ಬೆಂಬಲಿಗರು

ಭಾನುವಾರ, ಆಗಸ್ಟ್ 15, 2021

ರೆ ಫಾ ಪತ್ರಾವೋ

                        ಪ್ರಾತಃ ಸ್ಮರಣೀಯ   ರೆ ಫಾ ಆಂಟನಿ ಪತ್ರಾವೋ

 

"ರೆವೆರೆಂಡ್ ಪತ್ರಾವೋ ರವರು  ಪುತ್ತೂರಿನಲ್ಲಿ ಒಂದು ಪ್ರಿ ಯೂನಿವರ್ಸಿಟಿ ತರಗತಿಯನ್ನು ತೆರೆಯ ಬೇಕೆಂದು ಕೇಳಲು ನನ್ನೆಡೆಗೆ ಬಂದಾಗ ನಾನೇನೂ ಅಷ್ಟು ಉತ್ಸಾಹ ತೋರಲಿಲ್ಲ .ಆದರೆ ಅವರು ನಿರುತ್ಸಾಹರಾಗದೆ ತಮ್ಮ ಕೆಲಸ ಮುಂದುವರಿಸಿ ಮತ್ತೆ  ನನ್ನೆ ಬಳಿಗೆ ಬಂದರು .ಅವರ ಚಟುವಟಿಕೆ ,ಉತ್ಸಾಹ ,ಆವೇಶಗಳನ್ನು ಕಂಡು ನನಗೆ ಪಾದರಸದ ನೆನಪಾಯಿತು .ಇನ್ನೇನು ದಾರಿದ್ಯ ವಿದ್ದರೂ ಚಿಂತೆಯಿಲ್ಲ ;ಹೃದಯದಲ್ಲಿ ಶ್ರದ್ದೆ ,ತಲೆಯಲ್ಲಿ ಬುದ್ಧಿ ಇದ್ದರೆ ಏನನ್ನು ಬೇಕಾದರೂ ಸಾದಿಸಬಹುದೆಂಬುದಕ್ಕೆ ಈ ಸಂಸ್ಥೆ ಒಂದು ನಿದರ್ಶನ "ಇದು ಪುತ್ತೂರಿನ ಮೊದಲ ಕಾಲೇಜು ಸಂತ ಫಿಲೋಮಿನಾ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಆಗ ಮೈಸೂರು ವಿಶ್ವ ವಿದ್ಯಾಲಯ ದ  ಉಪಕುಲಪತಿಗಳಾಗಿದ್ದ ರಾಷ್ಟ್ರ ಕವಿ ಕುವೆಂಪು ನುಡಿದ ಮೊದಲ ಮಾತುಗಳು . 

ರೆವೆರೆಂಡ್ ಪತ್ರಾವೋ ಪುತ್ತೂರಿನ ಮಟ್ಟಿಗೆ ಯುಗ ಪುರುಷ . ೧೦. ೧೨. ೧೯೦೧ ರಂದು ಮಂಗಳೂರಿನಲ್ಲಿ ಜನಿಸಿದ ಇವರು .ಆರಂಭದ ವಿದ್ಯಾಭ್ಯಾಸ ಸಂತ ಅಲೋಸಿಯಸ್ ಕಾಲೇಜ್ ನಲ್ಲಿ ಮಾಡಿ ಜೆಪ್ಪು ಸಂತ ಜೋಸೆಫ್ ಸೆಮಿನರಿ ಸೇರಿದ ಇವರು ೩. ೧೨.೧ ೯೨೭ರಂದು ಪ್ರೀಸ್ಟ್ ಆಗಿ ನೇಮಕಗೊಂಡು ೮. ೧೦.೧೯೨೯ರಂದು ಪುತ್ತೂರಿನ ಮಾಯ್ ದೆ ದೇವುಸ್ ಚರ್ಚ್ ನ ಸೇವೆ ವಹಿಸಿ ಕೊಂಡರು . 

ಶಿಕ್ಷಣ ಮತ್ತು ಅರೋಗ್ಯ ರಂಗದಲ್ಲಿ ಹಲವು ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲಾ ಜಾತಿ ಮತ್ತು ವರ್ಗದ ಜನರಿಗೆ  ತೆರೆದಿಟ್ಟು ಈ ಭಾಗದ ಅಭಿವೃದ್ಧಿಯ ಬಾಗಿಲು ತೆರೆದರು .. 

ಮಾಯಿ ದೆ ದೇವುಸ್ ಪ್ರಾಥಮಿಕ ಶಾಲೆ ,ಸಂತ ವಿಕ್ಟರ್ಸ್ ಗರ್ಲ್ಸ್ ಹೈ ಸ್ಕೂಲ್ ,ಸಂತ ವಿಕ್ಟರ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ .ಸಂತ ಫಿಲೋಮಿನಾ ಹೈ ಸ್ಕೂಲ್,ಸಂತ ಫಿಲೋಮಿನಾ ಕಾಲೇಜುತ ಇವುಗಳಿಂದ ವಿದ್ಯಾವಂತರಾಗಿ ಹೊರಬಂದ ಸಾವಿರಾರು ವಿದ್ಯಾರ್ಥಿಗಳು ದೇಶ ವಿದೇಶ ದುದ್ದಕ್ಕೂ ಹರಡಿದ್ದಾರೆ .. ಫಾದರ್ ಪತ್ರಾವೋ ಆಸ್ಪತ್ರೆ ಜನ ಸಾಮಾನ್ಯರಿಗೆ ಬೆಲೆ ಕಟ್ಟಲಾಗದ ಸೇವೆ ಸಲ್ಲಿಸಿದೆ . ಈ ಸಂಸ್ಥೆಗಳೆಲ್ಲದರ ಸ್ಥಾಪನೆಯ ಹಿಂದೆ ಫಾ ಪತ್ರಾವೋ ಅವರ ದೂರ ದರ್ಶಿತ್ವ ಮತ್ತು ಕ್ಷಮತೆ ಕಾಣ ಬಹುದು . 

  ಪುತ್ತೂರಿನ ಸರ್ವತೋಮುಖ ಏಳಿಗೆ ಗೆ  ಶ್ರಮಿಸಿ ಮನೆ ಮಾತಾದ  ಇವರು 14-05-1975 ರಂದು ೭೪ ನೇ ವಯಸ್ಸಿನಲ್ಲಿ ಇಹ ಲೋಕ ತ್ಯಜಿಸಿದರು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ