ಅಮೇರಿಕಾ ದಲ್ಲಿ ಮೊಮ್ಮಗ ಮಲಗಿರುವಾಗ ಸಮಯ ಕಳೆಯಲು ಯು ಟ್ಯೂಬ್ ನಲ್ಲಿ ಸಂಗೀತ ,ಚಲನ ಚಿತ್ರ ಮತ್ತು ಸಂದರ್ಶನ ಇತ್ಯಾದಿ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ . ಯಾವುದೋ ಮಲಯಾಳಂ ಚಾನೆಲ್ ನಲ್ಲಿ ಮಲಯಾಳಂ ನ ಹಿರಿಯ ಮತ್ತು ನನ್ನನ್ನೂ ಸೇರಿ ವೀಕ್ಷಕರ ಅಚ್ಚು ಮೆಚ್ಚಿನ ನಟಿ ಕವಿಯೂರು ಪೊನ್ನಮ್ಮ ಅವರ ಸಂದರ್ಶನ ಬರುತ್ತಿತ್ತು . ಕನ್ನಡದಲ್ಲಿ ಹಿಂದೆ ಪಂಡರೀ ಬಾಯಿ ಇದ್ದಂತೆ ಇವರ ತಾಯಿ ಪಾರ್ಟ್ ಟ್ರೇಡ್ ಮಾರ್ಕ್ .ಮೋಹನ ಲಾಲ್ ಅವರಿಗೆ ಅನೇಕ ಚಿತ್ರಗಳಲ್ಲಿ ತಾಯಿ ಆಗಿ ಅಭಿನಯಿಸಿದ್ದಾರೆ . ಹಣೆಯಲ್ಲಿ ರುಪಾಯಿ ಗಾತ್ರದ ಕುಂಕುಮ ಬೊಟ್ಟು ,ಮುಖದಲ್ಲಿ ಮುಗ್ದ ಪರಿಶುದ್ಧ ಮಾತೃಛಾಯೆ .
ಸಂದರ್ಶನದಲ್ಲಿ ಅವರ ತಾಯಿ ಪಾತ್ರ ಗಳ ಯಶಸ್ವಿಗೆ ಕತೆ ,ತಮ್ಮ ನಟನೆ ಯ ಜತೆ ಸಮಾಜದಲ್ಲಿ (ಮನೆಯಲ್ಲಿ ) ಹಿಂದೆ ತಾಯಿಗೆ ಇದ್ದ ಗೌರವ ಸ್ಥಾನ ಕೂಡಾ ಮುಖ್ಯ ಕಾರಣ ಎಂದು ಹೇಳಿದ್ದು ನನ್ನ ಮನಸಿಗೆ ನಾಟಿತು . ಅದೇ ಹಿರಿಯರ ಸ್ಥಾನಮಾನ ನಶಿಸುತ್ತಿರುವ ಇಂದಿನ ದಿನಗಳಲ್ಲಿ ಈಗಿನ ತಲೆಮಾರಿನವರಿಗೆ ಅಷ್ಟೇ ಅಪೀಲ್ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂಬುದು ಚಿಂತನೆಗೆ ಹಚ್ಚಿತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ