ಬೆಂಬಲಿಗರು

ಸೋಮವಾರ, ಮೇ 27, 2013

ಮರೆಯಲಾಗದ ಮಹನೀಯರು -ಕಾರ್ನಾಡ್ ಸದಾಶಿವ ರಾವ್

                                             

1881-1937

ಮಂಗಳೂರಿನಲ್ಲಿ  ಕೆ ಎಸ ರಾವ್ ರೋಡ್ ಎಂದರೆ  ಬೆಂಗಳೂರಿನ  ಕೆಂಪೇಗೌಡ ರಸ್ತೆಯಂತೆ .ಹಂಪನಕಟ್ಟೆಯಿಂದ 

ಕೊಡಿಯಾಲ್ ಬೈಲಿಗೆ  ಹೋಗುವ ಮುಖ್ಯ ರಸ್ತೆ . ಸ್ವಾತಂತ್ರ್ಯ ಹೋರಾಟ ಗಾರ  ತ್ಯಾಗ ವೀರ  ಕಾರ್ನಾಡ ಸದಾಶಿವ 

ರಾವ್ ಅವರ ಹೆಸರು ಈ ರಸ್ತೆಗೆ ಇಡಲಾಗಿದೆ .ಬೆಂಗಳೂರಿನಲ್ಲಿಯೂ ಸದಾಶಿವ ಬಡಾವಣೆ ಗೆ ಇವರ ಹೆಸರು .

ಕೆ ಎಸ ರಾವ್ ರಸ್ತೆರ ಕೇಂದ್ರ ಸಹಕಾರಿ ಬ್ಯಾಂಕ್ ಇರುವ ಜಾಗದಲ್ಲಿ ಅವರ ಮನೆ ಇತ್ತು.

ಹುಟ್ಟು ಶ್ರೀಮಂತ ರಾಗಿದ್ದ ಇವರು ಪ್ರಸಿದ್ದ್ದ ವಕೀಲ ರಾಗಿದ್ದರು .ಸ್ವಾತಂತ್ರ್ಯ ಹೋರಾಟ ದಲ್ಲಿ ಭಾಗವಹಿಸುವ 

ಸಲುವಾಗಿ  ವೃತ್ತಿ ಬಿಟ್ಟು ಪೂರ್ಣ ಕಾಲ ದೇಶ ಸೇವೆಗೆ ತೊಡಗಿಸಿ ಕೊಂಡರು. ಮಹಾತ್ಮಾ ಗಾಂಧಿ 

ಅವರಿಗೆ  ಆಪ್ತ ರಾಗಿದ್ದರು .ದಿಪ್ರ್ರೆಸ್ದ್ ಕ್ಲಾಸ್ ಸೊಸೈಟಿ ,ತಿಲಕ್ ವಿದ್ಯಾಲಯ ಇವರು ನಡೆಸಿ ಕೊಂಡು ಬಂದ 

ಸಂಸ್ತೆಗಳು .ಅಸ್ಪ್ರುಶ್ಯತೆ ವಿರುದ್ಧ ಕುದ್ಮಲ್ ರಂಗರಾಯರು ಆರಂಭಿಸಿದ ಹೋರಾಟ ಮುಂದುವರಿಸಿದರು.


ಇವರು ದೇಶ ಸೇವೆ ಗಾಗಿ ಮಾಡಿದ ಸಾಲಕ್ಕೆ ಇವರ ಮನೆಯನ್ನು ಇವರ ಅನುಪಸ್ತಿತಿಯಲ್ಲಿ  ಹರಾಜು ಹಾಕಲಾಯಿತು.


ಹೋರಾಟ ಕಾರಣಕ್ಕೆ ಕಡಲೂರು ಜೈಲಿನಲ್ಲಿ  ಶಿಕ್ಷೆ  ಅನುಭವಿಸಿದರು.

ಈ ನಡುವೆ ಅವರ ಪತ್ನಿ ಹಾಗು ಇದ್ದ ಓರ್ವ ಮಗ ಅನಾರೋಗ್ಯದಿಂದ ಸಾವನ್ನಪ್ಪಿದರು .

ಕರ್ನಾಟಕ  ಕೊಂಗ್ರೆಸ್ಸ್ ನ ಅಧ್ಯಕ್ಷರಾಗಿ ರಾಜ್ಯದಾದ್ಯಂತ ಸಂಚರಿಸಿ ಸಂಘಟನೆ ಮಾಡಿದರು .

೧೯೩೫ ರಲ್ಲಿ ಫೆಡರಲ್ ಆಕ್ಟ್ ನಂತೆ ಪ್ರಾಂತೀಯ ವಿಧಾನ ಸಭೆಗಳಿಗೆ  ಚುನಾವಣೆ ನಡೆಯಿತು .ಕೈಯ್ಯಲ್ಲಿ 

ಏನೂ ಹಣವಿಲ್ಲದ ಸದಾಶಿವ ರಾಯರಿಗೆ ಟಿಕೆಟ್ ನಿರಾಕರಿಸಲಾಯಿತು.

ಶಿವರಾಮ ಕಾರಂತರ  ಮಾತುಗಳಲ್ಲಿ ಕೇಳಿ .' ಇಂಥ ನೋವುಗಳ ಜೊತೆಗೆ ಅವರೇ ದುಡಿದು ಬೆಳೆಸಿದ ಮಂಗಳೂರು 

ಜಿಲ್ಲಾ ಕೊಂಗ್ರೆಸ್ನಲ್ಲಿ  ಧೂಮಕೆತುವಿನಂತೆ ಕಾಲಿರಿಸಿದ ಪುಢಾರಿ ಗಳೊಬ್ಬರು  -ಹೆಸರು ಹೇಳಿದರೂ ಭಾಧಕವಿಲ್ಲ ,ಶ್ರೀನಿವಾಸ

 ಮಲ್ಯ ರಂತವರು ಶ್ರೀ ಕಾರ್ನಾಡರ ಸ್ಥಾನವನ್ನು ಇಳಿಸಲು ಯತ್ನಿಸಿದ್ದನ್ನು ಬಲ್ಲೆ.'

ಚಿನ್ನದ ಚಮಚೆ  ಬಾಯಲ್ಲಿಟ್ಟು ಹುಟ್ಟಿ ,ದೇಶಕ್ಕಾಗಿ ಎಲ್ಲವನ್ನೂ ಕಳೆದು ಕೊಂಡು ದೈನ್ಯಾವಸ್ತೆ ಯಲ್ಲಿ ಕೊನೆಯ 

ದಿನಗಳನ್ನು ಕಳೆದ ಇಂತಹ ಮಹನೀಯರನ್ನು ಮರೆಯ ಬಾರದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ