ಅಮೆರಿಕಾ ಪ್ರವಾಸದ ಬಗ್ಗೆ ಬರೆಯಿರಿ ಎಂದು ಮಿತ್ರರು ಕೋರಿದ ಕಾರಣ ತೊಡಗಿರುವೆನು . ಈಗ ಹೆಚ್ಚಿನವರು ವಿದೇಶ ಪ್ರಯಾಣ ಮಾಡಿ ಅನುಭವ ಇರುವವರಾದರೂ ಇಲ್ಲದ ಕೆಲವರಿಗಾಗಿ ಮುದಲಿಂದ ತೊಡಗುವೆನು . ಮಕ್ಕಳ ಮನೆಗೆ ಹೋಗುವಾಗ ತಾಯಂದಿರ ತಯಾರಿ ತಿಂಗಳುಗಳ ಮೊದಲೇ ಆರಂಭ .ಉಪ್ಪಿನಕಾಯಿ ,ಹಪ್ಪಳ ,ಸೆಂಡಿಗೆ ,ಸಿಹಿತಿಂಡಿ ಇತ್ಯಾದಿಗಳ ತಯಾರಿ ಮತ್ತು ಪ್ಯಾಕಿಂಗ್ ,ಕುಕ್ಕರ್ ,ಕಾವಲಿಗೆ ,ಶ್ಯಾವಿಗೆ ಮುಟ್ಟು ನಂತಹ ಪಾತ್ರೆ ಪರಡಿ ,ಸೀರೆ ಗಳು ಕೂಡಾ . ಸಾಮಾನ್ಯ ವಿದೇಶ ಪ್ರಯಾಣದಲ್ಲಿ ೨೨ ಕಿಲೋ ದೊಡ್ಡ ಪೆಟ್ಟಿಗೆ ಲಗೇಜ್ ಕೋಣೆ ಯಲ್ಲಿ ಉಚಿತ ವಾಗಿ ಬಿಡುವರು .ಅದನ್ನು ನಾವು ನಿಲ್ದಾಣದಲ್ಲಿ ವಿಮಾನ ಸಂಸ್ಥೆಯ ಕೌಂಟರ್ ನಲ್ಲಿ ಕೊಡ ಬೇಕು ,ನಡುವೆ ಇನ್ನೊಂದು ನಿಲ್ದಾಣದಲ್ಲಿ ಅದೇ ಸಂಸ್ಥೆಯ ವಿಮಾನವನ್ನು ಹಿಡಿಯುವುದಾದರೆ ಅವರೇ ಅದನ್ನು ಬದಲಾಯಿಸುವರು . ಇನ್ನೊಂದು ನಮ್ಮ ಕೈಯ್ಯಲ್ಲಿ ಅಥವಾ ಬೆನ್ನಲ್ಲಿ ಹಾಕಿಕೊಂಡು ವಿಮಾನದ ಒಳಗೆ ಕೊಂಡು ಹೋಗುವ ಬ್ಯಾಗ್ .ಇದು ಸಾಮಾನ್ಯ ಏಳು ಕಿಲೋ ಇರಬಹುದು . ಲ್ಯಾಪಟಾಪ್ ಕೂಡಾ ಒಳಗಡೆ ಕೊಂಡು ಹೋಗ ಬಹುದು. ೧೦೦ಮಿಲಿ ಗಿಂತ ಅಧಿಕ ಟೂತ್ ಪೇಸ್ಟ್ ಇತ್ಯಾದಿ ಕೊಂಡು ಹೋಗಲು ಬಿಡರು .ಅದೇ ರೀತಿ ಚಾಕು ಚೂರಿ ಇತ್ಯಾದಿ . ಎಲ್ಲಾ ಸಾಮಾನು ಕಟ್ಟಿ ಮನೆಯಲ್ಲಿಯೇ ತೂಗಿಕೊಂಡು ಹೋಗುವುದು ಸಾಮಾನ್ಯ . ಲಗೇಜ್ ತೂಕ ಲೆಕ್ಕಕ್ಕಿಂದ ಇದ್ದರೆ ಬಹಳ ಅಧಿಕ ಹಣ ಕಕ್ಕ ಬೇಕಾಗುವುದು .
ಬೆಂಗಳೂರಿನಿಂದ ಎಮಿರೇಟ್ಸ್ ಸಂಸ್ಥೆಯ ವಿಮಾನ ಮುಂಜಾನೆ 4.45 ಕ್ಕೆ .ಸಾಮಾನ್ಯ ಎರಡು ಮೂರು ಗಂಟೆ ಮೊದಲೇ ನಿಲ್ದಾಣ ದಲ್ಲಿ ಹಾಜರಿರ ಬೇಕಾದುದರಿಂದ ರಾತ್ರಿ ನಿದ್ದೆ ತ್ಯಾಗ ಮಾಡ ಬೇಕಾಯಿತು . ನಮ್ಮ ಸೂಟ್ಕೇಸ್ ಗಳನ್ನು ಎಮಿರೇಟ್ಸ್ ಕೌಂಟರ್ ನಲ್ಲಿ ಒಪ್ಪಿಸಿ ಬೋರ್ಡಿಂಗ್ ಪಾಸ್ ತೆಗೆದು ಕೊಂಡೆವು . ಆಮೇಲೆ ಕೈಚೀಲ (ಕ್ಯಾಬಿನ್ ಬ್ಯಾಗ್ )ಸಹಿತ ವಲಸೆ ಅಧಿಕಾರಿಗಳ ಬಳಿಗೆ .ಅವರು ನಮ್ಮ ಭಾವಚಿತ್ರ ತೆಗೆದು ,ಪಾಸ್ಪೋರ್ಟ್ ನಲ್ಲಿ ಮೊಹರು ಜಡಿದು ಒಳ ಬಿಡುವರು . ಇಲ್ಲಿ ಬರೀ ಜನ ಗುಂಗುಳಿ ಇತ್ತು . ಆಮೇಲೆ ಸುರಕ್ಷಾ ತಪಾಸಣೆ .ನಾನು ಕಂಡಂತೆ ಬೆಂಗಳೂರಿನಂತಹ ಕಠಿಣ ಮತ್ತು ಸಮಯ ತೆಗೆದು ಕೊಳ್ಳುವ ಸೆಕ್ಯೂರಿಟಿ ಚೆಕ್ ಬೇರೆಲ್ಲೂ ಇರದು .ಇಲ್ಲಿ ಹೆಚ್ಚಿನವರು ಹಿಂದಿ ಭಾಷಿಗರು . ನಮ್ಮ ಶೂ ,ಬೆಲ್ಟ್ ,ಪರ್ಸ್ ,ಮೊಬೈಲ್ ಮತ್ತು ಕೈಚೀಲ ಒಂದು ತಟ್ಟೆಯಲ್ಲಿ ಹಾಕಿ ,ನಾವು ಪರಿಶೋಧಕರ ಲೋಹ ಪರಿಶೋಧನೆ ಗೆ ಒಳಗಾಗಬೇಕು . ಪಿ ಟಿ ಮಾಸ್ತ್ರ ಹಾಗೆ ಅವರು ನಮ್ಮ ನ್ನು ಕೈ ಎತ್ತಿಸಿ ,ಹಿಂದೆ ಮುಂದೆ ತಿರುಗಿಸಿ ನೋಡಿ ನಡೀರಿ ಎಂದು ಗದರುವರು .ನಮ್ಮ ಬ್ಯಾಗ್ ಪರಿಶೋಧಕ ಯಂತ್ರದ ಮೂಲಕ ಬಂದು ನಮ್ಮನ್ನು ಸೇರುವದು . ಈ ಬೆಲ್ಟ್ ಬಿಚ್ಚುವ ಕೆಲಸವೇ ಬೇಡ ಎಂದು ನಾನು ಎಲಾಸ್ಟಿಕ್ ಇರುವ ಪ್ಯಾಂಟ್ ತೊಟ್ಟಿದ್ದು ಬಹಳ ಅನುಕೂಲ ಆಯಿತು . ಯಾಕೆಂದರೆ ಮುಂದೆ ದುಬೈ ಯಲ್ಲಿ ವಿಮಾನ ಬದಲಿಸುವಾಗ ಪುನಃ ಇಂತಹದೇ ಎರಡು ಪರಿಶೀಲನೆ ಇತ್ತು .
ಈ ಅಗ್ನಿ ಪರೀಕ್ಷೆಗಳನ್ನು ದಾಟಿ ನಾವು ವಿಮಾನದ ಒಳಗೆ ಪ್ರವೇಶಿಸುವಾಗ ಸುಂದರಿಯರಾದ ಗಗನ ಸಖಿಯರು ಮುಗುಳು ನಗುವಿನೊಡನೆ ಸ್ವಾಗತಿಸುವಾಗ ನಮ್ಮ ಅಲ್ಲಿಯ ವರೆಗಿನ ಮಾರ್ಗಾಯಾಸ ಪರಿಹಾರ ಆಗುವುದು . ಬೆಂಗಳೂರಿನಿಂದ ದುಬೈಗೆ ಮೂರೂವರೆ ಗಂಟೆ ಪಯಣ , ಆದರೆ ಪಶ್ಚಿಮಕ್ಕೆ ಹೋದಂತೆ ಸಮಯ ಹಿಂದೆ ಹೋಗುವುದರಿಂದ ನಮ್ಮ ಕೈಗಡಿಯಾರ ಆಗಾಗ ಹೊಂದಿಸಿ ಕೊಳ್ಳ ಬೇಕಾಗುವದು . ವಿಮಾನದಲ್ಲಿ ಸ್ವಾಗತ ಪಾನೀಯ ಮತ್ತು ಭಾರೀ ಎನ್ನ ಬಹುದಾದ ಬ್ರೇಕ್ ಫಾಸ್ಟ್ ಆಯಿತು . ಪುನಃ ದುಬೈಯಲ್ಲಿ ಅವರ ಸಿಯಾಟಲ್ ವಿಮಾನ ಏರಿದಾಗ ಮತ್ತೊಂದು ಬ್ರೇಕ್ ಫಾಸ್ಟ್ . ಸಮಯ ವಲಯ ಬದಲಾವಣೆ ಯಿಂದ ಯಾವತ್ತಿನ ಊಟದ ಸಮಯ ಬ್ರೇಕ್ ಫಾಸ್ಟ್ ಮತ್ತು ತಿಂಡಿ ಅಥವಾ ನಿದ್ದೆಯ ಸಮಯ ಊಟ ಬಂದು ಹೊಟ್ಟೆಗೆ ಗಲಿಬಿಲಿ ಆಗುವುದು .
ದುಬಾಯ್ ನಿಲ್ದಾಣ ನಿಮಗೆ ಪರಕೀಯ ಅನಿಸುವುದಿಲ್ಲ .ಅಲ್ಲಿಯ ಬಹುಪಾಲು ನೌಕರರು ಭಾರತ ಉಪಖಂಡ ದವರಾಗಿದ್ದು ಹಿಂದಿ ಭಾಷೆ ಬಲ್ಲವರು ಮತ್ತು ಸಹಾಯಕ್ಕೆ ಸದಾ ಸಿದ್ದರು . ದುಬಾಯಿ ಯಿಂದ ಸಿಯಾಟಲ್ ಗೆ ೧೪ ಗಂಟೆಗಳ ಸುಧೀರ್ಘ ಪಯಣ . ಸೀಟಿನ ಮುಂದೆ ಇರುವ ಪರ ದೆ ಯಲ್ಲಿ ಭಾರತೀಯ ಮತ್ತು ವಿದೇಶಿ ಚಲಚಿತ್ರ ನೋಡ ಬಹುದು . ಆದರೆ ೧೪ ಗಂಟೆ ಕುಳಿತು ಕೊಂಡು ಮಾಡುವ ಪ್ರಯಾಣ ತ್ರಾಸ ದಾಯಕ . ನಮಗೆ ಕಾಲು ಚಾಚ ಬಲ್ಲ ಅನುಕೂಲ ಇರುವ ಸೀಟ್ ಕಾದಿರಿಸಿದ್ದು ತುಂಬಾ ಅನುಕೂಲ ಆಯಿತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ