ಬೆಂಬಲಿಗರು

ಮಂಗಳವಾರ, ಏಪ್ರಿಲ್ 9, 2013

ಘನವೆತ್ತ ರಾಜ್ಯಪಾಲರು -೩

                                                    
 
                                                                        ಶ್ರೀ ಧರ್ಮ ವೀರ

ಧರ್ಮ ವೀರರು ಹಳೆಯ  ಆಯ್ ಸಿ. ಎಸ್ ಗೆ ಸೇರಿದವರು.ತನ್ನ ಪ್ರಾಮಾಣಿಕ ತೆ ಮತ್ತು ಕಾರ್ಯ ಕ್ಷಮತೆಯಿಂದ  ಕೇಂದ್ರದಲ್ಲಿ

ಕ್ಯಾಬಿನೆಟ್ ಸೆಕ್ರೆಟರಿ ಹುದ್ದೆಯ ವರೆಗೆ ಏರಿದವರು.ಇದೂ ನೆಹರು ಕಾಲದಲ್ಲಿ. ಆ ಮೇಲೆ ಜೆಕೊಸ್ಲಾವೆಕಿಯಾದಲ್ಲಿ ನಮ್ಮ

ರಾಯಭಾರಿಯಾಗಿ ಸೇವೆ.ಮತ್ತೆ ಹರ್ಯಾಣ,ಪಶ್ಚಿಮ ಬಂಗಾಳಗಳ ರಾಜ್ಯಪಾಲ. ಅಲ್ಲಿಂದ ಆಗಿನ ಮೈಸೂರು ರಾಜ್ಯದ

ರಾಜ್ಯ ಪಾಲರಾಗಿ ಬೆಂಗಳೂರಿಗೆ.ಇವರು ಬಂದಾಗ ಲವ ಕುಶ ರೆಂದು ಪ್ರಸಿದ್ದಿ ಪಡೆದಿದಿದ್ದ  ವೀರೇಂದ್ರ ಪಾಟೀಲ್ ಮತ್ತು

ಅವರ ಅರ್ಥ ಮಂತ್ರಿ ರಾಮಕೃಷ್ಣ ಹೆಗಡೆಯವರ  ಆಡಳಿತದ  ಸುವರ್ಣ ಕಾಲ.ಲೋಕ ಸಭಾ ಚುನಾವಣೆಯಲ್ಲಿ ಪಕ್ಷ ಬಹುಮತ

ಕಳೆದು ಕೊಂಡಾಗ  ಮಂತ್ರಿಮಂಡಲ ರಾಜೀನಾಮೆ. ರಾಷ್ಟ್ರಪತಿ ಆಡಳಿತ .ಧರ್ಮವಿರ ರ  ಅನುಭವ ಮತ್ತು ಕ್ಷಮತೆ ಯ

ಫಲ ಕನ್ನಡಿಗರಿಗೆ ಸಿಕ್ಕಿತು.ಭಯ ಅಥವಾ ಪಕ್ಷಪಾತ ,ರಾಗ ಅಥವಾ ದ್ವೇಷವಿಲ್ಲದ ಆಡಳಿತ.

ಪೋಲಿಸ್ ವ್ಯವಸ್ತೆಯ  ಸುಧಾರಣೆ ಬಗ್ಗೆ ಇವರ ನೇತೃತ್ವದಲ್ಲಿಯ ಆಯೋಗ ನೀಡಿದ ವರದಿ ಬಹು ಪ್ರಸಿದ್ದ.ಆದರೆ ಸ್ವಾರ್ಥ ದಿಂದ

ಅದರ  ಶಿಫಾರಸುಗಳ ಪಾಲನೆ  ಮಾಡಲು ರಾಜಕಾರಿಣಿಗಳಿಗೆ ಅಸಡ್ಡೆ.

ಮುಂದೆ ಇವರಿಗೆ ಪದ್ಮವಿಭೂಷಣ ಗೌರವ. ಇವರ ಜೀವನ ಚರಿತ್ರೆ 'ಮೆಮರೀಸ್ ಆಫ್ ಎ ಸಿವಿಲ್ ಸರ್ವೆಂಟ್' ಎಲ್ಲರು  ಓದ

ಬೇಕಾದ ಹೊತ್ತಿಗೆ.

                                            
                                                                ಶ್ರೀ ಟಿ ಏನ್ ಚತುರ್ವೇದಿ

ಶ್ರೀ ಚತುರ್ವೆದಿಯವರೂ ಐ ಎ ಎಸ ಗೆ ಸೇರಿದವರು.ಕೇಂದ್ರದಲ್ಲಿ ಗೃಹ ಕಾರ್ಯದರ್ಶಿ ರಾಗಿದ್ದಾಗ ಪಂಜಾಬ್ ,ಕಾಶ್ಮೀರ ಸಮಸ್ಯೆ

ಗಳ ಪರಿಹಾರಕ್ಕೆ ಯತ್ನಿಸಿದವರು.ಮುಂದೆ ಭಾರತದ  ಮಹಾ ಲೆಕ್ಕ ಪರಿಶೋದಕ ರಾಗಿ ನೇಮಕ .ಬೊಫೋರ್ಸ್

ಕರ್ಮಕಾಂಡವನ್ನು ವಿಮರ್ಶಿಸಿದವರು.ಮುಂದೆ ರಾಜ್ಯ ಸಭಾ ಸದಸ್ಯ.ಕರ್ನಾಟಕ ದ ರಾಜ್ಯಪಾಲರಾಗಿ ನಿಯುಕ್ತಿ.

ಈ ಅವಧಿಯಲ್ಲಿ ವಿಶ್ವ ವಿದ್ಯಾಲಯಗಳ  ಆಡಳಿತ  ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ.ಅವರ  ನಿರ್ಣಯಗಳು

 ವಿವಾದ  ಮುಕ್ತ.ರಾಜ್ಯದಲ್ಲಿ  ಕಾಂಗ್ರೆಸ್ ಜೆ ಡಿ ಎಸ. ಸರಕಾರಕ್ಕೆ ಜೆ ಡಿ ಎಸ. ಬೆಂಬಲ ಹಿಂತೆಗೆದು ಕೊಂಡಾಗ  ಮುಖ್ಯ ಮಂತ್ರಿ

ಧರ್ಮ ಸಿಂಗರಿಗೆ  ಬಹು ಮತ ಸಾಬೀತಿಗೆ  ಸಾಕಷ್ಟು ಸಮಯ ಕೊಟ್ಟುದು ಅವರ ನಿಸ್ಪಕ್ಷಪಾತ ನಡೆಗೆ ಸಾಕ್ಷಿ. ಅವರನ್ನು

ಏನ್ ಡಿ ಎ ಸರಕಾರ ನೇಮಿಸಿದ್ದರೂ ಅವರು  ಅದರ ಏಜೆಂಟ್ ರಂತೆ ಎಂದೂ ನಡೆಯಲಿಲ್ಲ .

ಶ್ರೀಯುತರಿಗೆ  ಪದ್ಮ ಭೂಷಣ ನೀಡಿ ಗೌರವಿಸಲಾಗಿದೆ.

ಬಾಲಂಗೋಚಿ:   ರೋಟರಿ ಲಯನ್ಸ್ ನವರೂ ಗವರ್ನರ್ ಗೆ ಸಮನಾಗಿ ರಾಜ್ಯಪಾಲ ಎಂದು ಬಳಸುತ್ತಾರೆ.ಇದು  ಅಸ್ಟು

ಸಮಂಜಸವೆನಿಸುವುದಿಲ್ಲ. ಆಡಳಿತಾಧಿಕಾರಿ ಎಂದು ಕರೆಯುವುದು ಹೆಚ್ಚು ಸೂಕ್ತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ