ಬೆಂಬಲಿಗರು

ಮಂಗಳವಾರ, ಜುಲೈ 20, 2021

ಗರುಡ ಗಮನ ಗರುಡ ದ್ವಜ



ಡಿ ಡಿ ಮಲಯಾಳಂ ನಲ್ಲಿ ಮುಂಜಾನೆ ೫ ರಿಂದ  ಆರು ಗಂಟೆಯ ವರೆಗೆ  ಗುರುವಾಯೂರು ವಿನಲ್ಲಿ ಹಿಂದೆ  ನಡೆದ  ಚೆಂಬೈ ಸಂಗೀತೋತ್ಸವದಿಂದ ಆಯ್ದ ಭಾಗಗಳನ್ನು ಪ್ರಸಾರ ಮಾಡುತ್ತಾರೆ .ಮೊನ್ನೆ ಕಲಾವಿದೆ ಅಣ್ಣಮಾಚಾರ್ಯ ಅವರ ಗರುಡ ಗಮನ ಗರುಡ ಧ್ವಜ ಕೀರ್ತನೆ ಹಾಡುತ್ತಿದ್ದರು . ಹೆಚ್ಚಾಗಿ ಪಲ್ಲವಿ ಹಾಡುವಾಗ ಗರುಡಾ  ಧ್ವಜ ಎಂಬಲ್ಲಿನ ಸಂಗತಿ ತುಂಬಾ ಹಿಡಿಸುತ್ತದೆ . ಹಿಂದೋಳ ರಾಗ ಕಿವಿಗಳಿಗೆ ಇಂಪು . ಇದರ ಪೂರ್ಣ ಸಾಹಿತ್ಯ ಈ ರೀತಿ ಇದೆ .ನಮ್ಮ   ಪುರಾಣಪುರುಷರಿಗೆ  ಹಲವು  ಅನ್ವರ್ಥ ನಾಮಾಗಳು ಇವೆ  . ಇವುಗಳ ಸಂಕಲನವೇ  ಹಲವು ಕೀರ್ತನೆ ಗಳಾಗಿ  ಮಾರ್ಪಟ್ಟಿವೆ.

 

ಗರುಡ ಗಮನ ಗರುಡಧ್ವಜ
ನರಹರಿ ನಮೋನಮೋ ನಮೋ ॥

ಕಮಲಾಪತಿ ಕಮಲನಾಭಾ
ಕಮಲಜ ಜನ್ಮಕಾರಣಿಕ ।
ಕಮಲನಯನ ಕಮಲಾಪ್ತಕುಲ
ನಮೋನಮೋ ಹರಿ ನಮೋ ನಮೋ ॥

ಜಲಧಿ ಬಂಧನ ಜಲಧಿಶಯನ
ಜಲನಿಧಿ ಮಧ್ಯ ಜಂತುಕಲ ।
ಜಲಧಿಜಾಮಾತ ಜಲಧಿಗಂಭೀರ
ಹಲಧರ ನಮೋ ಹರಿ ನಮೋ ॥

ಘನದಿವ್ಯರೂಪ ಘನಮಹಿಮಾಂಕ
ಘನಘನಾ ಘನಕಾಯ ವರ್ಣ ।
ಅನಘ ಶ್ರೀವೇಂಕಟಾಧಿಪತೇಹಂ
ನಮೋ ನಮೋಹರಿ ನಮೋ ನಮೋ ॥

ಇದೇ ಕೀರ್ತನೆ  ಖ್ಯಾತ ಸಂಗೀತ ಕಲಾವಿದ ಶ್ರೀವಲ್ಸನ್ ಮೆನೋನ್ ಅವರ ಧ್ವನಿಯಲ್ಲಿ ಕೇಳಲು ಕೆಳಗಿನ  ಲಿಂಕ್  ಬಳಸಿರಿ . ಶ್ರೀವಲ್ಸ ಮೇನೋನ್ ಕೇರಳ ಕೃಷಿ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರು . ಖ್ಯಾತ ಸಂಗೀತಗಾರ ದಿ ನೆಯ್ಯಾತ್ತಿಂಕರ   ವಾಸುದೇವನ್ ಅವರ ಶಿಷ್ಯರು .


https://youtu.be/dvMAy2TaiFo 

ಈ ರಾಗದಲ್ಲಿ  ಒಂದು ಜನಪ್ರಿಯ ಮಲಯಾಳಂ  ಚಿತ್ರಗೀತೆ ಇದೆ. ನಿರ್ದೇಶಕ  ರವೀಂದ್ರನ್ ಮಾಸ್ಟೆರ್ ಅಳವಡಿಸಿದ್ದು ಜಿ ವೇಣುಗೋಪಾಲ್ ಹಾಡಿದ್ದಾರೆ .

 https://youtu.be/dvMAy2TaiFo


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ