ಬೆಂಬಲಿಗರು

ಗುರುವಾರ, ಜುಲೈ 22, 2021

ಸಹನಾ ಕಾಂತ ಬೈಲು

                                        ಸಹನಾ ಕಾಂತ ಬೈಲು

           


                        



ಮೊನ್ನೆ ಮಧ್ಯಾಹ್ನ ನಮ್ಮ ಆಸ್ಪತ್ರೆಯ ಸ್ವಾಗತ ಕಾರಿಣಿಯವರ ಬಳಿ ಓರ್ವ ಮಹಿಳೆ ಕೈಯಲ್ಲಿ ಚೀಲ ಹಿಡಿದುಕೊಂಡು ಭಟ್ ಡಾಕ್ರು ಬೇಕಿತ್ತು ಎಂದು ವಿಚಾರಿಸುವಾಗ ಅಲ್ಲೇ ಸುತ್ತಾಡುತ್ತಿದ್ದ ನಾನು ಏನು ಬೇಕಮ್ಮಾ ಒಬ್ಬ ಭಟ್ ನಾನೇ ಎಂದೆ .(ನಮ್ಮ ಆಸ್ಪತ್ರೆಗೆ ಸಂದರ್ಶಕರಾಗಿ ಇನ್ನೂ ಕೆಲವು ಭಟ್ ಡಾಕ್ಟ್ರು ಬರುವರು.)ವಿಚಾರಿಸಲಾಗಿ ಅವರೇ ಲೇಖಕಿ ಸಹನಾ ಕಾಂತ  ಬೈಲು . ಇತ್ತೀಚೆಗೆ ಪ್ರಕಟವಾದ ತಮ್ಮ ಕೃತಿಯ ಎರಡನೇ ಆವೃತ್ತಿ ಯ  ಪ್ರತಿ ನನಗೆ ಕೊಡಲು ಬಂದಿದ್ದರು . ಕೆಲವು ತಿಂಗಳುಗಳ ಹಿಂದೆ ನನಗೆ ಅದು ಬೇಕು ಎಂದು ಫೋನಾಯಿಸಿದ್ದೆ .. ನೀವು ಇಲ್ಲಿಯೇ ಸಿಕ್ಕಿದ್ದು ದೇವರು ಸಿಕ್ಕಿದಂತೆ ಆಯಿತು ಎಂಬ ಉತ್ಪ್ರೇಕ್ಷೆಯ ಸಂತೋಷ ವ್ಯಕ್ತ ಪಡಿಸಿ  ಪುಸ್ತಕ ಕೊಟ್ಟು ಹೋದರು . 
ಸಂಜೆ ಬಿಡುವಾಗಿ ಇದ್ದ ಕಾರಣ  ಪುಸ್ತಕವನ್ನು ಒಂದೇ ಉಸಿರಿಗೆ ಓದಿ ಮುಗಿಸಿ ನನ್ನ ಆನಂದವನ್ನು ವಾಟ್ಸ್ ಅಪ್ ನಲ್ಲಿ  ಅವರಲ್ಲಿ ಹಂಚಿ ಕೊಂಡೆನು ,. 
 
ಸಹನಾ ಅವರ ಲೇಖನಗಳನ್ನು ನಾನು ಪ್ರಜಾವಾಣಿ ಯಲ್ಲಿ ಹಿಂದೆ ಓದಿ ಮೆಚ್ಚಿ ಕೊಂಡಿದ್ದೆ . ವರ್ಷಗಳ ಹಿಂದೆ ಅಡ್ಯನಡ್ಕ ದಲ್ಲಿ ನಡೆದ ಹಲಸು ಮೇಳದಲ್ಲಿ ಅವರನ್ನು ಕಂಡು ಪರಿಚಯ ಮಾಡಿಕೊಂಡು ಮೆಚ್ಚಿಗೆ ಸೂಚಿಸಿದ್ದೆ .ಅವರ  ಮನೆ ಇರುವುದು  ಒಂದು ಕುಗ್ರಾಮದಲ್ಲಿ  . ಸಂಪಾಜೆ ಸಮೀಪ ಕಾಡ ಸೆರಗಲ್ಲಿ . ಬೆಟ್ಟದ ಜೀವ ಕಾದಂಬರಿಯ ಗೋಪಾಲಯ್ಯ ನವರ ಊರಿನ ಹಾಗೆ . ಈ ಕೊಂಪೆಗೆ ಯಾರಾದರೂ ನೆಂಟರು ಸ್ನೇಹಿತರು ಬಂದಾರೇ ಎಂದು ಮನುಷ್ಯ ಜೀವದ ದರ್ಶನೆಕ್ಕೆ ಕಾಯುತ್ತಲಿರುವ ಸಹನಾ ಮೂರ್ತಿ ಶಂಕರಿಯಮ್ಮನ ಮನೆಯಂತೆ . ಆದರೆ ತಾನಿರುವ ತಾಣವನ್ನೇ ಸುಗ್ರಾಮ ಮಾಡಿಕೊಂಡವರು ಸಹೋದರಿ ಸಹನಾ .
ಸುಖ ದುಖ ಮಾತನಾಡಲು ಜನರು ಕಡಿಮೆ ಆದರೇನಂತೆ ಬರೆದು ಅರುಹುವೆನು ಎಂದು ಬರೆಯಲು ಆರಂಬಿಸಿರ ಬೇಕು .  ಇವರ ಬರವಣಿಗೆಯ ವಿಶೇಷ ;ಸರಳ,ಅನುಭವ ಜನ್ಯ ವಿಷಯಗಳು .ನೇರ ಮನಸು ಹೃದಯ ತಾಟುವಂತಹವು . 
ಯಾವುದೇ ಸಮಸ್ಯೆಯ ಬಗ್ಗೆ ಬರಿದೆ ಮಾತನಾಡಿ ಕುಳಿತು ಕೊಳ್ಳುವ ಜಾಯಮಾನ ಇವರದು ಅಲ್ಲ .ಈ ಕೃತಿಯ ಶೀರ್ಷಿಕೆ 'ಆನೆ ಸಾಕಲು ಹೊರಟವಳು ".ಕಾಡಾನೆಗಳ ಹಾವಳಿ ಮಿತಿ ಮೀರಿದಾಗ ಅವು ಅರಣ್ಯ ಪ್ರದೇಶದಲ್ಲಿ ಬೇಕಾದ ಆಹಾರ ಸಿಗದಿದ್ದಾಗ ನಾಡಿಗೆ ಬರುವವು . ಅವುಗಳಿಗೆ ಇಷ್ಟವಾದ ಕಾಡು ಬಾಳೆಯ ಬೀಜಗಳನ್ನು ಕೊಂಡು ಅರಣ್ಯ ಇಲಾಖೆಯವರ ಸಹಾಯದಿಂದ ಸುತ್ತ ಮುತ್ತಲಿನ ಕಾಡಿನಲ್ಲಿ ನೆಡುವ ಕಾರ್ಯಕ್ರಮ ಕೈಗೊಳುತ್ತಾರೆ .
ಸಹನಾ ಅವರ ಜೀವನೋತ್ಸಾಹ ಮೆಚ್ಚುವಂತಹುದು . ಅವರು ಅಮೆರಿಕಾ,ಮುಂಬೈ ,ಕಲ್ಕತ್ತಾ ಮತ್ತು ಧಾರವಾಡಕ್ಕೆ  ಹೋಗಲಿ ತಮ್ಮ ಸಹಜ ಕುತೂಹಲ ಬಿಡುವುದಿಲ್ಲ .
 
ಸಹೃದಯಿಗಳಾದ ನೀವೂ ಈ ಲೇಖಕಿಯ ಕೃತಿಗಳನ್ನು ಕೊಂಡು ಓದಿ ಪ್ರೋತ್ಸಾಹಿಸುವುದರ ಜತೆಗೆ ಜೀವನವನ್ನು ಧನಾತ್ಮಕ ವಾಗಿ ನೋಡುವ ಬಗ್ಗೆ ತಿಳಿಯಿರಿ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ