(೨೨.೧೦.೧೯೦೩ -೩.೬.೧೯೯೪)
ಮಹಾತ್ಮ ಗಾಂಧೀ ಮತ್ತು ಸರ್ದಾರ್ ಪಟೇಲ್ ಅವರಿ೦ದ ಪ್ರಭಾವಿತನಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ
ತೊಡಗಿಸಿ ಕೊಂಡವರು.ಸಹಕಾರಿ ಚಳುವಳಿಯಲ್ಲಿ ಮುಂಚೂಣಿಯಲ್ಲಿ ಇದ್ದವರು. ಹಾಲು ಉತ್ಪಾದಕ ರೈತರನ್ನು
ಮಧ್ಯವರ್ತಿಗಳು ಶೋಷಣೆ ಮಾಡುವುದನ್ನು ಕಂಡು ೧೯೪೬ರಲ್ಲಿ ಖೇರಾ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ
ಸಂಘ ಆರಂಬಿಸಿದರು.ಇದರ ಸುಪರ್ದಿಯಲ್ಲಿಯೇ ಮುಂದೆ ಅಮುಲ್ ಸಂಸ್ಥೆ ಆರ೦ಭವಾಯಿತು ಮತ್ತ್ತು ದೇಶದಲ್ಲಿ
ಬಿಳಿ(ಕ್ಷೀರ) ಕ್ರಾಂತಿಗೆ ನಾಂದಿ ಹಾಡಿತು. ಈಯೆಲ್ಲಾ ಕಾರ್ಯದಲ್ಲಿ ರಾಮನಿಗೆ ಹನುಮಂತ ಇದ್ದಂತೆ ವರ್ಗ್ಹಿಸ್ ಕುರಿಯನ್
ಇದ್ದರು. ತರುಣ ಕುರಿಯನ್ ಅವರನ್ನು ಆನಂದಕ್ಕೆ ಕರೆಸಿ ಅವರೆಲ್ಲಾ ಕನಸು ಕೆಲಸಗಳಿಗೆ ಬೆನ್ನೆಲುಬಾಗಿ ನಿಂತವರು.
ಇವರ ಸೇವೆ ಗುರಿತಿಸಿ ನಮ್ಮ ಸರಕಾರ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿದ್ದರೆ ರೇಮನ್ ಮ್ಯಾಗಸೆಸೆ ಯಂತ
ಅಂತರ ರಾಷ್ಟ್ರೀಯ ಮನ್ನಣೆಯೂ ಇವರಿಗೆ ಬಂತು.
"ದೇಶ ಮತ್ತು ಸಮಾಜ ವನ್ನು ಸಣ್ಣ ಮನಸಿನ ದೊಡ್ಡ ಮನುಷ್ಯರಿಂದ ಬಲ ಪಡಿಸಲಾಗದು ,ಬದಲಾಗಿ ದೊಡ್ಡ ಮನಸಿನ
ಸಣ್ಣ ಮನುಷ್ಯರು ಅವನ್ನು ಸಾದಿಸ ಬಲ್ಲರು " ಇದು ಅವರ ಉವಾಚ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ