ಬೆಂಬಲಿಗರು

ಶನಿವಾರ, ಮೇ 18, 2013

ಭಾಷಾ ಪ್ರಭೇದಗಳು

ನಿನ್ನೆ ಒಬ್ಬ ರೋಗಿ  ಬಂದಿದ್ದರು. ಏನು ತೊಂದರೆ ಎಂದು ಕೇಳಿದ್ದಕ್ಕೆ ಮೂರು ದಿನಗಳಿಂದ ಉರಿ ಒಂದಕ್ಕೆ  ಡಾಕ್ಟ್ರೆ ಎಂದರು.


ನನಗೆ ಸೋಜಿಗ,ಈ ಶಬ್ಧ ನಾನು ಮೊದಲ ಬಾರಿ ಕೇಳುತ್ತಿರುವುದು.ಎಲ್ಲರೂ ಉರಿ  ಮೂತ್ರ  ,ಇಲ್ಲವೇ ತುಳು ಮಲಯಾಳಂ


ನಲ್ಲಿ ಅದಕ್ಕೆ ಸಮಾನಾದ ವಾಕ್ಯ ಬಳಸುತ್ತಾರೆ. ನಾನು ಮೆಡಿಕಲ್ ಓದಿದ್ದು ಹುಬ್ಬಳ್ಳಿಯಲ್ಲಿ. ಅಲ್ಲಿ ರೋಗಿಗಳು  ಕಾಲ್ಮಡಿ


ಬೆಂಕಿ ಬೆಂಕಿ ಹತ್ದಾಂಗಿ ಉರೀತೈತರಿ ಎಂದು ಹೇಳುತ್ತಿದ್ದರು.ದಕ್ಷಿಣ ಕನ್ನಡ ಜಿಲ್ಲೆಯ ವೈಶಿಷ್ಟ್ಯವೆಂದರೆ ಇಲ್ಲಿ ಕನ್ನಡ  ಮಾತೃ


ಭಾಷೆ ಇರುವವರು ಬಹಳ ಕಮ್ಮಿ.ತುಳು, ಬ್ಯಾರಿ ಭಾಷೆ , ಹವ್ಯಕ ,ಕೋಟ  ಕನ್ನಡ ,ಮರಾಟಿ,ಕೊಂಕಣಿ  ಮಾತೃಭಾಷೆ


ಇರುವವರು  ಶಾಲೆಗಳಲ್ಲಿ ಕನ್ನಡ ಅಧ್ಯಯನ ಮಾಡುವರು. ಆದ್ದರಿಂದಲೇ ಇಲ್ಲಿಯ ಬರವಣಿಗೆಯ  ಕನ್ನಡ  ಗ್ರಾಂಥಿಕ


ವಾಗಿಯೂ ಸಂಭಾಷಣೆ ಕನ್ನಡ ಮಾತೃ ಭಾಷೆಯ ಮಿಶ್ರಣ ವೂ ಆಗಿರುವುದು. ಹೆಸರು ತಿಳಿಯಲು  ಇಲ್ಲಿ ನಿಮ್ಮ ಹೆಸರು

ಹೇಗೆ ಎಂದು ಕೇಳುವರು ,ಇದು ತುಳುವಿನ ಪುದರ್ ಇಂಚಿನ ಎಂಬುದಕ್ಕೆ  ಸರಿಯಾದ ಅನುವಾದ, ಕರ್ನಾಟಕದ


ಬೇರೆ ಭಾಗ ಗಳಲ್ಲಿ  ಹೆಸರು ಹೇಗೆ  ಎಂದರೆ  ತಮಾಷೆಗೆ  ನನ್ನ ಹೆಸರು ಹೀಗೆ ಎಂದು ಕೈ ಭಾಷೆ ಮಾಡುವರು .ಪಂಜೆ


ಕಾರಂತ ರ  ಸಾಹಿತ್ಯದಲ್ಲಿ ಕರಾವಳಿ ಕನ್ನಡದ  ಸೊಗಡು ಕಾಣ ಬಹುದು. ಪಂಜೆಯವರು ಚಿಕ್ಕಪ್ಪ ನಿಗೆ  ಚಿಕ್ಕ ತಂದೆ


ಚಿಕ್ಕಮ್ಮನಿಗೆ ಚಿಕ್ಕ ತಾಯಿ ಎಂದು ಬರೆಯುವರು. ಪ್ರಶಸ್ತಿ ವಿಜೇತ ಸಾಹಿತಿ ಶ್ರೀನಿವಾಸ ವೈದ್ಯರು ( ಮೂಲತಃ

ಧಾರವಾಡದವರು ,ಈಗ ಬೆಂಗಳೂರಲ್ಲಿ ನೆಲಸಿದ್ದಾರೆ) ತನಗೆ ಕಾರಂತರ ಕಾದಂಬರಿಗಳು ಅರ್ಥವಾಗುವುದಿಲ್ಲ


ಎಂದಿದ್ದಾರೆ. ಈ  ಪುಸ್ತಕಗಳಲ್ಲಿ ಬರುವ ಸಂಕ ದಾಟುವುದು ,ತಡಮ್ಮ್ಮೆ ಹಾರುವುದು ಇತ್ಯಾದಿ ಅವರಿಗೆ  ಗ್ರೀಕ್ ಅಂಡ್


ಲ್ಯಾಟಿನ್  .ಅದೇ ರೀತಿ  ವೈದ್ಯರ ಹಳ್ಳ ಬಂತು ಹಳ್ಳ , ರಾವ್ ಬಹಾದ್ದೂರ್ ಅವರ ಗ್ರಾಮಾಯಣ ಕರಾವಳಿ ಜನರಿಗೆ


ಕಬ್ಬಿಣದ ಕಡಲೆ ಎನಿಸೀತು.

ಒಮ್ಮೆ ಎರಡು ಸಣ್ಣ ಹುಡುಗಿಯರು ಶಾಲೆಗೆ ಹೋಗುತ್ತಾ ಮಾತನಾಡುತ್ತಿದ್ದರು .' ಇಕೊಳ್ಳ ಸಾರದ   ವಸಂತಿ ಇದ್ದಾಳಲ್ಲ

ಅವಳಿಗೆ  ನಾನು ಚಂದ ಅಂತ ಜಂಬವಾ ,ಅವಳು ಎಂತ ಚಂದವಾ  ,ಮುಸುಂಟು ನೋಡಿದರೆ  ಮುಜುವಿನ

ಹಾಗೆ ಉಂಟು ,ಅವಳಿಗೆ ಜಂಬ ಇದ್ದರೆ ಅವಳಿಗೇ ಆಯಿತಾ ಅಲ್ಲವಾ ' ನನಗೆ ಈ ಭಾಷೆ ಕೇಳಿ  ನಾವು ಸಣ್ಣವರಾಗಿದ್ದಾಗ


ಮಾತನಾಡುತ್ತಿದ್ದ  ಭಾಷೆ ನೆನಪಾಯಿತು.

 ತಮಿಲ್ನಾಡಿನಲ್ಲೂ ಚೆನ್ನೈ ತಮಿಳ್ ,ಕೋವೈ ತಮಿಳ್ ,ಮದುರೈ ತಮಿಳ್ ಎಂಬ ಪ್ರಬೇಧಗಳಿವೆ.ಕೇರಳದಲ್ಲಿ  ತಿರುವನಂತಪುರ


ತ್ರಿಶೂರ್  ಮತ್ತು ಮಲಬಾರ್ ಮಲಯಾಳ ಎಂಬ  ಪ್ರಬೇಧಗಳಿವೆ..


ಬಾಲಂಗೋಚಿ ;  ಹಾಸ್ಯ ಪ್ರಜ್ಞೆಗೆ ಹೆಸರಾಗಿದ್ದ  ಖ್ಯಾತ ಸಾಹಿತಿ ಪ್ರಾದ್ಯಾಪಕ ಎಸ್ ವಿ ಪರಮೇಶ್ವರ ಭಟ್ ಅವರ ಒಬ್ಬ

ವಿದ್ಯಾರ್ಥಿ  ತಾನು ಜಿಲ್ಲ ಪಂಚಾಯತ್ ಮತ್ತು ಶಾಸನ ಸಭೆ ಗೆ ಸ್ಪರ್ದಿಸಬೇಕೆ೦ದಿರುವೆ.ಒಂದಕ್ಕೆ ನಿಲ್ಲಲೋ ಎರಡಕ್ಕೂ

ನಿಲ್ಲಲೋ ಸರ್ ಎಂದು ಸಲಹೆ ಕೇಳಿದ್ದಕ್ಕೆ  ಭಟ್ಟರು ಥಟ್ಟನೆ ಒಂದಕ್ಕಾದ್ರೆ ನಿಲ್ಲಬಹುದು  ಎರಡಕ್ಕೆ ಕುಳಿತುಕೊಳ್ಳಲೇ ಬೇಕು

ಎಂದರಂತೆ.

ಟಿ ಪಿ ಕೈಲಾಸಂ  ಅವರ ಸಂಸ್ಕೃತ  ಅಧ್ಯಾಪಕರು  ತನ್ನ ತರಗತಿಯಲ್ಲಿ ಎಲ್ಲರೂ ಸಂಸ್ಕೃತದಲ್ಲಿ ಕಡ್ಡಾಯವಾಗಿ  ಮಾತನಾಡ

ಬೇಕು ,ಎಂದು ತಾಕೀತು ಮಾಡಿದರಂತೆ . ಆಗ ಕೈಲಾಸಂ ತಮ್ಮ ಒಂದು ಬೆರಳು ಎತ್ತಿ ಮೂತ್ರ ವಿಸರ್ಜನಾರ್ತ್ಹಾಯ

ಬಹಿರ್ದೇಶಂ ಗಚ್ಚಾಮಿ ಎಂದರಂತೆ .ಅಧ್ಯಾಪಕರು ಸಿಟ್ಟಾಗಿ ದೇವ ಭಾಷೆಯನ್ನು ಹಾಗೆಲ್ಲ ಅಪವಿತ್ರ ಮಾಡ ಬಾರದು

ಎಂದರಂತೆ

1 ಕಾಮೆಂಟ್‌: