ಬೆಂಬಲಿಗರು

ಶನಿವಾರ, ಮೇ 11, 2013

ಮರೆಯಲಾಗದ ಮಹನೀಯರು -- ನ್ಯಾಯಮೂರ್ತಿ ಎಚ್ ಆರ್ ಖನ್ನಾ

         ಮರೆಯಲಾಗದ ಮಹನೀಯರು -- ನ್ಯಾಯಮೂರ್ತಿ ಎಚ್ ಆರ್ ಖನ್ನಾ                                        
                                                         
 
"ಅತೃಪ್ತಿಕರ, ಬಲಹೀನ   ಮತ್ತು ಸಾಮಾನ್ಯ ಜನತೆಯ ವಿಶ್ವಾಸ ಹೊಂದಿರದ ನ್ಯಾಯಾಂಗ  ವ್ಯವಸ್ಥೆ  ಹೊಂದಿರುವ ದೇಶವು ಪ್ರಗತಿಪರ ಮತ್ತು ಸಂತುಷ್ಟ ಆಗಿರಲು ಸಾಧ್ಯವಿಲ್ಲ "ಇದು ಪ್ರಜಾಪ್ರಭುತ್ವದದ ತಾಯ್ನೆಲ ಇಂಗ್ಲೆಂಡ್ ದೇಶದ ಬುದ್ದಿಜೀವಿಯ ಮಾತಲ್ಲ .ರಾಜಸತ್ತೆ ಇದ್ದ  ಮೈಸೂರು ದಿವಾನರಾಗಿದ್ದ ಸರ್   ಮಿರ್ಜಾ ಇಸ್ಮಾಯಿಲ್ ಅವರ ಜೀವನ ಚರಿತ್ರೆ "ಮೈ ಪಬ್ಲಿಕ್ ಲೈಫ್ "ಯಿಂದ ಆಯ್ದ ವಾಕ್ಯಗಳು . 

೩.೭.೧೯೧೨-೨೫.೨.೨೦೦೮

'ಒಬ್ಬ ವ್ಯಕ್ತಿಯ ಶ್ರೇಷ್ಟತೆ  ಸವಾಲುಗಳು ಮತ್ತು  ವಿವಾದಗಳನ್ನು ಎದುರಿಸುವಾಗ ಅವನ ನಡೆ  ಹೇಗಿರುತ್ತದೆ 

ಎಂಬುದನ್ನು ಆದರಿಸಿ  ಇರುತ್ತದೆಯೇ ವಿನಹ ಅನುಕೂಲ  ವಾತಾವರಣದಲ್ಲಿ ಇರುವಾಗಿನ ಪ್ರತಿಕ್ರಿಯೆಯನ್ನು 

ಆಧರಿಸಿ ಅಲ್ಲ 'ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ರವರ ಈ ಮಾತುಗಳನ್ನು ಖ್ಯಾತ ನ್ಯಾಯವಾದಿ 

ಫಾಲಿ ಎಸ್ ನಾರಿಮನ್ ಅವರು ತಮ್ಮ ಜೀವನ ಚರಿತ್ರೆ  ಬಿಫೋರ್ ದಿ ಮೆಮೊರಿ ಫೇಡ್ಸ ನಲ್ಲಿ  ನ್ಯಾಯಮೂರ್ತಿ 

ಎಚ್ ಆರ್ ಖನ್ನಾ ಬಗ್ಗೆ ಬರೆಯುತ್ತ ಉದ್ದರಿಸಿದ್ದಾರೆ .ಇದನ್ನೇ ಸಂಸ್ಕೃತದಲ್ಲಿ  ವಿಪಧಿ ಧೈರ್ಯಂ  ಅಭ್ಯುಧಯೇ 


ಕ್ಷಮಾ ಎಂದು ಮಹಾತ್ಮರ ಗುಣ  ವಿವರಿಸಿರುವುದು. ಸ್ವಾತಂತ್ರ್ಯೋತ್ತರ  ಭಾರತ  ನ್ಯಾಯಾಂಗ  ಇತಿಹಾಸದಲ್ಲಿ 


ಅತಿ  ವಂದನೀಯ ಹೆಸರು  ನ್ಯಾ,ಮೂ, ಖನ್ನಾ ಅವರದು .


ಪ್ರಸಿದ್ದ್ದವಾದ  ಕೇಶವಾನಂದ ಭಾರತಿ  ವರ್ಸಸ್  ಸ್ಟೇಟ್ ಆಫ್ ಕೇರಳ  ಕೇಸ್ ನಲ್ಲಿ  ಸಂವಿಧಾನದ 


ಮೂಲಭೂತ  ಆಶಯಗಳಿಗೆ ಕುಂದು ಬರುವ ರೀತಿಯಲ್ಲಿ  ಅದನ್ನು ತಿದ್ದುಪಡಿ ಮಾಡುವ  ಅಧಿಕಾರ

ಪಾರ್ಲಿಮೆಂಟ್ ಗೆ ಇಲ್ಲ  ಎಂಬ ಮಹತ್ವದ ತೀರ್ಪು ನೀಡಿದ ಬಹುಮತ  ಬೆಂಚ್ ನ  ಮುಖ್ಯ  ಅಂಗ 

ವಾಗಿದ್ದವರು. ತುರ್ತು ಪರಿಸ್ಥಿತಿ  ಸಮಯದಲ್ಲಿ  ಎ ಡಿ ಎಂ ಜಬಲ್ಪುರ್ ವರ್ಸಸ್  ಶುಕ್ಲ  ಕೇಸ್ ಎಂದು 

ಪ್ರಸಿದ್ದ ವಾದ  ಕೇಸ್ ನಲ್ಲಿ  ಇವರು  ವ್ಯಕ್ತಿ ಸ್ವಾತಂತ್ರವನ್ನು ಎತ್ತಿ ಹಿಡಿದು  ಭಿನ್ನಮತದ  ತೀರ್ಪು ಕೊಟ್ಟ 

ಏಕೈಕ  ನ್ಯಾಯಾಧೀಶರು. ಈ ತೀರ್ಪಿನಿಂದಾಗಿ  ಅವರು  ಇಂದಿರಾ ಗಾಂಧಿಯವರ  ಅವ ಕೃಪೆ ಗೊಳಗಾಗಿ 


ಮುಖ್ಯ ನ್ಯಾಯಾಧೀಶ  ಹುದ್ದೆ  ನೇಮಕಾತಿಯಲ್ಲಿ  ಸೇವಾಹಿರಿತನವಿದ್ದರೂ ಕಡೆಗಣಿಸಲ್ಪಟ್ಟು ತಮ್ಮ 

ಹುದ್ದೆಗೆ  ರಾಜಿನಾಮೆ ಕೊಡುವಂತಾಯಿತು. 'ಜೀವ ಮತ್ತು  ಸ್ವಾತಂತ್ರ್ಯ ಮನುಷ್ಯನ  ಹುಟ್ಟಿನಿಂದಲೇ 

ಬಂದುದು ಅದನ್ನು ಸಂವಿದಾನ ಕೊಡಮಾಡಿದ್ದಲ್ಲ, ಆದ್ದರಿಂದ ಸರಕಾರಕ್ಕೆ  ಅವುಗಳನ್ನು 

ಅತಿಕ್ರಮಿಸುವ ಹಕ್ಕಿಲ್ಲ ಎಂಬ  ವಾಕ್ಯ ಅವರ ತೀರ್ಪಿನಲ್ಲಿ ಇತ್ತು .ಈ  ಕೇಸಿನಲ್ಲಿ  ನ್ಯಾ ಮೂ ಖನ್ನಾ 

ಅಟಾರ್ನಿ ಜನರಲ್ ನಿರೇನ್ ಡೇ ಅವರಲ್ಲಿ  'ಒಂದೊಮ್ಮೆ ಅಧಿಕಾರಿಯು ವ್ಯಕ್ತಿಯೊಬ್ಬನನ್ನು 

ನಿರಪರಾಧಿಯಗಿದ್ದರೂ  ವ್ಯಕ್ತಿಗತ  ದ್ವೇಷದಿಂದ ಬಂದಿಸಿ ,ಅವನ ಜೀವಕ್ಕೇ ಸಂಚಕಾರ ತಂದರೂ 

ನ್ಯಾಯಾಲಯದಲ್ಲಿ  ಪ್ರಶ್ನಿಸುವಂತಿಲ್ಲವೆ ?  "  ಎಂದು ಕೇಳಿದ್ದಕ್ಕೆ  ಡೇ ಅವರು 'ಇದು ನನ್ನ ನಿಮ್ಮ ಆತ್ಮಸಾಕ್ಷಿಯನ್ನು 

ವಿಚಲಿತ ಮಾಡಬಹುದು ಆದರೆ ತುರ್ತುಪರಿಸ್ಥಿತಿಯಲ್ಲಿ  ಅದಕ್ಕೆ ಅವಕಾಶವಿಲ್ಲ.' ಎಂದರು.


ಈ ಕೇಸಿನಲ್ಲಿ  ಮುಖ್ಯ ನ್ಯಾ.ಮೂ ಎ ಏನ್ ರೇ (ಇವರು ಕೂಡ ಸರಕಾರದ ಕೃಪೆಯಿಂದ    ತಮಗಿಂತ ಹಿರಿಯರನ್ನು  ಹಿಂದಿಕ್ಕ್ಕಿ 


ಮುಖ್ಯ ನ್ಯಾಯಾಧಿಶರಾದವರು.).ನ್ಯಾ ಮೂ, ಚಂದ್ರಚೂಡ.ನ್ಯಾ ಮೂ ಭಗವತಿ ,ನ್ಯಾ ಮೂ  ಎಂ ಎಹ್ ಬೇಗ್ 

ಸರಕಾರದ  ಪರ ಬಹುಮತದ ತೀರ್ಪು ನೀಡಿದರೆ  ಖನ್ನಾ ಒಬ್ಬರೇ  ವ್ಯತಿರಿಕ್ತ ತೀರ್ಪು ಕೊಟ್ಟವರು. ಎಮರ್ಜೆನ್ಸಿಯ 



 ಸಮಯದಲ್ಲಿ   ತಮ್ಮ ಭಡ್ತಿಯ  ಅವಕಾಶವನ್ನು ಪಣೆಯಿತ್ತು  ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಎತ್ತಿ ಹಿಡಿದ ಧೀಮಂತ .


ಇವುಗಳ  ಬಗ್ಗೆ  ಹೆಚ್ಚಿನ  ಮಾಹಿತಿ  ನಾರಿಮನ್ ಅವರ ಮೇಲೆ ಉಲ್ಲೇಖಿಸಿದ  ಜೀವನ ಚರಿತ್ರೆ ಮತ್ತು ನ್ಯಾ ಮೂ 

 ಲೀಲಾ ಸೇಥ್ ಅವರ ಜೀವನ ಚರಿತ್ರೆ  ಆನ್ ಬ್ಯಾಲೆನ್ಸ್ ನಲ್ಲಿ ಓದ ಬಹುದು.


ತನಗೆ  ಇಂದಿರಾಗಾಂಧಿ ಅನ್ಯಾಯ ಮಾಡಿದರೂ  ಮುಂದೆ  ಆಕೆಯ ಸದಸ್ಯತ್ವವನ್ನು ಲೋಕಸಭೆ  ಹಕ್ಕು  ಚ್ಯುತಿ ಗಾಗಿ 

ಮಾಡಿದಾಗ  ಇದೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಎಂದು  ಆಗಿನ  ಪ್ರಧಾನಿ  ಮೊರಾರ್ಜಿ ದೇಸಾಯಿ ಅವರನ್ನು 


ಸ್ವತಹ ಬೇಟಿ ಮಾಡಿ  ಪ್ರತಿಭಟನೆ  ಸಲ್ಲಿಸಿದ  ಮಹಾನುಭಾವ  ಇವರು. ಇವರ ಜೀವನ  ಚರಿತ್ರೆ   ನೀದರ್ ರೋಸಸ್ ನೋರ್ 

ತ್ಹೊರ್ನ್ಸ್ ಎಲ್ಲರೂ ಓದ ಬೇಕಾದ ಪುಸ್ತಕ .




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ