ಹೊಟ್ಟೆ ನೋವು ಎಲ್ಲ ಗ್ಯಾಸ್ಟ್ರಿಕ್ ಅಲ್ಲ
ಹೊಟ್ಟೆಯ ಮೇಲಿನ ಭಾಗದಲ್ಲಿ ನೋವು ಬಂದರೆ ಗ್ಯಾಸ್ಟ್ರಿಕ್ ಎಂದು ತಿಳಿಯುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಬೇರೆ
ಗಂಭೀರ ಕಾರಣಗಳೂ ಇರ ಬಹುದು . ಉದಾ; ಹೃದಯಾಘಾತ , ಅಪ್ಪೆಂಡಿಸೈಟಿಸ್, ಪಿತ್ತ ಕೋಶದ ಸೋಂಕು ಮತ್ತು
ಪ್ಯಾಂಕ್ರಿಯಾಟಿಟಿಸ್ ಕಾಯಿಲೆ.
ಇದರಲ್ಲಿ ಎರಡು ಭಾಗಗಳಿವೆ .ಒಂದು ನಿರ್ನಾಳ ಗ್ರಂಥಿ , ಸಕ್ಕರೆ ಹತೋಟಿಯಲ್ಲಿ ಇದುವ ಇನ್ಸುಲಿನ್ ಉತ್ಪಾದನೆ ಮಾಡಿ
ನೇರ ರಕ್ತಕ್ಕೆ ಸೇರಿಸುತ್ತದೆ .ಇನ್ನೊಂದು ಸನಾಳ ಭಾಗ , ಇದು ಪಚನ ಕ್ರಿಯೆಗೆ ಬೇಕಾದ ರಸಗಳನ್ನು ಉತ್ಪಾದಿಸಿ
ನಳಿಕೆ ಮೂಲಕ ಸಣ್ಣ ಕರುಳಿಗೆ ಹರಿಸುತ್ತದೆ.
ಕೆಲವೊಮ್ಮೆ ಇಲ್ಲಿ ಉತ್ಪಾದನೆಯಾದ ಜೀರ್ಣ ರಸಗಳು ತಮ್ಮನ್ನು ಉಂಟು ಮಾಡಿದ ಗ್ರಂಥಿಯನ್ನೇ ಜೀರ್ಣಿಸ ತೊಡಗುತ್ತವೆ
ಭಸ್ಮಾಸುರನಂತೆ. ಆಗ ಉಂಟಾಗುವುದು ಪ್ಯಾಂಕ್ರಿಯಾಟಿಟಿಸ್ .
ರೋಗ ಕಾರಣಗಳು. ಮದ್ಯಪಾನ ,ಪಿತ್ತ ಕೋಶ ಪಿತ್ತ ನಾಳದ ಕಲ್ಲು ಇವು ಮುಖ್ಯ ಕಾರಣಗಳು.ಇದಲ್ಲದೆ ಕೆಲವು ಔಷಧಗಳು
,ಕೆಪ್ತೆ ಟೆರಾಯ ,ಅತಿಯಾಗಿ ಏರಿದ ತ್ರಯಿಗ್ಲಿಸೆರಿಡ್ ,ಹಲವೊಮ್ಮೆ ಏನೂ ಕಾರಣವಿಲ್ಲದೆ .
ರೋಗ ಲಕ್ಷಣಗಳು. ತೀವ್ರ ತರ ಮೇಲ್ ಹೊಟ್ಟೆ ನೋವು , ವಾಂತಿ ಮುಖ್ಯ ಲಕ್ಷಣಗಳು
ತಪಾಸಣೆ ; ರಕ್ತ ಪರೀಕ್ಷೆ ಯಲ್ಲಿ ಅಮೈಲೆಸ್ ಮತ್ತು ಲೈಪೆಸ್ ಎಂಬುವು ಹಲವು ಪಟ್ಟು ಏರಿರುತ್ತವೆ .
ಹೊಟ್ಟೆಯ ಸ್ಕ್ಯಾನ್ ಮಾಡಿದಾಗ ಮೆದೋ ಜಿರಕ ಗ್ರಂಥಿ ಊದಿರುತ್ತದೆ , ಪಿತ್ತ ಕೋಶದ ಕಲ್ಲುಗಳಿದ್ದರೆ ಕಾಣ ಬಹುದು.
ಉದರದಲ್ಲಿ , ಶ್ವಾಸಕೋಶದ ಸುತ್ತ ನೀರು ತುಂಬಿರ ಬಹುದು.
ಚಿಕಿತ್ಸೆ ; ಈ ಕಾಯಿಲೆಯು ಕೆಲವೊಮ್ಮೆ ಮಾರಣಾಂತಿಕ ವಾಗಬಹುದು .ಆದುದರಿಂದ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ
ಚಿಕಿತ್ಸೆ ಮಾಡುವುದು ಉತ್ತಮ. ವೈದ್ಯರು ಹೊಟ್ಟೆ ನೋವನ್ನು ಶಮನ ಮಾಡುವ ಔಷಧಗಳನು ನೀಡುವರು. ರೋಗಿಗೆ
ಬಾಯಿ ಮೂಲಕ ಏನನ್ನೂ ಕೊಡದೆ ರಕ್ತ ನಾಳಗಳ ಮೂಲಕ ಆಹಾರ ಕೊಡುವರು. ಇದರ ಉದ್ದೇಶ ಮೆದೊಜಿರಕ ಗ್ರಂಥಿಗೆ
ವಿಶ್ರಾಂತಿ ಕೊಡುವುದು. ಹೊಟ್ಟೆಗೆ ಆಹಾರ ತೆಗೆದು ಕೊಂಡರೆ ಜೀರ್ಣ ಕ್ರಿಯೆಗೆ ರಸಗಳನ್ನು ಉತ್ಪತ್ತಿ ಮಾಡ ಬೇಕಲ್ಲವೇ ?
ಈ ರಸ ವಿಶೇಷಗಳೇ ತಮಗೆ ಜನ್ಮವಿತ್ತ ಅಂಗವನ್ನು ಜೀರ್ಣಿಸಿ ಈ ಕಾಯಿಲೆ ಉಂಟು ಮಾಡಿದ್ದು.
ಹೆಚ್ಚಿನ ರೋಗಿಗಳು ಈ ಉಪಚಾರದಿಂದ ಗುಣ ಮುಖರಾಗುವರು. ಕೆಲವರಿಗೆ ರೋಗೆ ಉಲ್ಬಣಿಸಿ ಅನಾಹುತ ಆಗಬಹುದು.
ನಾವು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದೇವೆ ಗಾದರೂ ಮತ್ತೆ ಹೊಟ್ಟೆ ನೋವು ಊಟದ ನಂತರ ವಾಂತಿ ಬರುವುದು ಆಗ್ತಾ ಇದೆ ನಾವು 1 ತಿಂಗಳ ಹಿಂದೆ ಪಿತ್ತಕೋಶ ಮತ್ತು ರಕ್ತನಾಳ ಹರಡಿರುವ ಕ್ಯಾನ್ಸರ್ ಸರ್ಜರಿ ಮೂಡಿಸಿದರು ಮತ್ತೆ ತೊಂದರೆ ಆಗುತ್ತಿದೆ
ಪ್ರತ್ಯುತ್ತರಅಳಿಸಿ