ಅಮೇರಿಕಾದಲ್ಲಿ ಪಂಪನ ನೆನಪು
ಮೇಲಿನ ಶೀರ್ಷಿಕೆ ಓದಿದೊಡನೆ ಭಟ್ಟರಿಗೆ ಅಮೇರಿಕಾ ಕ್ಕೆ ಹೋದಾಗ ಊರ ನೆನಪು ಗಾಢ ವಾಗಿ ನೆನೆವುದೆನ್ನ ಮನಂ ಪುತ್ತೂರು ನಗರಮಮ್ ಎಂದು ಮನಸು ಹೇಳುತ್ತಿತ್ತು ಎಂದು ಬರೆಯುತ್ತೇನೆ ಎಂದು ಭಾವಿಸಿದರೆ ಅದು ತಪ್ಪು . ಅಲ್ಲಿ ನನ್ನ ಮಗನ ಮಿತ್ರರು ಒಬ್ಬರು ಪರಿಚಯ ಆಯಿತು ;ಕನ್ನಡಿಗರು ಸ್ನೇಹಮಯಿ ನಗುಮುಖ . ತಂತ್ರಜ್ಞರು .ಅವರ ಹೆಸರು ಅಲಂಪು . ಈ ಹೆಸರು ಕೇಳಿದಾಗಲೇ ನಾನು ನನ್ನ ಸೊಸೆಯ ಬಳಿ ಕೇಳಿದೆ .ಅವರ ತಂದೆ ಕನ್ನಡ ಪ್ರಾಧ್ಯಾಪಕರೇ ?ಎಂದು .ಅದಕ್ಕೆ ಸಕಾರಾತ್ಮಕ ಉತ್ತರ ಬಂದಿತು ;ಅದನ್ನು ಅವರ ಬಳಿಯೇ ಕೇಳಿ ದೃಢ ಪಡಿಸಿಕೊಂಡೆ .
ಅಲಂಪು ಶಬ್ದ ನಮಗೆ ಪಂಪನ ವಿಕ್ರಮಾರ್ಜುನ ವಿಜಯ ಅಥವಾ ಪಂಪ ಭಾರತ ದಲ್ಲಿ ಬರುವ ಒಂದು ಪದ್ಯ ನಮಗೆ ಪ್ರಾಥಮಿಕ ಶಾಲೆಯಲ್ಲಿ ಬಾಯಿಪಾಠ ಕ್ಕೆ ಇದ್ದು ಅದರಲ್ಲಿ ಬರುವುದರಿಂದ ಅದನ್ನು ಕೇಳಿದೊಡನೆ ಕಿವಿ ಕುತ್ತ ಆಯಿತು .
ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೋ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್
ಇದರಲ್ಲಿ ಮೊದಲ ಸಾಲಿನಲ್ಲಿ ಗೊಟ್ಟಿಯಲಂಪು ಎಂದು ಬರುತ್ತದೆ . ಶಬ್ಧ ಕೋಶದ ಪ್ರಕಾರ
ಅಲಂಪು
- ಸೌಂದರ್ಯ,ಚೆಲುವು,ಚೆನ್ನು,ಕೋಲ,ಅಣ,ಚೆಲುವಿಕೆ,ಎಸಕ,ನೆಟ್ಟಿ,ಹಸನು,ಅಲ್ಲಣಿ,ಅಲ್ಲಣಿಗೆ
- ಇಳಿಲು,ನಿರತೆ,ಸಮಂತು,ಮೀಟು,ಮಾಸರ,ಹೊಂಪು,ಗಾಡಿ, ಇವುಗಳಲ್ಲಿ ಕೆಲವು ಅರ್ಥ ಗಳನ್ನು ಮನನ ಮಾಡಲು ಇನ್ನೊಮ್ಮೆ ಶಬ್ದ ಕೋಶ ನೋಡ ಬೇಕಾಗ ಬಹುದು .ಆದುದರೊಂದ ಮೊದಲ ಮೂರು ಅರ್ಥ ಗಳನ್ನು ಒಪ್ಪಿ ಕೊಳ್ಳೋಣ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ