ಈಡಿಸ್ ಸೊಳ್ಳೆ
ಈ ಸೊಳ್ಳೆ ದೇವರಿಂದ ಸೃಷ್ಟಿಸಲ್ಪಟ್ಟು ಸ್ವಚ್ಚಂದವಾಗಿ ಬದುಕಿಕೊಂಡು ಇತ್ತು. ಯಾರಿಗೂ ಅದರ ಇರುವಿನ ಅರಿವು ಇರಲಿಲ್ಲ.
ಹೂವಿನ ಮಕರಂದ ಅವುಗಳ ಆಹಾರ. ಆದರೆ ಹೆಣ್ಣು ಸೊಳ್ಳೆಗೆ ಮೊಟ್ಟೆಗಳನ್ನು ಪೋಷಿಸಲು ಸಸ್ತನಿಗಳ
ರಕ್ತ ಬೇಕು. ಅದಕ್ಕೆ ಸಿಕ್ಕುವುದು ಬಡಪಾಯಿ ಮನಷ್ಯರು. ಸೊಳ್ಳೆಗಳಲ್ಲಿ ಇದು ಮೇಲ್ಜಾತಿಯದು ಎನ್ನ ಬಹುದು.ಏಕೆಂದರೆ
ಅದಕ್ಕೆ ಕೊಳಕು ನೀರು ಆಗದು .ಶುದ್ದ ನೀರೆ ಬೇಕು.ಕ್ಲೋರಿನೇಟೆದ್ ನೀರೂ ಆಗಬಹುದು.ಡಬ್ಬ ,ಹೂ ಚಟ್ಟಿ ,ಮರದ ಪೊಟರೆ
ಟಾಯ್ಲೆಟ್ ಗುಂಡಿ ಯಂತಹ ಕಡೆ ನಿಂತ ಶುದ್ದ ನೀರಿನಲ್ಲಿ ಮೊಟ್ಟೆ ಇಡುವುದು.
ಮೊಟ್ಟೆ ,ಲಾರ್ವಾ ಹಂತ ದಾಟಿ ಸೊಳ್ಳೆ ರೂಪ ಧರಿಸುವುದು.ಹೆಣ್ಣು ಸೊಳ್ಳೆ ಮಾತ್ರ ನಮಗೆ ಕಚ್ಚುವುದು. ಅದೂ
ತನ್ನ ಮೊಟ್ಟೆಗಳ ಆರೈಕೆಗಾಗಿ. ಈಡಿಸ್ ಸೊಳ್ಳೆ ಸಂಗೀತ ಪ್ರೇಮಿ ಅಲ್ಲ. ಆದುದರಿಂದ ಅನಾಫಿಲಿಸ್ ಸೊಳ್ಳೆಯಂತೆ
ನಮ್ಮ ಕಿವಿಯ ಹತ್ತಿರ ಆಲಾಪನೆ ಮಾಡುವುದಿಲ್ಲ.ಹಲವರು ಸೊಳ್ಳೆ ಕಡಿತವನ್ನಾದರೂ ಸಹಿಸಿಯಾರು ,ಆದರೆ
ಅದರ ಸಂಗೀತವನ್ನಲ್ಲ.ನಸುಕು ಮತ್ತು ಸಂಧ್ಯೆ ಇದು ರಕ್ತಕ್ಕಾಗಿ ಧಾಳಿ ಇಡುವುದು.ಮುಗಿಲು ಮತ್ತು ರಾತ್ರಿ ಮಂದ
ಬೆಳಕು ಇದ್ದರೆ ವೇಳೆ ತಪ್ಪಿ ಕಡಿಯ ಬಹುದು. ಜಯಧ್ರಥನ ನೆನಪಾಗುತ್ತಿದೆಯೇ?
ಆದರೆ ಎಲ್ಲರೂ ತನ್ನ ಇರುವಿಕೆಯನ್ನು ಕಡೆಗಣಿಸಿದುದರಿಂದ ಈಗ ಈ ಸೊಳ್ಳೆ ತನ್ನ ಕಡಿತದೊಂದಿಗೆ
ಡೆ೦ಗು ವೈರಸ್ ನ್ನು ಉಚಿತ ಕೊಡುಗೆ ಯಾಗಿ ಕೊಡುತ್ತಿದೆ. ಇದು(ದರ) ಕಡಿತದ ವ್ಯಾಪಾರ .ಡೆಂಗು ರೋಗಾಣುಗಳನ್ನು
ಈಡಿಸ್ ಸೊಳ್ಳೆಗಳು ಉತ್ಪತ್ತಿ ಮಾಡಲಿಲ್ಲ . ಮಾನವನ ರಕ್ತದಿಂದಲೇ ಅದಕ್ಕೆ ಬಂದ ಬಳುವಳಿ.ಅದು
ನಿಸರ್ಗದ ಆಣತಿಯಂತೆ ಮನುಷ್ಯನನ್ನು ಕಚ್ಚಿದಾಗ ವೈರಸ್ ಹರಡುವುದು.
ಈಡಿಸ್ ಸೊಳ್ಳೆ ತುಂಬಾ ಎತ್ತರ ,ದೂರ ಹಾರದು . ಮನುಷ್ಯನ ಕಾಲಿಗೆ ,ಕುರ್ಚಿಗಳ ರಂಧ್ರದ ಮೂಲಕ
ತೊಡೆ ಬಾಗಕ್ಕೆ ಕಚ್ಚುವುದು ಹೆಚ್ಚು.
ಡೆ೦ಗು ,ಚಿಕೂನ್ಗುನ್ಯಾ ಕಾಯಿಲೆ ಪ್ರಸಾರದಿಂದ ಪ್ರಸಿದ್ದಿಗೆ ಬಂದ ಈ ಸೊಳ್ಳೆಗೆ ಮನೆ ಸುತ್ತ ನೀರು ನಿಲ್ಲದಂತೆ ಮಾಡಿದರೆ
ಒಂದು ವೇಳೆ ನೀರು ನಿಲ್ಲಲೇ ಬೇಕಾದರೆ ಗಪ್ಪಿ ಮೀನುಗಳನ್ನು ಸಾಕಿದರೆ ಹತೋಟಿಯಲ್ಲಿ ಇದ ಬಹುದು.
ಎಲ್ಲೆಡೆ ನೀರು ನಿಲ್ಲುವ ಕರಾವಳಿ ಜಿಲ್ಲೆಯಲ್ಲಿ ಇದು ಎಷ್ಟು ಸಾಧ್ಯ?
(ಆಫ್ರಿಕಾದಲ್ಲಿ ಹಳದಿ ಜ್ವ್ರರ ಹರಡುವುದೂ ಇದೇ ಸೊಳ್ಳೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ