ಬೆಂಬಲಿಗರು

ಮಂಗಳವಾರ, ಜುಲೈ 23, 2013

ವೈದ್ಯರಿಂದ ರಚಿತವಾದ ಎರಡು ಒಳ್ಳೆಯ ಕಾದಂಬರಿಗಳು

ಕೆಲವು ತಿಗಳುಗಳ ಹಿಂದೆ ಎರಡು ಒಳ್ಳೆಯ ಪುಸ್ತಕಗಳನ್ನು ಓದಿದ್ದೆ.ಇಂಗ್ಲಿಷ್ ಭಾಷೆಯ ಕಾದಂಬರಿಗಳು.ಬರೆದವರು ವೈದ್ಯರು.

ಒಂದು ಕಾವೇರಿ ನಂಬೀಶನ್ ಅವರು ಬರೆದ ಕಾದಂಬರಿ ದಿ  ಹಿಲ್ಸ್ ಆಫ್ ಅಂಗ್ಹೇರಿ.ನಲ್ಲಿ ಎಂಬ ಬಯಲು ಸೀಮೆಯ ಹುಡುಗಿ ,ಶಾಲಾ ಮಾಸ್ತರರ ಮಗಳು ವೈದ್ಯೆಯಾಗಿ ತನ್ನ ಹಳ್ಳಿಯಲ್ಲಿ ಸೇವೆ ಸಲ್ಲಿಸುವ ಕನಸುಗಳೊಡನೆ ಮದ್ರಾಸ್ ಮೆಡಿಕಲ್ ಕಾಲೇಜ್ ನಲ್ಲಿ ಕಲಿತು ಮುಂದೆ ಇಂಗ್ಲೆಂಡ್ ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿ ತನ್ನ ಹಳ್ಳಿಯಲ್ಲಿ ಕೆಲಸ ಮಾಡುವ ಅವಕಾಶ ಸಿಗದಿದ್ದರೂ ಉತ್ತರ ಭಾರತದ ಒಂದು ಮೂಲೆಯಲ್ಲಿ ಸೇವಾ ಸಂಘಟನೆಯ ಆಸ್ಪತ್ರೆಯಲ್ಲಿ ,ಆ ಮೇಲೆ ಬೇರೆ ಬೇರೆ ಊರುಗಳಲ್ಲಿ ವೈದಯಕೀಯ ನೀತಿಗಳಿಗೆ ಭದ್ಧವಾಗಿ ಕೆಲಸ ಮಾಡುವ ಕತೆ.ವೈದ್ಯಕೀಯ ಪ್ರಪಂಚದ ಕೌತಕಗಳು,ಸಮಸ್ಯೆಗಳು,ಮೋಸ ವಂಚನೆಗಳು ಅನುಭವ ಉಳ್ಳ ವೈದ್ಯೆಯ ಲೇಖನಿಯಲ್ಲಿ ಸೊಗಸಾಗಿ ಮೂಡಿ ಬಂದಿದೆ. ಸ್ವಲ್ಪ ಮಟ್ಟಿಗೆ ಆತ್ಮ ಕಥಾತ್ಮಕ.
                                    hills of angheri
                               
                             kavri
                                 ಕಾವೇರಿ ನಂಬೀಶನ್
ಕಾವೇರಿ ನಂಬೀಶನ್ ಕರ್ನಾಟಕದವರು.ಕೊಡಗಿನ ಮಾಜಿ ಮುಖ್ಯ ಮಂತ್ರಿ ,ಕೇಂದ್ರದ ರೈಲ್ವೆ ಸಚಿವ ,ರಾಜ್ಯಪಾಲರಾಗಿದ್ದ ಶ್ರೀ ಸಿ ಎಂ ಪೂಣಚ್ಚ ಅವರ ಮಗಳು ,ಶಸ್ತ್ರ ವೈದ್ಯ ತಜ್ಞೆ .
ಕಾದಂಬರಿಯ ನಾಯಕಿ ವೈದ್ಯ ವಿದ್ಯಾರ್ಥಿನಿಯಾಗಿದ್ದಾಗ ಅವಳ ಗುರುಗಳು ಹೇಳುವ ಕಿವಿ ಮಾತು ಹೀಗಿದೆ.'’ ಸಾಯುತ್ತಿರುವ ರೋಗಿಯ ಬಳಿ ಸೇವೆ ಸಲ್ಲಿಸುವುದು ಒಂದು ಸೌಭಾಗ್ಯ.ನಾವು ವಿ. ಐ ಪಿ ಗಳನ್ನು  ,ರಾಜವಂಶಜರನ್ನು ಸೇವಿಸಲು ಕಾಯುತ್ತಿರುತ್ತೇವೆ ,ಆದರೆ ಸಾವಿನ ದವಡೆಯಲ್ಲಿ ಇರುವ ರೋಗಿಯೇ ನಮಗೆ ರಾಜ.’
ಇನ್ನೊಂದು ಪಾರಾ ಹೀಗಿದೆ.
‘ಅವಳು   (ಡಾ ನಲ್ಲಿ ) ಬೋರಯ್ಯ್ಯನ ಸ್ತಬ್ಧವಾದ ಹೃದಯವನ್ನು ಖಚಿತ ಪಡಿಸಿ ಸ್ತೇಥೋಸ್ಕೋಪ್ ಕಿವಿಯಿಂದ ತೆಗೆದು ಬಂಧುಗಳಲ್ಲಿ ಹೇಳ ತೊಡಗಿದಳು .ಅದು ವರೆಗೆ ಅವಳ ಪ್ರತಿಯೊಂದು ಶಬ್ದಕ್ಕೂ ಜೋತು ಬೀಳುತ್ತಿದ್ದವರು ಈಗ ಅವಳನ್ನು ತಿರಸ್ಕಾರದಲ್ಲಿ ನೋಡಲಾರಂಬಿಸಿದರು .ಈ ತನಕ ಬಹಳ ಮುಖ್ಯವೆನಿಸಿದ್ದ ಅವಳ ಕೈಗಳು ಮರದ ಕೊರಡುಗಳಂತೆ ಇಕ್ಕಡೆ ಜೋತು ಬಿದ್ದಿದ್ದವು.ಔಷಧಿ ಟ್ರಾಲಿ, ಐ ವಿ ಲೈನ್ ,ಟ್ಯೂಬುಗಳು  ಕ್ಯಾತಿಟರ್ಗಳು ,ಇಂಜೆಕ್ಷನ್ಗಳು ,ಬಿ ಪಿ ಕಫ್ ಗಳು ಎಲ್ಲಾ ನಿರುಪರುಕ್ತ ವಾಗಿ ತೋರಿದವು.ಡಾಕ್ಟರ್ ಎದುರಿಸ ಬೇಕಾದ ಕಷ್ಟಗಳಲ್ಲಿ ಇದು ಅತೀ ಕಠಿಣವಾದುದು’

ಇನ್ನೊಂದು ಉತ್ತಮ ಕಾದಂಬರಿ  ಡಾ ಅಬ್ರಹಾಂ ವೆರ್ಗ್ಹಿಸ್ ಅವರ  ಕಟಿಂಗ್ ಫಾರ್ ಸ್ಟೋನ್ .ಇದು ವೈದ್ಯ ಜಗತ್ತಿನ ಸವಾಲು ,ಸೋಲು ಗೆಲುವು , ಮನುಷ್ಯ ಪ್ರೀತಿ ಪ್ರೇಮಗಳ  ಸುಂದರ ಚಿತ್ರಣ.ಆಫ್ರಿಕಾ ಖಂಡದ ಇತಿಯೋಪಿಯಾ ನಾಡಿನ ರಾಜಧಾನಿ ಅಡಿಸ್ ಅಬಾಬದ ಕಾಲ್ಪನಿಕ ಆಸ್ಪತ್ರೆ ‘ಮಿಸ್ಸಿಂಗ್” ಕಾದಂಬರಿಯ ಕಾರ್ಯ ಕೇಂದ್ರ. ಮಾರಿಯೋನ್ ಮತ್ತು ಶಿವ ಸ್ಟೋನ್ ಭಾರತೀಯ ನನ್ ಸಿಸ್ಟರ್ ಮತ್ತು ಬ್ರಿಟಿಶ್ ಸರ್ಜನ್ ಅವರ  ಗುಪ್ತ ಪ್ರಣಯದಲ್ಲಿ ಜನಿಸಿದ ಅವಳಿ ಜವಳಿಗಳು .ಇವರ ತಾಯಿ ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದರೆ ತಂದೆ ಹೇಳದೇ ಊರು ಬಿಟ್ಟು ಹೋಗಿರುತ್ತಾರೆ.ಭಾರತೀಯ ಮೂಲದ ವೈದ್ಯೆ ಹೇಮಾ ಇವರಿಗೆ ತಾಯಾಗುತ್ತಾಳೆ .ಅವಳಿ ಜವಳಿ ಗಳಾದರೂ ಇಬ್ಬರ ನಡೆ ನುಡಿ ಅಭಿರುಚಿಗಳಲ್ಲಿ ಅಜ ಗಜಾಂತರ.ಮುಂದೆ ಅಮೇರಿಕಾ ಕ್ಕೂ ಹರಡುವ ಕತೆಯಲ್ಲಿ ಇತಿಯೋಪಿಯಾ ದ ಅನಿಶ್ಚಿತ ರಾಜಕೀಯ ಮತ್ತು ಜನಜೀವನದ ಚಿತ್ರಣ ಕೊಟ್ಟಿದ್ದಾರೆ.ಕೊನೆ ವರೆಗೂ ಕೌತುಕ ಕಾಯ್ದು ಕೊಳ್ಳುವ ಕೃತಿ.

                                                        cutting for stone

ಡಾ ಅಬ್ರಹಾಂ ವೆರ್ಗ್ಹಿಸ್ ಭಾರತೀಯ ಮೂಲದ ವೈದ್ಯ ,ಈಗ ಅಮೆರಿಕಾದಲ್ಲಿ ಪಿಸಿಶಿಯನ್ ಮತ್ತು ಬರಹಗಾರರಾಗಿ ಬಹಳ ಹೆಸರು
ಗಳಿಸಿದ್ದಾರೆ. ಅನಿವಾಸಿ  ಭಾರತೀಯ ಶಿಕ್ಷಕ ತಂದೆ ತಾಯಿಗಳ ಪುತ್ರನಾದ ಇವರ ಜನನ ಇಥಿಯೋಪಿಯಾ ದಲ್ಲಿ ಆಯಿತು.ಮುಂದೆ ಅಮೇರಿಕಾ ನಾಡಿಗೆ ವಲಸೆ ಹೋದ ಇವರು ಎಂ ಬಿ ಬಿ ಎಸ್ ಮಾಡಿದ್ದು ಮದ್ರಾಸ್ ಮೆಡಿಕಲ್ ಕಾಲೇಜ್ ನಲ್ಲಿ .ಪ್ರಸಿದ್ದ ವೈದ್ಯ ಮತ್ತು ಲೇಖಕ .

ಶಿಕ್ಷಕ ಡಾ ಕೆ ವಿ ತಿರುವೆಂಗಡಂ ಇವರ  ಆದರ್ಶ .ರೋಗಿಗಳ ರೋಗ ವಿವರ ತೆಗೆದು ಕೊಳ್ಳುವುದು ಮತ್ತು ಪರೀಕ್ಷೆಗೆ ಹೆಚ್ಚು ಒತ್ತು

ನೀಡುವ ಪರಂಪರೆ. ಕ್ಷ ರೇ .ರಕ್ತ ಪರೀಕ್ಷೆ , ಸ್ಕ್ಯಾನ್ ಗಳು ಆ ಮೇಲೆ ಆವಶ್ಯವಿದ್ದರೆ ಮಾತ್ರ .
                         
                         
                             abraham verghese
                             ಡಾ ಅಬ್ರಹಾಂ ವರ್ಗ್ಹಿಸ್
ಇವರ ಇನ್ನೆರಡು ಕೃತಿಗಳಾದ ದಿ ಟೆನಿಸ್ ಪಾರ್ಟ್ನರ್ ಮತ್ತು ಮೈ ಓನ್ ಕಂಟ್ರಿ ಗಳೂ ಓದುಗರ ಮನ ಗೆದ್ದಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ