ಬೆಂಬಲಿಗರು
ಮಂಗಳವಾರ, ಮೇ 28, 2013
ನಮ್ಮ ಊರಿನ ಹೆಮ್ಮೆಯ ಸಂಗೀತ ನಕ್ಷತ್ರ - ರಂಜನಿ ಗುರುಪ್ರಸಾದ್
ಕರ್ನಾಟಕ ಸಂಗೀತ ಕ್ಷೇತ್ರ ದ ಯುವ ತಲೆ ಮರೆಯ ಅಗ್ರ ಗಣ್ಯ ಹಾಡು ಗಾರ್ತಿ ರಂಜನಿ ಗುರುಪ್ರಸಾದ್ .ತಂದೆ ಅರವಿಂದ
ಹೆಬ್ಬಾರ್ ,ಉಡುಪಿ ಎಂ ಜಿ ಎಂ ಕಾಲೇಜ್ ನಲ್ಲಿ ಪ್ರಾಧ್ಯಾಪಕ ರಾಗಿದ್ದವ ರು ಮತ್ತು ತಾಯಿ ಶ್ರೀಮತಿ ಅನ೦ತ
ಲಕ್ಷ್ಮಿ .ಇಬ್ಬರೂ ಸಂಗೀತ ದಲ್ಲಿ ಪರಿಶ್ರಮ ಇದ್ದವರು .ಆರಂಭದ ಗುರುಗಳೂ ಅವರೇ. ನಂತರ ವಿದ್ವಾನ್ ಮಧೂರು
ಶ್ರೀ ಬಾಲಸುಬ್ರಹ್ಮಣ್ಯಂ ಅವರಲ್ಲಿ ತರಬೇತಿ. ಖ್ಯಾತ ಗಾಯಕಿ ಶ್ರೀಮತಿ ಸೌಮ್ಯ ಅವರ ಮುಂದಿನ ಮಾರ್ಗದರ್ಶಿ .
ಕರ್ನಾಟಕ ಸಂಗೀತ ದ ಮೇರು ಶ್ರೀ ಚೆಂಗಲ್ ಪೆಟ್ ರಾಮನಾಥನ್ ಅವರಲ್ಲ್ಲೂ ಶಿಷ್ಯ ವೃತ್ತಿ.
ಸಣ್ಣ ವಯಸ್ಸಿನಲ್ಲಿ ಇಷ್ಟೆಲ್ಲಾಲ್ಲಾ ಸಾಧನೆ ಸುಮ್ಮನೆ ಆಗಲಿಲ್ಲ. ಅದಕ್ಕಾಗಿ ಚೆನೈ ನಲ್ಲಿ ಹಾಸ್ಟಲ್ ವಾಸ, ಸಾಮಾನ್ಯ
ವಿದ್ಯಾಭ್ಯಾಸ ಅಲ್ಲಿಯೇ ಮುಂದುವರಿಕೆ . ಮದ್ರಾಸ್ ವಿಶ್ವ ವಿದ್ಯಾಲಯದಿಂದ ಎಂ ಮ್ಯುಸಿಕ್ ಪದವಿ.
ಚೆನ್ನೈ ನ ಪ್ರಮುಖ ಸಭಾಗಳಲ್ಲಿ ಮನ್ನಣೆ.ಆಕಾಶವಾಣಿ ಮತ್ತು ದೂರದರ್ಶನ್ ಎ ಗ್ರೇಡ್ ಕಲಾವಿದೆ .
ಇ೦ಜಿನಿಯರ್ ಗುರುಪ್ರಸಾದ್ (ಸುಳ್ಯ ಪದವಿನರು) ಪತಿ. ಇವರ ಪ್ರತಿಭೆಗೆ ತುಂಬು ಪ್ರೋತ್ಸಾಹ .ಇವರ
ಹಾಡುಗಾರಿಕೆಯ ಒಂದು ತುಣುಕು ನೋಡಿರಿ.(ಅಪ್ ಲೋಡರ್ಗೆ ವಂದಿಸುತ)
https://www.youtube.com/watch?v=cQpm547iqpM
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ