ಬಹಳ ರೋಗಿಗಳು ನನ್ನಲ್ಲಿ ಸ್ಟ್ರಾಂಗ್ ಮಾತ್ರೆ ಕೊಡಬೇಡಿ ದಾಕ್ತ್ರೆ ,ನನಗೆ ಉಷ್ಣ ಆಗುತ್ತದೆ ಎನ್ನುತ್ತಾರೆ .ಈ ಸ್ಟ್ರಾಂಗ್ ಎಂಬುದು
ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದೊಂದು ಆಗಿರುತ್ತದೆ. ಕೆಲವು ನಂಬಿಕೆಗಳು ಮತ್ತು ಅವುಗಳ ಸತ್ಯಾಸತ್ಯತೆ ವಿಶ್ಲೇಷಿಸೋಣ
೧. ತಿಂದಾಗ ಹೊಟ್ಟೆ ಉರಿ ಉಂಟಾದರೆ ಅದು ಸ್ಟ್ರಾಂಗ್. ಇದು ಸತ್ಯಕ್ಕೆ ದೂರ .ಜಠರ ದಲ್ಲಿ ಆಮ್ಲ ಅಧಿಕ ಮಾಡುವಂತಹ ಮತ್ತು
ಪ್ರತ್ಯಾಮ್ಲಗಳನ್ನು ಕಡಿಮೆ ಮಾಡುವ ಔಷಧಗಳು ಹೊಟ್ಟೆ ಉರಿ ಉಂಟು ಮಾಡುತ್ತವೆ .ಉದಾ ಆಸ್ಪಿರಿನ್. ದೈಕ್ಲೊಫೆನಕ್ ನಂತಹ
ನೋವು ನಿವಾರಕಗಳು .ಇವು ರೋಗ ನಿವಾರಣೆಗೆ ಅವಶ್ಯವಿದ್ದರೆ ತೆಗೆದುಕೊಳ್ಳಲೇ ಬೇಕು.ಬಹುತೇಕ ಹೃದಯ ಸಂಬಂಧಿ
ಕಾಯಿಲೆಗಳಲ್ಲಿ ಆಸ್ಪಿರಿನ್ ಅನಿವಾರ್ಯ .
೨. ಮಾತ್ರೆಯಲ್ಲಿರುವ ಔಷಧದ ತೂಕದ ಮೇಲೆ ಅದರ ಬಲ ನಿರ್ದರಿಸುವುದು ತಪ್ಪು.ಉದಾಹಹರಣೆ ಸಕ್ಕರೆ ಕಾಯಿಲೆಗೆ
ಉಪಯೋಗಿಸುವ ಮೆಟ್ಫಾರ್ಮಿನ್ (ಗ್ಲಿಸಿ ಫೇಜ್) ೫೦೦ ಮಿಲ್ಲಿ ಗ್ರಾಂ ಔಷಧಿ ಯು ಅದೇ ರೋಗಕ್ಕೆ ಉಪಯೋಗಿಸುವ
ಗ್ಲಿಬೆನ್ಕ್ಲಮೈದ್ (ದಯೋನಿಲ್) ೫ ಮಿಲ್ಲಿ ಗ್ರಾಂ ಔಷಧಿಗಿಂತ ಎಸ್ಟೋ ಕಮ್ಮಿ ಶಕ್ತಿಯದು.ಅಲ್ಲದೆ ಮೆಟ್ ಫಾರ್ಮಿನ್ ನ
ಗಾತ್ರ ವೂ ದೊಡ್ಡದು. ಆದುದರಿಂದ ದೊಡ್ಡ ಗಾತ್ರದ ಮಾತ್ರೆಗಳು ಹೆಚ್ಚು ಸ್ಟ್ರಾಂಗ್ ಎಂಬ ನಂಬಿಕೆಯೂ ತಪ್ಪು.
೩.ಇದೇ ರೀತಿ ಔಷಧಿಯ ದರ ಅಧಿಕವಿದ್ದರೆ ಅದು ಸ್ಟ್ರಾಂಗ್ ಎಂದು ಕೆಲವರು ಭಾವಿಸುತ್ತಾರೆ. ಇದು ಕೂಡ
ವಾಡಿಕೆಯಲ್ಲಿ ಇರುವ ತಪ್ಪು ಕಲ್ಪನೆ.
೪ ಕೆಲವು ಮಾತ್ರೆಗಳು ಮಲ ಬಧ್ಧತೆ ಉಂಟು ಮಾಡುತ್ತವೆ .ಉದಾ ಸಾಮಾನ್ಯ ಆಮ್ಲ ಹಾರಕ (antacid) ಮಾತ್ರೆಗಳು
ಮಲ ಬದ್ದತೆ ಉಂಟು ಮಾಡುತ್ತವೆ .ಎಂದೊಡನೆ ಅವು ಸ್ಟ್ರಾಂಗ್ ಎನ್ನುವುದು ಸರಿಯಲ್ಲ.
೫. ಅಸ್ಥಮಾ ಕಾಯಿಲೆಗೆ ಇನ್ಹೇಲರ್ (inhalor) ಎಂಬ ಶ್ವಾಶ ಕೋಶಕ್ಕೆ ನೇರ ಸೇವಿಸುವ ಔಷಧಿ ಕೊಡುತ್ತಾರೆ. ಬಹಳ
ಮಂದಿ ಇದು ತುಂಬಾ ಸ್ಟ್ರಾಂಗ್ .ಒಮ್ಮೆ ಈ ತರಹದ ಔಷಧಿ ಸೇವಿಸಿದರೆ ಮತ್ತೆ ಯಾವಾಗಲೂ ಅದು ಬೇಕಾಗುವುದು
ಎಂದು ತಿಳಿದಿರುತ್ತಾರೆ.ಆದರೆ ಇವುಗಳಲ್ಲಿ ಇರುವ ಔಷಧಿ ಮೈಕ್ರೋ ಗ್ರಾಂ( ಅಂದರೆ ಮಿಲ್ಲಿ ಗ್ರಾಂನ ಸಾವಿರದ ಒಂದನೇ
ಭಾಗ.) ಅಸ್ಥಮಾ ದ ತಿನ್ನುವ ಮಾತ್ರೆಗಳಲ್ಲಿ ಔಷಧಿ ಮಿಲ್ಲಿ ಗ್ರಾಂ ಗಳಲ್ಲಿ ಇರುತ್ತದೆ.ಆದುದರಿಂದ ಇನ್ ಹೇಲರ್ ಗಳು
ಮಾತ್ರೆ ಗಳಿಂದ ಕಡಿಮೆ ಸ್ಟ್ರಾಂಗ್ ಎಂದಾಯಿತಲ್ಲವೇ.?
ಔಷಧಿಯಲ್ಲಿ ಸ್ಟ್ರಾಂಗ್ ವೀಕ್ ಎಂದು ಇಲ್ಲ .ಆಯಾಯ ರೋಗಕ್ಕೆ ವೈಜ್ಞಾನಿಕವಾಗಿ ನಿರ್ಧಾರಿತವಾದ ಮದ್ದು ಮತ್ತ್ತು ಅದರ
ಡೋಸ್ ಇರುತ್ತದೆ. ವೈದ್ಯರ ಸಲಹೆ ಮೇರೆಗೆ ಅದನ್ನು ತೆಗೆದು ಕೊಳ್ಳ ಬೇಕು .ಅದರಂತೆ ನನಗೊಂದು ಸ್ಟ್ರಾಂಗ್ ಡೋಸ್
ಮದ್ದು ಕೊಡಿ .ಒಂದೇ ದಿನದಲ್ಲಿ ಗುಣ ಆಗ ಬೇಕೆಂದು ಕೇಳುವುದೂ ತರವಲ್ಲ.
ಬಾಲಂಗೋಚಿ. ; ಸ್ವಲ್ಪ ವಾದರೂ ಅಡ್ಡ ಪರಿಣಾಮ ಇಲ್ಲ್ಲದ ಔಷಧಿ ಇಲ್ಲ .ಒಂದು ವೇಳೆ ಇದ್ದ್ದಲ್ಲಿ ಅದಕ್ಕೆ ಪರಿಣಾಮವೂ ಇಲ್ಲ.
ಇಂಜೆಕ್ಷನ್ ಮಾತ್ರೆ ಗಳಿಂದ ಹೆಚ್ಚು ಸ್ಟ್ರಾಂಗ್ ಅಲ್ಲ .ಆದರೆ ಕೆಲವೊಂದು ಔಷಧಗಳು ಬೇಗನೆ ರಕ್ತ ಸೇರಿ ಪರಿಣಾಮ ಉಂಟು ಮಾಡಲು
ಇಂಜೆಕ್ಷನ್ ಆವಶ್ಯ.
(ಚಿತ್ರಗಳ ಮೂಲಗಳಿಗೆ ಅಭಾರಿ)
saamaanyavaagi janarannu kaaDuvantaha aarogya samasyegaLige neevu bareyuva lEkhanagaLu tumbaa upayuktavaagive.
ಪ್ರತ್ಯುತ್ತರಅಳಿಸಿsarvE janaa sukhino bhavantu....
-Veena