ಬೆಂಬಲಿಗರು

ಸೋಮವಾರ, ಮೇ 27, 2013

ಮರೆಯಲಾಗದ ಮಹನೀಯರು -ಕುದ್ಮುಲ್ ರಂಗ ರಾಯರು


                                                                       ೧೮೫೯-೧೯೨೦

ಮಂಗಳೂರಿನಲ್ಲಿ  ಬಂಟ್ಸ್ ಹಾಸ್ಟಲ್ ನಿಂದ  ಪಿ ವಿ ಎಸ  ಸರ್ಕಲ್ ಗೆ  ಹೋಗುವ ರಸ್ತೆಗೆ  ಕುದ್ಮುಲ್ ರಂಗ ರಾವ್  ರಸ್ತೆ  ಎಂದು ಹೆಸರು. ಈ ರೋಡಿನಲ್ಲಿ  ಇವರ ಹೆಸರಿನ ಹಿಂದುಳಿದ ವರ್ಗದವರ  ವಿದ್ಯಾರ್ಥಿ ನಿಲಯ ಇದೆ . ಇವರು

ಸಾರಸ್ವತ ಬ್ರಾಹ್ಮಣ ರು. ವಕೀಲ ವೃತ್ತಿ. ೧೯ನೆ  ಶತಮಾನದಲ್ಲಿ  ಅಸ್ಪೃಶ್ಯತೆ ಯ ವಿರುದ್ದ  ಹೋರಾಟ ನಡೆಸಿದವರು .ಆ ಕಾಲದಲ್ಲಿ ಇವರಿಗೆ  ಭಾರೀ ಪ್ರತಿರೋಧ ಇತ್ತು.   ಡಿಪ್ರೆಸ್ಡ್ ಕ್ಲಾಸ್ ಸೊಸೈಟಿ  ಆರಂಬಿಸಿ  ,ಹಿಂದುಳಿದವರಿಗೆ  ಸೇಡಿಗುಡ್ಡೆಯಲ್ಲಿ

ಶಾಲೆ  ಆರಂಬಿಸಿದರು . ಬಹುಶ  ಅಲ್ಲೇ ಇರುವುದು  ಈಗಿನ   ಹಾಸ್ಟಲ್.ಇವರ  ಕಾರ್ಯಕ್ಕೆ ಕ್ರಮೇಣ  ಒತ್ತಾಸೆಯಾದವರು  ಕಾರ್ನಾಡ್ ಸದಾಶಿವ ರಾಯರು.


೨೪.೨.೧೯೩೫ ರಲ್ಲಿ  ಮಹಾತ್ಮಾ ಗಾಂಧಿಯವರು  ಮಂಗಳೂರಿಗೆ ಬೇಟಿಯಿತ್ತಾಗ  ಹೇಳಿದ ಮಾತು ,'ಹಿಂದುಳಿದವರನ್ನು ಮೇಲೆತ್ತುವ  ಮತ್ತು ಅಸ್ಪೃಶ್ಯತಾ ನಿರ್ಮೂಲನೆಯ ನನ್ನ  ಪ್ರಯತ್ನಗಳಿಗೆ  ಕುದ್ಮುಲ್ ರಂಗ ರಾಯರು  ಮಾರ್ಗ ದರ್ಶಿ
ಮತ್ತು  ಸ್ಪೂರ್ತಿ'


ಕುದ್ಮುಲ್ ಅವರು ಸ್ತ್ರೀ ಶಿಕ್ಷಣ ಕ್ಕೂ  ಪ್ರೋತ್ಸಾಹ ನೀಡಿದರು.ಇವರ ಮಗಳು  ರಾಧಾಭಾಯ್ ಕುದ್ಮುಲ್  ಮದ್ರಾಸಿನ ಮಾಜಿ ಮುಖ್ಯ ಮಂತ್ರಿ ಶ್ರೀ  ಸುಬ್ಬರಾಯನ್ ಅವರನ್ನು ವಿವಾಹ  ಆದರು (ಅಂತರ್ಜಾತಿ). ಇವರ ಮಕ್ಕಳೇ  ಪ್ರಸಿದ್ದ ರಾದ  ಕುಮಾರಮಂಗಲಂ  ಸಹೋದರರು .ಒಬ್ಬರು ಸಶಸ್ತ್ರ ಪಡೆ ಯ  ಮಹಾ ದಂಡ ನಾಯಕ ನಾದರೆ ,ಇನ್ನೊಬ್ಬರು  ರಾಜಕಾರಿಣಿ ಯಾಗಿ  ಕೇಂದ್ರ ಸಚಿವರಾದರು.
ಮಗಳು  ಪಾರ್ವತೀ ಕೃಷ್ಣನ್  ಸಂಸತ್ ಸದಸ್ಯರಾಗಿದ್ದರು .ಮೊಮ್ಮಗ  ರಂಗ ರಾಜ ಕುಮಾರ ಮಂಗಳಂ  ನರಸಿಂಹ ರಾವ್ ಮತ್ತು ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು. ರಂಗ ರಾಜಮ್ ಗೆ ಪ್ರತಿಜ್ಞಾ ವಿಧಿ ಬೋಧಿಸಿದ ರಾಷ್ಟ್ರಪತಿ  ಆರ್
ವೆಂಕಟರಾಮನ್  ನಿಮ್ಮ ಮೂರು ತಲೆ ಮಾರಿನವರೊಡನೆ ಕೆಲಸ ಮಾಡಿದ ಅನುಭವಿ ನಾನು ಎಂದು  ಹೇಳಿದರು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ