ಬೆಂಬಲಿಗರು

ಶನಿವಾರ, ಮೇ 4, 2013

ಮರೆಯಲಾಗದ ಮಹನೀಯರು -ಶ್ರೀ ಬಾಬುಭಾಯಿ ಜೆ ಪಟೇಲ್

                                 

                                              

ಖ್ಯಾತ ಲೇಖಕ ಎಸ ಎಲ್ ಭೈರಪ್ಪನವರ ಆತ್ಮ ಚರಿತ್ರೆ ಭಿತ್ತಿ ಯಲ್ಲಿ ಅವರು ಗುಜರಾತಿನ ವಲ್ಲಭ ಭಾಯಿ ಪಟೇಲ್ ವಿಶ್ವವಿದ್ಯಾನಿಲಯಕ್ಕೆ

 

ತತ್ವ ಶಾಸ್ತ್ರ ಅಧ್ಯಾಪಕರಾಗಿ ಹೋದ ಪ್ರಸ್ತಾಪ ಬರುತ್ತದೆ.ಅವರನ್ನು ಆಯ್ಕೆ ಮಾಡಿದ ಸಮಿತಿಯ ಅದ್ಯಕ್ಷರಾಗಿದ್ದವರು ನಿವೃತ್ತ  ಐ ಸಿ ಎಸಅಧಿಕಾರಿ ಮತ್ತು ಮುಂದೆ ಕೇಂದ್ರದ ಅರ್ಥ ಸಚಿವರಾದ ಎಚ್ ಎಂ ಪಟೇಲ್ ಅವರು.ಆಗ ವಿಶ್ವ ವಿದ್ಯಾನಿಲಯದ ಉಪಕುಲಪತಿಯಾಗಿದ್ದವರು  ಶ್ರೀ ಬಾಬು ಭಾಯಿ ಪಟೇಲ್ ಅವರು .ಇವರು ಗಾಂಧಿ ವಾದಿಯಾಗಿದ್ದುದಲ್ಲದೆ ಅಲ್ಲದೆ ಉತ್ತಮ ಆಢಳಿತಗಾರರು ಆಗಿದ್ದರೆಂದು ಭೈರಪ್ಪನವರು ಬರೆದಿರುವರು. ತತ್ವ್ಸ ಶಾಸ್ತ್ರ ವಿಭಾಗ ಆರಂಬಿಸಿ ಅದಕ್ಕೆ ಬೇಕಾದ ಅನುಕೂಲತೆಗಳನ್ನು ಮಾಡಿ ಕೊಟ್ಟರು ಎಂದು ನೆನಪಿಸಿಕೊಳ್ಳುತ್ತಾರೆ.ಒಮ್ಮ ಹಾಸ್ಟೆಲ್ ನ ಕೆಲವು ಹುಡುಗರು ಊಟದ ಏಕತಾನತೆಯ ಬಗ್ಗೆ ಇವರಲ್ಲಿ ಪ್ರಸ್ತಾಪಿಸಿ ರಜಾ ದಿನಗಳಲ್ಲಿ ಭೂರಿಭೋಜನ  ಕೊಡಬೇಕೆಂಬ ಬೇಡಿಕೆ ಇತ್ತರು .ಅದಕ್ಕೆ ಅವರು ಭೂರಿ ಭೋಜನ ಗಳಿಂದ ಮೆಸ್ಸ್ ಬಿಲ್ ಅಧಿಕ ವಾಗುವುದು .ಎಷ್ಟೋವಿದ್ಯಾರ್ಥಿಗಳು ಸಾಲ ಸೋಲ ಮಾಡಿ ಕಲಿಯುತ್ತಿರುತ್ತಾರೆ.ನಮ್ಮ ಪ್ರಾಚೀ ನ ಗುರುಕುಲಗಳಲ್ಲಿ ರಾಜನ ಮಗನಾಗಲೀ ,ಶ್ರೀಮಂತ

ವ್ಯಾಪಾರಿಯ ಮಗನಾಗಲೀ ,ಬಡಗಿ ಕಮ್ಮಾರ ದನಗಾಹಿಯ ಮಗನಾಗಲೀ ಎಲ್ಲರೂ ಒಂದೇ ತರಹದ ವಸ್ತ್ರ ಧರಿಸುತ್ತಿದ್ದರು.ಹತ್ತಿರದಊರಿಗೆ ಹೋಗಿ ಭವತಿ ಭಿಕ್ಷಾಂದೇಹಿ ಅಂತ ಬೇಡಿ ತರುತ್ತಿದ್ದರು .ಅವರ ಅನ್ನ ಅವರೇ ದುಡಿಯಬೇಕು.ಸಹನಾವವತು ಸಹನವ್ ಭುನಕ್ತು ಎಂದರೆ ಇದು ಅರ್ಥ.ನಮ್ಮ ಸಹಪಾತಿಗಳು ಮಾಡುವ ಊಟ ನಮಗೆ ಬೇಡ ,ಬಡಾ ಖಾನ ಬೇಕೆಂದರೆ ಏನರ್ಥ ?ಎ೦ದ ರಂತೆ.

ಒಮ್ಮೆ ಕಾಳಿದಾಸ ಜಯಂತಿಯಂದು ಅವರು ಮಾಡಿದ ಆಶು ಭಾಷಣ ಸಂಸ್ಕೃತ ವಿದ್ವಾಂಸರು ಮಾಡಿದ್ದುದಕ್ಕಿಂತಲೂ ಅಮೋಘ ವಾಗಿತ್ತುಎಂದು ಭೈರಪ್ಪ ಅಭಿಪ್ರಾಯ ಪಡುತ್ತಾರೆ.

                                        List of Chief Minister of Gujarat with Bio and Timeline - Cool Gujarati |  All about Gujarat and Gujaratis

ಮುಂದೆ ಇದೆ ಭಾಬು ಭಾಯಿ ೧೯೭೭ ರಲ್ಲಿ ಗುಜರಾತಿನ  ಮಂತ್ರಿ  ಮತ್ತು ಮುಖ್ಯ ಮಂತ್ರಿ ಗಳಾದರು. ಮಂತ್ರಿಗಳಾಗಿದ್ದಾಗ ಅವರ ವೇಷ ಭೂಷಣಸರಳ ಉಡುಪು ಕೈಯ್ಯಲ್ಲಿ ಒಂದು ಹತ್ತಿ ಬಟ್ಟೆಯ ಚೀಲ .ಅದಿಕೃತ ಪ್ರವಾಸ ವೇಳೆಯಲ್ಲಿ ಅವರುಪಯಣಿಸುತ್ತಲೇ ಊಟ ಉಪಹಾರ ಮುಗಿಸುತ್ತಿದ್ದರು .ಅದಕ್ಕಾಗಿ ಪ್ರವಾಸಿ ಬಂಗಲೆಗೆ ಹೋಗುತ್ತಿರಲಿಲ್ಲ .ಮಂತ್ರಿಯಾಗಿರುವಾಗ ತಮ್ಮ ಸಮಯ ವೆಲ್ಲ ಸಾರ್ವ ಜನಿಕರಿಗೆ ಮೀಸಲಿರಬೇಕೆಮ್ಬುದು ಅವರ ನಂಬಿಕೆ.ಇನ್ನು ಸರಕಾರಿ ವೆಚ್ಚದಲ್ಲಿ ಐಶಾರಮಿ ಹೋಟೆಲುಗಳಿಗೆ (ಈಗಿನರಾಜಕಾರಿಣಿಗಳಂತೆ) ಹೋಗುವ ಮಾತೆಲ್ಲಿ?

 ಅವರು ಮಂತ್ರಿ ಯಾಗಿದ್ದಾಗ ವಾರಕ್ಕೆ ಒಮ್ಮೆ ಅಹಮದಾಬಾದ್ ನಿಂದ ತಮ್ಮ ಊರು  ನಾನ್ದ್ಯಾದ್ ಗೆ ಸರಕಾರೀ ಬಸ್ ನಲ್ಲಿ ಬರುತಿದ್ದರು.ತಮ್ಮ ಮನೆಗಿಂತ ನಾಕು ನೂರು  ಯಾರ್ಡ್ ಮೊದಲಿನ ಬಸ್ ಸ್ಟಾಪ್ ನಲ್ಲಿ ಇಳಿದು ನಡೆಯುತ್ತಿದ್ದರು.(ಅವರ ಮನೆ ರಸ್ತೆ ಬದಿಯಲ್ಲಿ ಇದ್ದರೂ  ಎಕ್ಸ್ ಪ್ರೆಸ್ ಬಸ್ ಸ್ಟಾಪ್ ಇರಲಿಲ್ಲ ) ಬೇಕೆಂದರೆ ಡ್ರೈವರ್ ಇವರಮನೆಯ ಮುಂದೆ ನಿಲ್ಲಿಸುತ್ತಿದ್ದ. ಇದರಲ್ಲಿ ಕಷ್ಟ ವಾಗುತ್ತಿದ್ದುದು ಆ ಭಾಗದ ರೆವೆನ್ಯೂ ವಿಭಾಗದ ಮುಖ್ಯನಿಗೆ .ಸಚಿವರು ತನ್ನ ಏರಿಯಾಕ್ಕೆಬರುವಾಗ ರಾಜ ಮರ್ಯಾದೆಗಳೊಂದಿಗೆ  ಸ್ವೀಕರಿಸುವುದು ಪ್ರೋಟೋಕಾಲ್ ಅಲ್ಲವೇ? ಆದರೆ ಭಾಬು ಭಾಯಿ ನೀವು ಬರುವ ಅವಶವಿಲ್ಲ :ನಾನು ನನ್ನ ಮನೆಗೆ ಹಿಂತಿರುಗುತ್ತಿದ್ದೇನೆ ಅಷ್ಟೆ ಎಂದರಂತೆ.

 

ಮೂಲ  ೧ ಭಿತ್ತಿ  ಲೇ ಎಸ ಎಲ್ ಭೈರಪ್ಪ

          ೨ The Insiders View by Javid Choudhury

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ