ಬೆಂಬಲಿಗರು

ಗುರುವಾರ, ಏಪ್ರಿಲ್ 11, 2013

ಯುಗಾದಿ

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ಹೊಂಗೆ ಹೂವ ತೊಂಗಳಲಿ,
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ.
ಬೇವಿನ ಕಹಿ ಬಾಳಿನಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.

ವರುಷಕೊಂದು ಹೊಸತು ಜನ್ಮ,
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ.
ಒಂದೇ ಒಂದು ಜನ್ಮದಲಿ
ಒಂದೇ ಬಾಲ್ಯ, ಒಂದೇ ಹರೆಯ
ನಮಗದಷ್ಟೇ ಏತಕೋ.

ನಿದ್ದೆಗೊಮ್ಮೆ ನಿತ್ಯ ಮರಣ,
ಎದ್ದ ಸಲ ನವೀನ ಜನನ,
ನಮಗೆ ಏಕೆ ಬಾರದು?
ಎಲೆ ಸನತ್ಕುಮಾರ ದೇವ,
ಎಲೆ ಸಾಹಸಿ ಚಿರಂಜೀವ,
ನಿನಗೆ ಲೀಲೆ ಸೇರದೂ.

ಯುಗ ಯುಗಗಳು ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
                                                         ಅಂಬಿಕಾತನಯದತ್ತ
ಈ ಹಾಡನ್ನು ಕುಲವಧು ಚಿತ್ರದಲ್ಲಿ ನೋಡಿರಿ (ಅಪ್ ಲೋಡರ್ ಗೆ ವಂದಿಸುತ)

www.youtube.com/watch?v=T3O211xkJ8o


ಯುಗಾದಿ ಭವಿಷ್ಯ
 ಈ ವರ್ಷ ಆದಿಯಲ್ಲಿ ನೀರಿನ ಕೊರತೆಯಿಂದ ಮಳೆ ಬೆಳೆಗಳಿಗೆ ಹಾನಿ. ಧಾನ್ಯ ,ತರಕಾರಿಗಳ ಬೆಲೆ ಗಗನಕ್ಕೆ .

ಅರ್ಥಿಕ ಪರಿಸ್ಥಿತಿ ಏರು ಪೇರು.

ಜೂನ್ ಜುಲೈ ಮಳೆ ಹೊಂದಿ  ಕೊಂಡು ಮನೆಯ ಮತ್ತು ಮನಶಾಂತಿ ನಿರ್ಧಾರ.

ಸಧ್ಯಕ್ಕೆ ರಾಜಕಾರಣ ಸಂಬಂದಿ ಉದ್ಯೋಗ ಉತ್ತಮ. ಸಾಫ್ಟ್ವೇರ್   ಉದ್ಯೋಗ ಅವಕಾಶ ಸ್ವಲ್ಪ ಕಮ್ಮಿ. ಅದರ ಪರಿಣಾಮ

ಇತರ ಕ್ಷೇತ್ರಗಳಲ್ಲೂ ಕಾಣಿಸದಿರದು. ವಿವಾಹಾನ್ವೇಷಿ ಹುಡುಗಿಯರು ಇತರೇ ಉದ್ಯೋಗಿಗಳನ್ನೂ ಪರಿಗಣಿಸುವುದು

ಉತ್ತಮ.

ವರ್ಷದ ಕೊನೆಯಲ್ಲಿ ಶಾಂತಿ ಸಿಗಬಹುದು.ಸುಬ್ರಹ್ಮಣ್ಯ ಸೇವೆ ಎಲ್ಲರಿಗೂ ಒಳ್ಳೆಯದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ