ಡಾ ಎಂ ಕೆ ಮಣಿ
ನಮ್ಮ ದೇಶದಲ್ಲಿ ಮೂತ್ರಾಂಗ ಶಾಸ್ತ್ರ ದ (ನೆಫ್ರಾಲಜಿ) ಬೆಳವಣಿಗೆಯ ಅಧ್ವರ್ಯು ಡಾ ಎಂ ಕೆ ಮಣಿ .
ಲೋಕ ನಾಯಕ ಜಯಪ್ರಕಾಶ ನಾರಾಯಣ ಅವರು ಕಿಡ್ನಿ ವೈಫಲ್ಯದಿಂದ ಬಳಲಿದಾಗ ಚಿಕಿತ್ಸೆ ನಡೆಸಿ ಎಲ್ಲರ
ಗಮನ ಸೆಳೆದು ಕೃತಜ್ಞತೆಗೆ ಪಾತ್ರರಾದವರು.ಆರಂಭದಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜ್ , ಮತ್ತು ಇತರ ಸರಕಾರೀ
ವೈದ್ಯಕೀಯ ಕಾಲೇಜ್ ಗಳಲ್ಲಿ ಭೋದನೆ. ನಂತರ ಆಸ್ಟ್ರೇಲಿಯಾ ನಾಡಿನ ಹೆಸರಾಂತ ಗುರುಗಳ ಮಾರ್ಗದರ್ಶನದಲ್ಲಿ
ಮೂತ್ರ ಅಂಗ ಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನ. ಭಾರತಕ್ಕೆ ಆಗಮಿಸಿ ಮೊದಲು ಮುಂಬೈ ಯಲ್ಲಿ , ಆ ಮೇಲೆ
ಮದ್ರಾಸ್ ನ ಅಪೊಲೊ ಆಸ್ಪತ್ರೆಯಲ್ಲಿ ಸೇವೆ. ಕಾರ್ಪೊರೇಟ್ ಆಸ್ಪತ್ರೆ ಯಲ್ಲಿ ಇದ್ದರೂ ವೈದ್ಯ ಕ್ಷೇತ್ರದ
ನೀತಿ ನಿಯಮಗಳಿಗೆ ಬದ್ಧ . ವೈದ್ಯ ಕೀಯ ಕ್ಷೇತ್ರದ ಅನಿಷ್ಟಗಳ ವಿರುದ್ದ ಹೋರಾಟ.
ಕಿಡ್ನಿ ಕಸಿಯಲ್ಲಿ ಕಟ್ಟು ನಿಟ್ಟು. ಸಂಬಂದಿಗಳ ಕಿಡ್ನಿ ಮಾತ್ರ ಕಸಿಗೆ ಅನುಮತಿ.
ವೈದ್ಯ ಗುರು ಭೀಷ್ಮಚಾರ್ಯ ಡಾ ಕೆ ವಿ ತಿರುವೆಂಗಡಮ್ ಅವರಂತೆ ಇವರಿಗೂ ಅಧ್ಯಾಪನ ವೆಂದರೆ ಪ್ರೀತಿ. ಅಪೊಲೊ ಆಸ್ಪತ್ರೆಯಲ್ಲಿ ಪ್ರತಿ ಬುಧ ವಾರ
ಸಂಜೆ ವಿದ್ಯಾರ್ಥಿಗಳಿಗೆ ಪ್ರವಚನ. ಸ್ನಾತಕ ಸ್ನಾತಕೋತ್ತರ ಯಾರು ಬೇಕಾದರೂ ಹೋಗ ಬಹುದು .ಸ್ವಂತ ಖರ್ಚಿನಲ್ಲಿ
ಕಾಫೀ ತಿಂಡಿ ಮತ್ತು ಬ್ಹೊಧಪ್ರದ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ.
ಬಹಳಷ್ಟು ಕಿಡ್ನಿ ಕಾಯಿಲೆಗಳು ಔಷಧಗಳ ದುಷ್ಪರಿಣಾಮದಿಂದ ಉಂಟಾಗುವುದರಿಂದ ಔಷಧ ಶಾಸ್ತ್ರ ದ ಆಳವಾದ
ಅಧ್ಯಯನ ದ ಅವಶ್ಯಕತೆಯನ್ನು ಒತ್ತಿ ಹೇಳುತ್ತಿದ್ದರು.ಅವರ ಔಷಧ ಶಾಸ್ತ್ರದ ಗುರು ಪ್ರೊಫ್.
ಈಶ್ವರಯ್ಯ ಹೇಳುತ್ತಿದ್ದ ಮಾತನ್ನು ಆಗ್ಗಾಗ್ಗೆ ನೆನೆಪಿಸುತ್ತಿದ್ದರು . ' ವೈದ್ಯ ರಂಗ ದಲ್ಲಿ ಮೂರು ಮುಖ್ಯ ಶಾಸ್ತ್ರಗಳು .
ಒಂದು ಶರೀರ ಕ್ರಿಯಾ ಶಾಸ್ತ್ರ (ಪಿಸಿಯೋಲೋಜಿ.),ಎರಡನೆಯದು ಔಷಧ ಶಾಸ್ತ್ರ (ಫಾರ್ಮಕಾಲಜಿ)
ಮತ್ತು ಮೂರನೆಯದು ರೋಗ ಶಾಸ್ತ್ರ (ಪ್ಯಾಥಾಲಜಿ).ನೀವು ಔಷಧ ಶಾಸ್ತ್ರ ಚೆನ್ನಾಗಿ ಅರಿತರೆ
ರೋಗ ಶಾಸ್ತ್ರವನ್ನು ಶರೀರ ಕ್ರಿಯಾ ಶಾಸ್ತ್ರವನ್ನಾಗಿ ಮಾರ್ಪಡಿಸ ಬಹುದು. ಇಲ್ಲದಿದ್ದರೆ ಸಾಮಾನ್ಯ ಶರೀರ ಕ್ರಿಯಾ
ಶಾಸ್ತ್ರವನ್ನು ರೋಗ ಶಾಸ್ತ್ರವನ್ನಾಗಿ ಪರಿವರ್ತಿಸುವಿರಿ.'
ಔಷಧಿಗಳು ಸಾವಿರಾರು ಇರುವುದರಿಂದ ವೈದ್ಯರು ತಮ್ಮ ಮೇಜಿನ ಮೇಲೆ ಔಷಧ ಶಾಸ್ತ್ರದ ಬಗೆಗಿನ ಪುಸ್ತಕ
ಇಟ್ಟುಕೊಂಡು ಸಂಶಯ ಇದ್ದಾಗ ಕೂಡಲೇ ಅದರ ಬಗ್ಗೆ ಓದಿ ಔಷಧಿ ಕೊಡುವುದು ಸೂಕ್ತ ಎಂದು ಹೇಳುತ್ತಿದ್ದರು.
ಆದುದರಿದ ಪುಸ್ತಕ ಓದಿ ಔಷಧ ಕೊಡುವ ವೈದ್ಯರನ್ನು ರೋಗಿಗಳು ಕೀಳಾಗಿ ನೋಡ ಬಾರದು.
ಈ ವಿಷಯದಲ್ಲಿ ಡಾ ಮಣಿ ಯವರು ಅಮೇರಿಕಾ ದ ವೈದ್ಯರು ಬಳಸುವ ಪಿಸಿಶಿಯನ್ಸ್ ಡೆಸ್ಕ್ ರೆಫರೆನ್ಸ್ ಎಂಬ
ಪುಸ್ತಕ ಉತ್ತಮ , ನಿಮಗೆ ಅದು ಸಿಗದಿದ್ದರೆ ನನ್ನಲ್ಲಿಗೆ ಬನ್ನಿರಿ ನಾನು ಕೊಡುತ್ತೇನೆ ಎಂದು ಹೇಳುತ್ತಿದ್ದರು.
ಪುಸ್ತಕದ ಅಂಗಡಿಗಳಲ್ಲಿ ಹುಡುಕಿದರೆ ಔಟ್ ಆಫ್ ಸ್ಟಾಕ್ ಆಗಿತ್ತು. ನಾನು ನೇರ ವಾಗಿ ಅಪೊಲೊ ಆಸ್ಪತ್ರೆಯಲ್ಲಿ
ಅವರನ್ನು ಸಂದಿಸಿದಾಗ ತುಂಬು ಸಂತೋಷದಿಂದ ಆ ಹೊತ್ತಿಗೆಯ ಪ್ರತಿ ಯೊಂದನ್ನು ಕೊಟ್ಟರು.
ಹೃದಯಾಘಾತದಿಂದ ಚೇತರಿಸಿ ಈಗ ಮೊದಲಿನಷ್ಟು ಕ್ರಿಯಾಶೀಲ ರಾಗಿ ಇಲ್ಲ ದಿದ್ದರೂ ಕಿಡ್ನಿ ಕಾಯಿಲೆ ತಡೆಗಟ್ಟುವ
ಸಮೂಹ ಕಾರ್ಯಕ್ರಮ ದಲ್ಲಿ ತೊಡಗಿಸಿ ಕೊಂಡಿದ್ದಾರೆ.ಸಕ್ಕರೆ ಕಾಯಿಲೆ ಮತ್ತು ರಕ್ತದ ಒತ್ತಡ ಕಿಡ್ನಿ ವೈಫಲ್ಯಕ್ಕೆ
ಪ್ರಮುಖ ಕಾರಣ ಆಗಿರುವುದರಿಂದ ಅವುಗಳ ಹತೋಟಿಗೆ ಕಡಿಮೆ ವೆಚ್ಚದ ಔಷಧಿಗಳನ್ನು ಪ್ರಚುರ
ಪಡಿಸುತ್ತಿದ್ದಾರೆ.
ಇವರ ಜೀವನ ಚರಿತ್ರೆಯ ಹೆಸರು ( ಯಮ ಧರ್ಮಾಸ್ ಬ್ರದರ್ ಪ್ರ; ಭಾರತೀಯ ವಿದ್ಯಾ ಭವನ ).ಸಂಸ್ಕೃತದಲ್ಲಿ
ಒಂದು ಶ್ಲೋಕವಿದೆ. ವೈದ್ಯ ರಾಜ ನಮಸ್ತುಭ್ಯಂ ಯಮ ರಾಜ ಸಹೋದರ ,ಯಮಂ ಹರತಿ ಪ್ರಾಣ ನಿ ,ವೈದ್ಯಂ ಪ್ರಾಣ೦
ಧನಾ೦ಚ 'ಎಂದರೆ ' ಯಮಧರ್ಮನ ಸೋದರ ವೈದ್ಯ ರಾಜನಿಗೆ ನಮಿಸುವೆ ,ಯಮನು ಪ್ರಾಣ ಮಾತ್ರ
ಅಪಹರಿಸಿದರೆ ನೀನು ಪ್ರಾಣ ಮತ್ತು ಹಣ ಎರಡನ್ನೂ ತೆಗೆದುಕೊಂಡು ಹೋಗುವೆ!'
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ