ಕೆಂಪು ರಕ್ತ ಕಣಗಗಳ ಉತ್ತರ ಕಾಂಡ ಮತ್ತು ಜಾಂಡಿಸ್
ಜಾಂಡಿಸ್ ,ಮಂಜ(ಲು) ಪಿತ್ತ. ಹಳದಿ ಕಾಯಿಲೆ ಜ್ವರ , ಕೆಮ್ಮು ಇತ್ಯಾದಿಗಳಂತೆ ಒಂದು ರೋಗ ಲಕ್ಷಣ ವೆ ಹೊರತು
ರೋಗವಲ್ಲ.
ಕೆಂಪು ರಕ್ತ ಕಣಗಳ ಆಯುಸ್ಸು ಸರಾಸರಿ ೧೨೦ ದಿನಗಳು .ಅವು ವಯಸ್ಸಾಗಿ ಇಲ್ಲವೇ ರೋಗ ಕಾರಣ ಮೊದಲೇ
ನಶಿಸಲ್ ಪಟ್ಟಾಗ ಬೈಲಿರುಬಿನ್ ಎಂಬ ವಸ್ತು ಉಂಟಾಗುವುದು.ನೀರಿನಲ್ಲಿ ಕರಗದ ಈ ವಸ್ತುವನ್ನು ಲಿವರ್ ನಲ್ಲಿ
ಕಿಣ್ವಗಳು ನೀರಿನಲ್ಲಿ ಕರಗುವ ವಸ್ತುವಾಗಿ ಮಾರ್ಪಡಿಸುತ್ತವೆ.ಲಿವರ್ ನಿಂದ ಪಿತ್ತ ನಾಳಗಳ ಮೂಲಕ ಕರುಳು ಸೇರಿ
ವಿಸರ್ಜಿಸಲ್ಪಡುತ್ತವೆ .ಸ್ವಲ್ಪ ಅಂಶ ಕರುಳಿನಿಂದ ಹೀರಲ್ಪಟ್ಟು ಮೂತ್ರದಲ್ಲಿ ವಿಸರ್ಜನೆಯಾಗುತ್ತದೆ. ಇದರಿಂದಲೇ ಮಲ
ಮೂತ್ರ ಹಳದಿ ಬಣ್ಣ ಪಡೆದಿರುವುದು.ಕೆಂಪು ರಕ್ತ ಕಣಗಳು ರೋಗದಿಂದ ಆಯುಸ್ಸು ಮುಗಿಯುವ ಮೊದಲೇ ಹೆಚ್ಚು ಹೆಚ್ಚು ನಾಶ ಗೊಂಡರೆ ರಕ್ತದಲ್ಲಿ ಬಿಲಿರುಬಿನ್ ಹೆಚ್ಕು ಆಗಿ ಕಾಮಾಲೆ ಬರ ಬಹುದು .ಮಲೇರಿಯಾ ಕಾಯಿಲೆ ಕೆಂಪು ರಕ್ತ ಕಣಗಳಿಗೆ ಬರುವ ಕಾರಣ ಮಲೇರಿಯಾ ದಲ್ಲಿ ಜಾಂಡಿಸ್ ಬರಲು ಒಂದೂ ಕಾರಣ .
ಲಿವೆರಿನ ಸೋಂಕು ಆದಲ್ಲಿ ಬೈಲಿರುಬಿನ್ ಪಿತ್ತ ನಾಳ ಹೋಗಬೇಕಿದ್ದುದು ರಕ್ತಕ್ಕೆ ಸೇರಿ ಅದರಿಂದ ರಕ್ತ ಚರ್ಮಕ್ಕೆ
ಹಳದಿ ಬಣ್ಣ ಬರುವುದು .ಕೆಲವೊಮ್ಮೆ ಪಿತ್ತ ನಾಳದಲ್ಲಿ ಕಲ್ಲು ,ಕ್ಯಾನ್ಸರ್ ಗಡ್ಡೆ ಬೈಲಿರುಬಿನ್ ಯುಕ್ತ ಪಿತ್ತ ರಸಕ್ಕೆ ತಡೆಯೊಡ್ಡಿ
ಜಾಂಡಿಸ್ ಉಂಟಾಗಬಹುದು.
ಸಾಮಾನ್ಯವಾಗಿ ಲಿವರ್ ನ ಸೋಂಕಿನಿಂದ ಜಾಂಡಿಸ್ ಬರುವುದು,. ಮಲೇರಿಯ ,ಇಲಿ ಜ್ವರ , ಹೆಪಟೈಟಿಸ್ ವೈರಸ್
ಸೋಂಕಿನಿಂದ ಲಿವರ್ ಕಾಯಿಲೆ ಬರಬಹುದು. ವೈರಸ್ಗಳಲ್ಲಿ ಎ,ಬಿ, ಸಿ, ಇ ಮುಖ್ಯವಾದವು.ಇ ಮತ್ತು ಎ ನೀರಿನ ಮೂಲಕ
ಹರಡುವಂತಹವು.ಬಿ ಮತ್ತು ಸಿ ರಕ್ತ ,ಲೈಂಗಿಕ ಸಂಬಂಧ ಇತ್ಯಾದಿ ಗಳಿಂದ ಹರಡುವಂತಹವು.ಹೆಪಟೈಟಿಸ್ ಬಿ ಮತ್ತು ಸಿ
ದೂರಗಾಮಿ ದುಷ್ಪರಿಣಾಮ ಉಂಟು ಮಾಡುವಂತಹವು.ಎ ಮತ್ತು ಬಿ ವೈರಸ್ಸಿಗೆ ಲಸಿಕೆಗಳಿವೆ.ಬಿ ಮತ್ತು ಸಿ ಗೆ ಔಷಧಿಯೂ ಇದೆ .ಹೆಚ್ಚಿನ ವೈರಸ್ ಕಾಯಿಲೆಗಳಂತೆ ವೈರಲ್ ಹೆಪಟೈಟೀಸ್ ತನ್ನಿಂದ ತಾನೇ ಶಮನ ಗೊಳ್ಳುವುದು .ಅದರಿಂದ ನೀವು ಈ ಕಾಲದಲ್ಲಿ (ಲಿವರ್ ಬಾಧಕ ವಸ್ತುಗಳನ್ನು ಬಿಟ್ಟು )ಯಾವ ಸೊಪ್ಪು ಕೊಟ್ಟರೂ ಅದಕ್ಕೆ ಕ್ರೆಡಿಟ್ ಸಿಗುವುದು .ನೆಲ ನೆಲ್ಲಿಯನ್ನು ಕೂಡಾ ಹಲವು ಟ್ರಾಯಲ್ ಗಳಲ್ಲಿ ಪರೀಕ್ಷೆ ಮಾಡಿ ಅದರ ಉಪಯುಕ್ತತೆ ದೃಡ ಪಟ್ಟಿಲ್ಲ .
ಮಲೇರಿಯ ,ಇಲಿ ಜ್ವರ ಕ್ಕೆ ಚಿಕಿತ್ಸೆ ಇದೆ.ವೈರಸ್ ಕಾಯಿಲೆಗಳನ್ನು ತಡೆಗಟ್ಟ ಬಹುದು.ಇಲ್ಲಿಜಾಂಡಿಸ್ ಎಂದು ಹಳ್ಳಿ ಮದ್ದು ಮಾಡಿ ಕೊಂಡು ಕೂತರೆ ಪ್ರಾಣ ಹೋದೀತು .
ಈ ತರಹದ ಸೊಂಕುಗಳಲ್ಲಿ ಮೊದಲು ಹಸಿವೆ ಕಮ್ಮಿ ಇರುತ್ತದೆ. ಕೊಬ್ಬು ಪದಾರ್ಥ ಜೀರ್ಣಕ್ಕೆ ಪಿತ್ತ ರಸ ಅವಶ್ಯ ವಿರುವುದರಿಂದ
ಅಜೀರ್ಣ ವಾದೀತು .ಹೊರತಾಗಿ ಯಾವುದೇ ಪಥ್ಯದ ಅವಶ್ಯಕತೆ ಯಿಲ್ಲ .ರೋಗ ಗುಣವಾಗಲು ಪೌಷ್ಟಿಕ ಅಂಶಗಳು
ಅವಶ್ಯವಿದ್ದು ಪಥ್ಯದಿಂದ ಹಾನಿಯಾಗುವುದೇ ಹೆಚ್ಚು.
ಲಿವರ್ ಗ್ಲುಕೋಸ್ ಉಂಟು ಮಾಡುವ ಫ್ಯಾಕ್ಟರಿ ,ಅದರ ಕಾಯಿಲೆಯಲ್ಲಿ ಸಿಹಿ ಜಾಸ್ತಿ ಸೇವಿಸಲು ಹೇಳುವ ಕಾರಣ ಇದು.
ಕಬ್ಬಿನ ಹಾಲೇ ಆಗಬೇಕೆಂದು ಇಲ್ಲ. ಅನೈರ್ಮಲ್ಯ ಇರುವ ಅಂಗಡಿ ಕಬ್ಬಿನ ಹಾಲು ಕುಡಿಯದಿರುವುದೇ ಲೇಸು.
ಎಳೆ ಶಿಶು ಗಳಲ್ಲಿ ಬರುವ ಜಾಂಡಿಸ್ ಸತ್ತ ಕೆಂಪುರಕ್ತ ಕಣ ಗಳ ವಿಲೇವಾರಿ ಮಾಡುವ ಕಿಣ್ವಗಳು ಸಶಕ್ತ ವಾಗಿಲ್ಲದಿದ್ದುದರಿಂದ
ಬರುವುದು ,ಕೆಲ ದಿನಗಳಲ್ಲಿ ಸರಿ ಹೋಗುವುದು.
.
good info
ಪ್ರತ್ಯುತ್ತರಅಳಿಸಿ