ಬೆಂಬಲಿಗರು

ಗುರುವಾರ, ಸೆಪ್ಟೆಂಬರ್ 2, 2021

ಸಾಹಿತ್ಯ ಸಮ್ಮೇಳನಗಳು


 ನಾನು ಭಾಗವಸಿದ ಮೊದಲ ಸಾಹಿತ್ಯ ಸಮ್ಮೇಳನ ಪಂಜೆ ಶತಮಾನೋತ್ಸವ .ಏರ್ಯ ಲಕ್ಷ್ಮಿ ನಾರಾಯಣ ಆಳ್ವ ಮತ್ತು ಎಸ ವಿ ಪರಮೇಶ್ವರ ಭಟ್ ಅವರ ಸಾರಥ್ಯದಲ್ಲಿ ನಡೆದು ಬಹಳ ಯಶಸ್ವಿ ಆಯಿತು .ಗಣಪತಿ ಹೈ ಸ್ಕೂಲ್ ಆವರಣ ಮತ್ತು ಪುರ ಭವನ ದಲ್ಲಿ ನಡೆದ ನೆನಪು .ಮಾಸ್ತಿ ,ವಿ ಸೀ ,ಜಿ ಪಿ ರಾಜರತ್ನಂ ,ಕಾರಂತ ಮುಂತಾದ ಮೇರು ಸಾಹಿತಿಗಳನ್ನು ನೋಡುವ ಮತ್ತು ಕೇಳುವ ಸದವಕಾಶ ಸಿಕ್ಕಿ ಕೃತಾರ್ಥ ರಾದ ಭಾವನೆ . ಅದರ ಸ್ಮರಣ ಸಂಚಿಕೆ ತೆಂಕಣ ಗಾಳಿ ರಟ್ಟು ಹಾಕಿಸಿ ಸಂರಕ್ಷಿಸಿ ಕೊಂಡು ಬಂದಿರುವೆನು .. ಅದೇ ಪುಸ್ತಕದಿಂದ ಆಯ್ದ ಡಿ ವಿ ಜಿ ಮತ್ತು ಪಂಜೆ ಚಿತ್ರ ಕೆಳಗೆ ಹಾಕಿದ್ದೇನೆ . 

                     

ಈ ಕಾರ್ಯಕ್ರಮದಲ್ಲಿ ಎಸ್ ವಿ ಪರಮೇಶ್ವರ ಭಟ್ಟರು ಪಡುತ್ತಿದ್ದ ಸಂಭ್ರಮ ನನ್ನ ಕಣ್ಣೆದುರು ಇನ್ನೂ ಇದೆ . ವಿ ಸೀ ,ಮಾಸ್ತಿ ಆಗಮಿಸುವಾಗ ಅವರ ಕಾಲಿಗೆ ಬಿದ್ದು ನಮಸ್ಕರಿಸುವರು . ಹಿರಿಯರ ಮೇಲೆ ಅಷ್ಟು ಭಕ್ತಿ ಗೌರವ . 

ಎರಡನೆಯದು ಧರ್ಮಸ್ಥಳದಲ್ಲಿ ೧೯೭೯ ರಲ್ಲಿ  ಜರುಗಿದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ .ಗೋಪಾಲಕೃಷ್ಣ ಅಡಿಗರು ಅಧ್ಯಕ್ಷ . ದೇವರಾಜ  ಅರಸ್ ಮುಖ್ಯ ಮಂತ್ರಿ ., ಹಂಪನಾ ಸಾಹಿತ್ಯ ಪರಿಷತ್ ಕಾರ್ಯದರ್ಶಿ .ನೋಂದಾಯಿತ ಪ್ರತಿನಿಧಿಯಾಗಿ ಹುಬ್ಬಳ್ಳಿಯಿಂದ ಬಂದಿದ್ದ ನನನಗೆ  ಉಜಿರೆಯ ಹಾಸ್ಟೆಲ್ ನಲ್ಲಿ ವಸತಿ . ಬಹಳ ವಿಜೃಂಭಣೆ ಯಿಂದ ನಡೆಯಿತು . ಇಲ್ಲಿಯೂ ಮಾಸ್ತಿ ,ರಾಜರತ್ನಂ ,ಗೊರೂರು,ಅನಂತ ಮೂರ್ತಿ ಬಂದಿದ್ದರು .ಜತೆಗೆ ಮಲಯಾಳಂ ನ ಪ್ರಸಿದ್ಧ ಲೇಖಕ ಎಂ ಟಿ ವಾಸುದೇವನ್ ನಾಯರ್ ಮತ್ತು ಆರ್ ಕೆ ನಾರಾಯಣ್ ಕೂಡಾ ಇತರ ಭಾಷಾ ಸಾಹಿತ್ಯ ಎಂಬ ಗೋಷ್ಠಿಗೆ ಬಂದಿದ್ದರು . 

 



ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ನಮಗೆ ಮುಖ್ಯ ಆಕರ್ಷಣೆ .ಆದರೆ ಕಿಸೆಯಲ್ಲಿ ಹಣ ನಿಯಮಿತ . ಇಡೀ ಪ್ರದರ್ಶನಕ್ಕೆ ಸುತ್ತು ಹಾಕಿ ಒಂದು ಲಾಂಗ್ ಲಿಸ್ಟ್ ಮಾಡುವುದು .ಆಮೇಲೆ ನಮ್ಮ ಬಜೆಟ್ ಗೆ ಅನುಗುಣವಾಗಿ ಅದರಿಂದ ಕೆಲವು ಹೊರ ತೆಗೆದು (ಮನಸಿಲ್ಲದ ಮನಸಿನಲ್ಲಿ )ಖರೀದಿಸುವ ಶಾರ್ಟ್ ಲಿಸ್ಟ್ ಮಾಡುವದು . ಹೊಸ ಪುಸ್ತಕಕ್ಕೆ ಲೇಖಕರು ಸಿಕ್ಕಿದರೆ ಹಸ್ತಾಕ್ಷರಕ್ಕೆ ದುಂಬಾಲು ಬೀಳುವುದು . ಗೊರೂರು ರಾಮ ಸ್ವಾಮಿ ಅಯ್ಯಂಗಾರ್ ಅವರ ಸಹಿ ಇರುವ ಪುಸ್ತಕ ಕೆಳಗೆ ನೋಡ ಬಹುದು 

                 

 ಮುಂದೆ  ಸಣ್ಣ ಸಣ್ಣ ಸಾಹಿತ್ಯ ಕೂಟಗಳಿಗೆ ಹುಬ್ಬಳ್ಳಿ ಧಾರವಾಡ ದಲ್ಲಿ  ಹೋಗಿದ್ದು ಇದೆ . ಸಮ್ಮೇಳನಗಳು ಈಗ ಜಾತ್ರೆಗಳಾಗುತ್ತಿವೆ ಎಂಬ ಅಭಿಪ್ರಾಯ ಇದೆ . ಊಟೋಪಚಾರಕ್ಕೆ ಧನ ಮತ್ತು ಶಕ್ತಿ ವಿನಿಯೋಗ ಆಗುತ್ತಿದೆ . ನನ್ನ ಅಭಿಪ್ರಾಯದಲ್ಲಿ ಬಂದವರಿಗೆ ಉಚಿತ ಆಹಾರ ಕೊಡ ಬೇಕು ಎಂದಿಲ್ಲ .ಲಾಭ ನಷ್ಟವಿಲ್ಲದಂತೆ ಊಟ ಕೊಡುವ ಸ್ಟಾಲ್ ಗಳಿಗೆ ಅನುಮತಿ ಕೊಟ್ಟು ಪ್ರತಿನಿಧಿಗಳು ತಮಗೆ ಬೇಕಾದಾಗ ಇಷ್ಟ ವಿರುವ ಆಹಾರ ಸೇವಿಸ ಬಹುದು . ಇದರಿಂದ ಊಟದ ಸಮಯಕ್ಕೆ ಸಮೀಪವಾದಂತೆ ಜನರು ಸಿಗುವುದೋ ಇಲ್ಲವೋ ಎಂದು ಸಭೆಯಿಂದ ಹೊರ ಧಾವಿಸುವ ಪ್ರಮೇಯ ಕಡಿಮೆ ಆದೀತು

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ