ರಕ್ತದಲ್ಲಿರುವ ಕೆಂಪು ಮತ್ತು ಬಿಳಿ ರಕ್ತ ಕಣಗಳ ಬಗ್ಗೆ ನಾವೆಲ್ಲಾ ಕೇಳಿದ್ದೇವೆ. ಕೆಂಪು ರಕ್ತ ಕಣಗಳು ಶ್ವಾಸಕೋಶದಿಂದ ಆಮ್ಲ
ಜನಕ ವನ್ನು ದೇಹದ ಕಣ ಕಣ ಗಳಿಗೂ ಸಾಗಿಸುವ ವಾಹಕ ವಾದರೆ ಬಿಳಿ ರಕ್ತ ಕಣ ಗಳು ರೋಗಾಣುಗಳನ್ನು ನಾಶ ಪಡಿಶುವ
ಸೈನಿಕರು. ಇವುಗಳೆರದೊಡನೆ ಪ್ಲಾಟಿಲೆಟ್ ಎಂಬ ಇನ್ನೊಂದು ಮುಖ್ಯ ರಕ್ತ ಕಣ ಎಲೆಯ ಮರೆಯ ಕಾಯಿಯಂತೆ ಇದ್ದು
ರಕ್ತ ಸ್ರಾವ ದಿಂದ ನಮ್ಮನ್ನು ಕಾಯುತ್ತದೆ.
ಮೇಲಿನ ಚಿತ್ರದಲ್ಲಿ ನೀಲಿ ಚುಕ್ಕೆಗಳಂತೆ ಕಾಣುವ ಕಣಗಳೇ ಪ್ಲಾಟಿಲೆಟ್ ಅಥವಾ ತ್ರೋ೦ಬೋಸೈಟ್ಗಳು .ಎಲ್ಲಿಯಾದರೂ ಸಣ್ಣ
ಗಾಯ ವಾದೊಡನೆ ಈ ಕಣ ಗಳು ಸ್ಥಳಕ್ಕೆ ತೆರಳಿ ಉದ್ದಾಲಕ ನ೦ತೆ ರಕ್ತನಾಳದಲ್ಲಿ ಆದ ರಂದ್ರ ವನ್ನು ಮುಚ್ಚಲು
ಶ್ರಮಿಸುತ್ತವೆ .ಮುಂದೆ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟು ರಕ್ತಸ್ರಾವ ತಡೆಯವಲ್ಲಿ ಪ್ರಮುಖ
ಪಾತ್ರ ವಹಿಸುತ್ತವೆ. ನಾವು ಬಹಳ ಮಂದಿ ಈ ಕಣಗಳ ಬಗ್ಗೆ ಕೇಳಿಯೇ ಇಲ್ಲ
ಇತ್ತೀಚಿಗೆ ಡೆಂಗು ಜ್ವರದ ವ್ಯಾಪಕ ಹಾವಳಿಯಿಂದ ಈ ಕಣಗಳೂ ಸ್ವಲ್ಪ ಪ್ರಸಿದ್ದ್ದಿ ಗೆ ಬಂದಿವೆ .ಈ ಜ್ವರದಲ್ಲಿ
ಪ್ಲಾಟಿಲೆಟ್ ಕಣಗಳು ಗಣನೀಯವಾಗಿ ಇಳಿಕೆಯಾಗುತ್ತವೆ.ತಮ್ಮನ್ನು ಪ್ರಸಿದ್ದಿಗೆ ತಂದ ಈ ಜ್ವರಕ್ಕೆ ಪ್ಲಾಟಿ ಲೆಟ್ ಗಳು ಚಿರ ಋಣಿ
ಗಳಾಗಿರಬೇಕು . ಸಾಮಾನ್ಯವಾಗಿ ಒಂದು ಘನ ಮಿಲಿ ಲೀಟರ್ ರಕ್ತ
ದಲ್ಲಿ ೧೫೦೦೦೦ ದಿಂದ ೪೫೦೦೦೦ ರ ಷ್ಟು ಈ ಕಣಗಳ ಸಂಖ್ಯೆ ಇರುತ್ತದೆ. ಇದು ೫೦೦೦ ಕ್ಕಿಂತ ಕಮ್ಮಿಯಾದರೆ
ಯಾವುದೇ ಪ್ರಚೋದನೆಯಿಲ್ಲದೆ ರಕ್ತ ಸ್ರಾವ ವಾಗುವುದು . ಆದರೆ ಬಹುತೇಕ ಡೆಂಗು ಜ್ವರ ರೋಗಿಗಳಲ್ಲಿ ಈ ಕಣಗಳ
ಸಂಖ್ಯೆ ಒಮ್ಮೆ ಕಮ್ಮಿಯಾದರೂ ತಾನೇ ಸರಿಯಾಗುವುದು .ವಿಶ್ವ ಆರೋಗ್ಯ ಸಂಸ್ಥೆ ಡೆಂಗು ಜ್ವರದಲ್ಲಿ ಮುಂಗಾಮಿ ಯಾಗಿ
ಪ್ಲಾಟಿಲೆಟ್ ಕೊಡುವಂತೆ ಶಿಫಾರಸ್ ಮಾಡಿಲ್ಲ .
ಈ ಕಾರಣವಲ್ಲದೆ ಹಲವು ಔಷಧಿಗಳ ಅಡ್ಡ ಪರಿಣಾಮ ದಿಂದ . ಇನ್ನು ಹಲವು ವೈರಲ್ ಜ್ವರಗಳಲ್ಲಿ ಮತ್ತು
ಸ್ವಯಂ ವಿರೋಧಿ (ಅಟೋ ಇಮ್ಯೂನ್) ಕಾರಣ ಗಳಿಂದ ಈ ಕಣಗಳ ಕೊರತೆ ಕಾಣಿಸ ಬಹುದು.
ಇಸ್ಟೆಲ್ಲಾ ಪ್ಲಾಟಿ ಲೆಟ್ ಗಳ ಗುಣ ಗಾನ ದ ನಂತರ ಅವುಗಳ ನ್ಯೂನತೆಗಳನ್ನೂ ಹೇಳದಿದ್ದರೆ ನನ್ನನ್ನು ಪಕ್ಷಪಾತಿ ಎಂದು
ಹಳಿದೀರಿ . ಈ ಕಣಗಳ ಅಧಿಕ ಪ್ರಸಂಗ ತನ ದಿಂದ ಹೃದಯ ದ ರಕ್ತ ನಾಳ ಗಳಲ್ಲಿ ಅನಾವಶ್ಯಕ ರಕ್ತ ಹೆಪ್ಪು ಗಟ್ಟಿ
ಹೃದಯಾಘಾತ ಉಂಟಾಗ ಬಹುದು .ಅದಕ್ಕೆಂದೇ ಹೃದಯ ಕಾಯಿಲೆ ಇರುವವರಿಗೆ ಪ್ಲಾಟಿ ಲೆಟ್ ವಿರೋಧಿ ಔಷಧಿಗಳಾದ
ಆಸ್ಪಿರಿನ್ ,ಕ್ಲೋಪಿಡೋಗ್ರೆಲ್ ಗಳನ್ನು ಕೊಡುವರು .ಯಾವುದೂ ಅತಿಯಾದರೆ ರೋಗವಲ್ಲವೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ