ಬೆಂಬಲಿಗರು

ಗುರುವಾರ, ಜುಲೈ 25, 2013

ಎರಡು ಒಳ್ಳೆಯ ಕಾದಂಬರಿಗಳು


ಹಿಂದೆ ಓದಿದ ಎರಡು ಕಾದಂಬರಿಗಳು
              
            
.                                                                                   ಮೊದಲನೆಯದು  ಖ್ಯಾತ ಮಲಯಾಳಿ ಬರಹಗಾರ ಡಾ

ಪುನಥಿಲ್ ಕುಂಞಬ್ದುಲ್ಲಾ ಅವರ ಕಾದಂಬರಿ ಸ್ಮಾರಕ ಶಿಲೈ ಗಳ್ ಯಇಂಗ್ಲಿಷ್ ಅನುವಾದ ಮೆಮೋರಿಯಲ್ ಸ್ಟೋನ್ ಸ್

.ಮಲಬಾರಿನ

ದೊಡ್ಡ ಮುಸ್ಲಿಂ ಮತೆತನದ ಕತೆ.ಅರಕ್ಕಲ್ ತರವಾಡಿನ ಪುಕ್ಕೊಯ ತಂಗಳ್.ಇದರ ಕಥಾನಾಯಕ.ಘನತೆ ,ಪುರೋಗಾಮಿ

ನಡೆ ,ತ್ಯಾಗಶೀಲತೆ ,ವಿದ್ಯಾ ಪಕ್ಷಪಾತ ಮತ್ತು ದಾನ ಶೀಲತೆ ಒಂದು ಕಡೆಯಾದರೆ ತೀರದ ಲೈಂಗಿಕತೆ ಇನ್ನೊಂದು

ಕಡೆ.ಕೊನೆಗೆ

ಈ ದೌರ್ಬಲ್ಯವೇ ಮನೆತನದ ಅವನತಿಗೆ ಕಾರಣವಾಗುವ ದುರಂತ.ಇವುಗಳ ನಡುವೆ ಆ ಊರಿನ ಅನೇಕ ವಿದ್ಯಮಾನಗಳು

ವರ್ಣಮಯವಾಗಿ  ಮೂಡಿ ಬಂದಿವೆ.ಅನಾಥ ಮಗು ಕು೦ಞಾಲಿ ,ಮಗಳು ಪೂಕು೦ಞಿ,ಪತ್ನಿ ಅತ್ತಾಬಿ ಇತ್ಯಾದಿ ಮುಖ್ಯ

ಪಾತ್ರಗಳೊಡನೆ

ಶಾಲೆ ಅಧ್ಯಾಪಕರು ,ಮುಸ್ಲಿಯಾರ್ ಇತ್ಯಾದಿ ಗಳು ಲವಲವಿಕೆಯಿಂದ ಕೂಡಿದ್ದರೂ ಬರಹಗಾರ ಯಾವುದೇ

ಭಾವನಾತ್ಮಕತೆಯಿಂದ


ತನ್ನನ್ನು ದೂರ ಇಟ್ಟಿದ್ದಾನೆ.ಪುಸ್ತಕ ಕೆಳಗಿಟ್ಟಾಗ ಮುಗಿಯಿತೇ ಎಂದನಿಸುತ್ತದೆ.ಇವರ ಇನ್ನೊಂದು ಪ್ರಸಿದ್ಧ ಕೃತಿ ಮರುನ್ನು


ಕನ್ನಡದಲ್ಲಿ ಔಷಧಿ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ.


                                   
                                   

                                                       
ಇನ್ನೊಂದು  ತಮಿಳು ಬರಹಾಗಾರ ತ್ಹೊಪ್ಪಿಲ್ ಮೊಹಮ್ಮದ್ ಮೀರಾನ್ ಅವರ ಕಾದಂಬರಿ   ಚೈವು ನಾರ್ಕಾಲಿ ಯ ಇಂಗ್ಲಿಷ್


ಅನುವಾದ

ದಿ ರೆಕ್ಲೈನಿಂಗ್ ಚೇರ್.ಕಾದಂಬರಿ ಮಳೆಯ ವರ್ಣನೆಯೊಂದಿಗೆ ಆರಂಭವಾಗುತ್ತದೆ.ಇಡೀ ಕಾದಂಬರಿ ಮತ್ತು  ಅದರ ಅನುವಾದ

ಹಿತವಾದ


ತಂಗಾಳಿಯಂತೆ ಇದೆ.ಕತೆ ಕನ್ಯಾಕುಮಾರಿ ನಾಗರಕೊಯಿಲ್ ಸರಹದ್ದಿನ ತಿರುವಾ೦ಕೂರ ಗೆ ಸೇರಿದ ಪ್ರದೇಶ.ಮಲಯಾಳ

,ತಮಿಳು


ಗಳ ಮಿಶ್ರಣ.ಕಥಾನಾಯಕ ಮುಸ್ತಾಫಾ ಕಣ್ಣು ದೊಡ್ಡ ತರವಾಡಿನ ಕೊನೆಯ ದುರಂತ ನಾಯಕ.ಆಲಸಿ,ಕಾಮುಕ.ಅವನ ಪತ್ನಿ



ಮರಿಯಂ ಅವನ ಹಿಂಸೆ ಮತ್ತು  ಅವಗಣನೆಗೆ ಗುರಿಯಾಗ್ತ್ತಾಳೆ.ಅವಳ ಒಂದು ಮಾತು ಹೀಗಿದೆ ‘ನಾವು ಹೆಂಗಸರು


ಎಂದಾದರೂ


ಬದುಕಿದ್ದೆವೆಯೇ ?ನಾವು ಇಂಚು ಇಂಚಾಗಿ ಸಾಯುವುದು ಮಾತ್ರ.ದೇವರು ನಮ್ಮನ್ನು ಗಂಡಸರ ಕೈಯ್ಯಲ್ಲಿ ಸಾಯಲೆಂದೇ


ಹುಟ್ಟಿಸಿದ್ದಾನೆ.':


ಈ ಕಾದಂಬರಿಯಲ್ಲಿ ಮುಸ್ತಫಾನ ಭವ್ಯ ಮನೆ ಸೌದಾ ಮಂಜಿಲ್ ನ ಒಂದೊಂದು ವಸ್ತುವೂ ಒಂದು ರೋಚಕ ಕತೆ ಹೇಳುತ್ತದೆ.


ಬೆಳ್ಳಿಯ ಖಡ್ಗ ,ಶ್ರೀಗಂಧದ ಕಪಾಟು, ಕುಳಿತುಕೊಳ್ಳುವ ಕುರ್ಚಿ ಮತ್ತು ಸೌದಾ ಮಂಜಿಲ್ ,ಅದರ  ಕೊಳ ಎಲ್ಲವಕ್ಕೂ


ಇತಹಾಸ ರೂಪದಲ್ಲಿ ಕತೆ ಹಣೆದಿದ್ದಾರೆ ಮೀರಾನ್.


                                           

ಎರಡು ಕಾದಂಬರಿಗಳ  ಕತೆ ನಡೆದ  ಊರು ಬೇರೆ ಬೇರೆಯಾದರೂ ಎರಡರಲ್ಲೂ ಬಹಳ ಸಾಮ್ಯತೆ ಇದೆ.ಎರಡೂ ದೊಡ್ಡ


ಮನೆತನದ ಅವನತಿಯ ಕತೆಗಳು.ಜಿನ್(ದೆವ್ವ),ಮಂತ್ರವಾದಿಗಳು,ಅಡಿಗೆ ಮನೆ ವರ್ಣನೆ ಇತ್ಯಾದಿ ಎರಡರಲ್ಲೂ ಸಾಕಷ್ಟಿವೆ.


ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಈ  ಅನುವಾದಗಳ ಪ್ರಕಾಶಕರು ಕೇಂದ್ರ ಸಾಹಿತ್ಯ ಅಕಾಡೆಮಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ