ಬೆಂಬಲಿಗರು

ಬುಧವಾರ, ಜುಲೈ 24, 2013

ರೋಗಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಗಮನಿಸ ಬೇಕಾದ ಕೆಲವು ಅಂಶಗಳು

ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ರೋಗಿಯನ್ನು  ಆಸ್ಪತ್ರೆಗೆ  ಸಾಗಿಸುವಾಗ ಕೆಲವು ಅಂಶಗಳನ್ನು ಗಮನಿಸ ಬೇಕು.


ರೋಗಿಯು ಪ್ರಜ್ಞಾ ಶೂನ್ಯ ಅಥವಾ ಅರೆ ಪ್ರಜ್ಞೆಯಲ್ಲಿ ಇದ್ದರೆ ಮಲಗಿಸಿಯೇ ಸಾಗಿಸಿ.ಕುಳ್ಳಿರಿಸ ಬೇಡಿ.ಇದರಿಂದ ಮೆದುಳಿಗೆ

ರಕ್ತ ಸಂಚಾರ ಉತ್ತಮವಾಗಿರುವುದಲ್ಲದೆ ಬಾಯಿಯಿಂದ ದ್ರವ  ಶ್ವಾಸ ಕೋಶಕ್ಕೆ ಹೋಗುವುದು ತಪ್ಪುತ್ತದೆ.ನಿಂತಿರುವಾಗ

ತಲೆ ತಿರುಗಿ ಬಿದ್ದವರನ್ನು ಕುಳ್ಳಿರಿಸಲು ಯತ್ನಿಸ ಬಾರದು. ಇದರಿಂದ ಮೆದುಳಿನ ರಕ್ತದ ಓಟ ಕಡಿಮೆಯಾಗಿ ಇನ್ನಸ್ಟು

ತೊಂದರೆಯಾಗುವುದು. ಅಲ್ಲದೆ ವಾಂತಿ ಭೇದಿ ಯಿಂದಲೋ ಇನ್ನ್ನಿತರ ಕಾರಣ ಗಳಿಂದ  ರಕ್ತದ ಒತ್ತಡ ಕಡಿಮೆಯಾಗಿ

ಇರುವಾಗ ತಲೆ  ಕೆಳಗೆ ಇದ್ದರೆ ಗುರುತ್ವಾಕರ್ಷಣೆಯಿಂದ ರಕ್ತ ಮೆದುಳಿಗೆ ಹೋಗುವುದು.

ಪ್ರಜ್ಞಾ ಶೂನ್ಯ ನಾದ ವ್ಯಕ್ತಿಗೆ ಬಾಯಲ್ಲಿ ಏನನ್ನೂ ಕೊಡಲು ಹೋಗ ಬಾರದು.ಕೊಟ್ಟರೆ ಅದು ಶ್ವಾಸ ಕೋಶಕ್ಕೆ ಹೋಗಿ

ಶ್ವಾಸೋಸ್ವಾಸಕ್ಕೆ ತಡೆ ಉಂಟುಮಾಡುವುದಲ್ಲದೆ .ನ್ಯುಮೋನಿಯ ಕಾಯಿಲೆ ಬರುವುದು.

ರೋಗಿಗೆ ಅಪಸ್ಮಾರ ಬರುತ್ತಿದಿದ್ದರೆ ಒಂದು ಪಾರ್ಶ್ವಕ್ಕೆ ತಿರುಗಿಸಿ  ಮಲಗಿಸಿರಿ.ಕಬ್ಬಿಣದ ವಸ್ತುಗಳನ್ನ್ನು ಕೈಯಲ್ಲಿ ಇಡಲು

ಪ್ರಯತ್ನಿಸ ಬಾರದು.ಇದು ದೊಡ್ಡ ಅವೈಜಾನಿಕ  ನಂಬಿಕೆ  .ಫಿಟ್ಸ್ ಮಾರುವಾಗ ಕಬ್ಬಿಣದ ತುಂಡು ತಾಗಿ ಗಾಯ ಯಾಗುವ ಸಂಭವ

ಇದೆ. ಪ್ರಜ್ಞೆಯಿಲ್ಲದ ವ್ಯಕ್ತಿ ವಾಂತಿ ಮಾಡಿದರೂ ಒಂದು ಪಾರ್ಶ್ವಕ್ಕೆ ತಿರುಗಿಸಿ ಮಲಗಿಸ ಬೇಕು.ಇದರಿಂದ ವಾಂತಿ ಶ್ವಾಸ

ನಾಳಕ್ಕೆ  ಹೋಗುವುದು ತಪ್ಪುತ್ತದೆ. ಸ್ಟ್ರೋಕ್ ಆದ ರೋಗಿಯು ನೀರು ಕುಡಿಸುವಾಗ ಕೆಮ್ಮುತ್ತಿದ್ದರೆ ಬಾಯಲ್ಲಿ ಏನನ್ನ್ನೂ ಕೊಡ

ಬಾರದು .


ದಮ್ಮು ಇರುವ ಹೃದಯ ರೋಗಿಗಳು ಮತ್ತ್ತು ಅಸ್ಥಮಾ ರೋಗಿಗಳನ್ನು ಕುಳ್ಳಿರಿಸಿ ಆಸ್ಪತ್ರೆಗೆ ಒಯ್ಯ ಬೇಕು.ಮಲಗಿಸಿದರೆ

ದಮ್ಮು ಜಾಸ್ತಿ ಆಗುವುದು.

ಸುಟ್ಟಗಾಯ ಆದ  ಜಾಗಕ್ಕೆ ತಣ್ಣೀರು ಹಾಕುತ್ತಿರ ಬೇಕು.ಇದರಿಂದ ಗಾಯದ ತೀವ್ರತೆ ಕಡಿಮೆ ಆಗುವುದು.

ಮೂಳೆ ಮುರಿತ ಇದ್ದರೆ  ಆ ಭಾಗವನ್ನು ಚಲನೆ ಕಮ್ಮಿಯಿರುವಂತೆ ನೋಡಿ ಕೊಳ್ಳ ಬೇಕು.ಇದಕ್ಕೆ ಸಾಧ್ಯವಿದ್ದರೆ ಸ್ಲಿಂಗ್ ಅಥವಾ

ಸ್ಪ್ಲಿಂಟ್ ಉಪಯೋಗಿಸ ಬಹುದು.ಬೆನ್ನು ಮೂಳೆಗೆ ಏಟು ಆದವರನ್ನು ಅದಸ್ಟು ಕಡಿಮೆ ಚಲನೆಗೊಳಪದಿಸ ಬೇಕು.ಇದರಿಂದ

ಬೆನ್ನು ಹುರಿಗೆ ಅಪಾಯ ಕಡಿಮೆ ಆಗುವುದು.

ಸಾಗಿಸುವ ವಾಹನದಲ್ಲಿ ಗಾಳಿ ಚೆನ್ನಾಗಿ ಓಡುತ್ತಿರ ಬೇಕು.

ವಾಂತಿ ಭೇದಿಯಿಂದ ಬಳಲುತ್ತಿರುವ ರೋಗಿಗಳಿಗೆ ಎಚ್ಚರ ಇದ್ದರೆ ನೀರು ಕುಡಿಸುತ್ತಿರ ಬಹುದು 

1 ಕಾಮೆಂಟ್‌: