ಬೆಂಬಲಿಗರು

ಶನಿವಾರ, ಆಗಸ್ಟ್ 7, 2021

ಡಾ ಸಿ ಆರ್ ಬಲ್ಲಾಳ್ ಎರಡು ಪುಸ್ತಕಗಳು

                                  

 


ನನ್ನ ಮಾನಸ ಗುರುಗಳಾದ ಡಾ ಸಿ ಆರ್ ಬಲ್ಲಾಳ್ ಅವರ ಬಗ್ಗೆ ಎರಡು ಪುಸ್ತಕ ಗಳನ್ನು ಓದಿ ಮುಗಿಸಿದ್ದೇನೆ .ಒಂದು 'ಆಟೊಬಯೊಗ್ರಫಿ ಆಫ್ ಆ ಸರ್ಜನ್ "-ಇದು ಅವರ ಆತ್ಮ ಚರಿತ್ರೆ . . ಉಡುಪಿಯ ಚಿಟ್ಪಾಡಿ ಬೀಡಿನ ರಾಮ ಕೃಷ್ಣ ಬಲ್ಲಾಳ್  ಪ್ರಸಿದ್ದ ಡಾ ಸಿ ಆರ್ ಬಲ್ಲಾಳ್ ಆದ ಕತೆ.ಮುನ್ನುಡಿಯಲ್ಲಿ  ಪ್ರಸಿದ್ದ ಹೃದಯ ಶಸ್ತ್ರ ಚಿಕಿತ್ಸಾ ತಜ್ನ ಡಾ ಕೆ ಎಂ ಚೆರಿಯನ್ ತಮ್ಮ ಕುಟುಂಬದ ಮೂರು ತಲೆಮಾರಿನ ವಿದ್ಯಾರ್ಥಿಗಳ ಪ್ರೀತಿಯ ಗುರು ಎಂದು ಕೊಂಡಾಡಿದ್ದಾರೆ . ಶೈಶವಾಸ್ತೆಯಲ್ಲಿ  ತಾಯಿಯನ್ನು ಕಳೆದು ಕೊಂಡ ಇವರು ಹಿರಿಯರ ಆಶ್ರಯದಲ್ಲಿ  ಅರಳಿ ಬೆಳೆದ ಪರಿ ,ಕೆ ಎಂ ಸಿ ಯಲ್ಲಿ ಡಾ ಎಂ ಪಿ ಪೈ ಯಂತಹವರ ಮಾರ್ಗ ದರ್ಶನ ಇತ್ಯಾದಿ ಬಗ್ಗೆ ಆತ್ಮೀಯ ಚಿತ್ರಣ ಇದೆ .ಜತೆಗೆ ಅವರ ಕುಟುಂಬ ಹಾಗೂ ವೃತ್ತಿ ಜೀವನದ ಸ್ವಾರಸ್ಯ ,ಸುಖ ದುಖ ಬಗ್ಗೆ ಉಲ್ಲೇಖ  .110 ಪುಟಗಳ ಕಿರು ಹೊತ್ತಿಗೆ ಒಂದೇ ಉಸಿರಿಗೆ ಓದಿ ಮುಗಿಸಿದೆ .ಇನ್ನೊಂದು ಕನ್ನಡದಲ್ಲಿ "ವೈದ್ಯ ರತ್ನ ಡಾ ಸಿ ಆರ್ ಬಲ್ಲಾಳ" .ಇದು ಒಂದು ಗೌರವ ಗ್ರಂಥ .(ಇದಕ್ಕೆ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ  ದಿ.ಶ್ಯಾಮ ಸುಂದರ್ ಮುನ್ನುಡಿ ಬರೆದಿದ್ದಾರೆ .ಕೆಲ ತಿಂಗಳ ಹಿಂದೆ ಶ್ಯಾಮ್ ಸುಂದರ್ ಅವರ ಆತ್ಮ ಚರಿತ್ರೆ ಖರೀದಿಸಿ ಓದಿದ್ದೆ.)ಇದನ್ನು ಶ್ರೀ ಶ್ರೀಕರ ದಾಮ್ಲೆ ಮತ್ತು ಕೆ ರಮೇಶ ರಾವು ಸಂಪಾದಿಸಿದ್ದು ಬಲ್ಲಾಳರ ಹೆಚ್ಚು ಮನಸಿನ ಹತ್ತು ಮುಖಗಳ ಪರಿಚಯ ಮತ್ತು ವಿದ್ಯಾರ್ಥಿ ,ಸಹೋದ್ಯೋಗಿಗಳು ಮತ್ತು ಕುಟುಂಬದವರು ಅವರ ಬಗ್ಗೆ ಬರೆದ ಲೇಖನಗಳು ಇವೆ .

ಈ ಪುಸ್ತಕಗಳನ್ನು ಪ್ರೀತಿಯಿಂದ ಕಳುಹಿಸಿ ಕೊಟ್ಟ ಗುರು ಬಲ್ಲಾಳ ರಿಗೆ  ಆಭಾರಿ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ