟಿ ದೋಷವೂ ತಲೆ ನೋವು ಉಂಟು ಮಾಡುವುದು ಕಡಿಮೆ . ಕನ್ನಡಕ ಹಾಕಿದರೆ ತಲೆ ನೋವು ಹೋಗದು
ಕಣ್ಣಿನ ಕಾಯಿಲೆಗಳಲ್ಲಿ ಗ್ಲೋಕೋಮ ತಲೆನೋವು ಉಂಟುಮಾಡಬಹುದು .
ಬಾಲಂಗೋಚಿ ; ದೂರ ದರ್ಶನದಲ್ಲಿ ಮಧ್ಯಾಹ್ನ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದರು .ಬೇರೆ ಗತಿಯಿಲ್ಲ
ದಿದ್ದುದರಿಂದ ನೋಡಿ ತಲೆ ನೋವು ಬರುತಿದ್ದುದು ಸಾಮಾನ್ಯ .ವಿಶೇಷವೆಂದರೆ ಈ ಚಿತ್ರಗಳ ಪ್ರಾಯೋಜಕರು
ಅಮೃತಾಂಜನ್!
ಅಮೃತಾಂಜನ್ ನಂತಹ ಔಷಧಿಗಳಿಗೆ ಕೌಂಟರ್ ಇರಿಟೆ೦ಟ ಎನ್ನುತ್ತಾರೆ .ಇವುಗಳನ್ನು ಹಚ್ಚಿದಾಗ ಆಗುವ ಉರಿ ನೋವನ್ನು
ಕಮ್ಮಿಯಾದಂತೆ ಭಾಸ ಉಂಟು ಮಾಡುತ್ತವೆ.ಜೀವನದಲ್ಲಿ ದೊಡ್ಡ ಸಂಕಟ ಬಂದಾಗ ಸಣ್ಣದು ಮರೆಯುವಂತೆ.
Good info Doctor :)
ಪ್ರತ್ಯುತ್ತರಅಳಿಸಿ