ಬೆಂಬಲಿಗರು

ಭಾನುವಾರ, ಜೂನ್ 30, 2013

ನನ್ನ ಹಳ್ಳಿಗೆ ನಾನೊಂದು ಕನಸಾದೆ

                                                       
I am a dream to my village ಇದು ನಾನು ಈಗ ತಾನೇ ಓದಿ ಬದಿಗಿರಿದ ಪುಸ್ತಕ .ಇದರ ಕರ್ತೃ  ಕೆನ್ನೆತ್ ಆರ್

ಲಲ್ಲ .ಟ್ರಿನಿಡಾಡ್ ನಾಡಿನ ಹೆಸರಾಂತ ವಕೀಲರು.ಮಾಜಿ ಸಂಸದ್ ಸದಸ್ಯರು.ಇವರ ರೋಚಕ ಆತ್ಮಕತೆ.

ಭಾರತೀಯರು ಶತಮಾನಗಳ ಹಿಂದೆ ಫಿಜಿ ,ಮಾರಿಷಿಯಸ್ , ತ್ರಿನಿದಾದ್ ,ಸುರಿನಾಮ್ ಮತ್ತು ಆಫ್ರಿಕಾದ ದೇಶಗಳಿಗೆ ಹಡಗುಗಳಲ್ಲಿ

ಪಯಣಿಸಿ ಅರಿಯದ ಊರಿನಲ್ಲಿ ನೆಲೆ ಕಂಡು ತಮ್ಮ ಹೊಕ್ಕುಳ ಬಳ್ಳಿ ಕಳೆದುಕೊಂಡ ಕತೆಗಳ ಬಗ್ಗೆ ನನಗೆ ಕುತೂಹಲ.

ಬಿಹಾರದ ಧರ್ಬಾಂಗಾ ಪ್ರಾಂತದ ಬಲಭದ್ರ ದಾಸ್ ಮದ್ಯಮ ವರ್ಗದಲ್ಲಿ ಜನಿಸಿದ ಹುಡುಗ.ತಂದೆಯವರು ತೀರಿಕೊಂಡ ಪ್ರಯುಕ್ತ ಜಾಣ

ಹುಗುಗ ಎಂದು ಚಿಕ್ಕಪ್ಪನ ಮನೆಯಿಂದ ಶಾಲೆಗೆ ಹೋಗುತ್ತಿದ್ದ.ಒಂದು ಬಾರಿ ಹೋಂ ವರ್ಕ್ ಪುಸ್ತಕದಲ್ಲಿ ತಪ್ಪು ಬರೆದಿದ್ದ ಹುಡುಗ.ಅದನ್ನು

ವಿಚಾರಿಸಿದ ಚಿಕ್ಕಪ್ಪನಿಗೆ ಶಾಲೆಯಲ್ಲಿ ಅಧ್ಯಾಪಕರೇ ಹಾಗೆ ಹೇಳಿ ಕೊಟ್ಟುದಾಗಿ ಸುಳ್ಳು ಹೇಳುತ್ತಾನೆ.ಆದರೆ ಮರುದಿನ ಚಿಕ್ಕಪ್ಪ ಗುರುಗಳಲ್ಲಿ

ವಿಚಾರಿಸಿದರೆ ಮಾನ ಹೋಗುತ್ತದೆಯೆಂದು ಮನೆ ಬಿಟ್ಟು ಓಡಿ ಹೋಗುತ್ತಾನೆ.ರೈಲ್ವೆ ನಿಲ್ದಾಣದಲ್ಲಿ ಚಿಂತಾಕ್ರಾಂತನಾಗಿ ಕುಳಿತಿದ್ದ 

ಹುಡುಗನನ್ನು ವಿದೇಶಗಳಿಗೆ ಕೂಲಿಗಳನ್ನೂ ಸರಬರಾಜು ಮಾಡುವ ದಲಾಲಿ ಪುಸಲಾಯಿಸಿ ಕಲ್ಕತ್ತಾ ನಗರಕ್ಕೆ ಕರೆದುಕೊಂಡು

ಹೋಗುತ್ತಾನೆ.ಅಲ್ಲಿ ಕೂಡಿಹಾಕಿದ್ದ ಇಂತಹ ಅನೇಕರನ್ನು ಹಡಗಿನ ಮೂಲಕ ತ್ರಿನಿದಾದ್ ನಾಡಿಗೆ ರವಾನಿಸುತ್ತಾರೆ.ಗೊತ್ತು ಗುರಿ ಯಿಲ್ಲದ
                                                       
ನಾಡು .ತಮ್ಮ ಮನೆತನದ ಹೆಸರು ಕೆಡುವುದು ಬೇಡ ಎಂದು ತನ್ನ ಹೆಸರನ್ನುರಾಮ್ ಭಾಜೂ ಎಂದು  ಬದಲಾಯಿಸಿ ಕೊಡುತ್ತಾರೆ,

ತ್ರಿನಿದಾದ್ ನ ಕ್ಯಾಲಿಫೋರ್ನಿಯ ಪ್ರಾಂತ್ಯದ ಡೌ ಗ್ರಾಮದ ಕಬ್ಬಿನ ತೋಟದಲ್ಲಿ ಕೂಲಿ ಕೆಲಸಕ್ಕೆ ಹುಡುಗನನ್ನು ಹಾಕುತ್ತಾರೆ,ಮತ್ತೇನು


ಮಾಡುವುದು ಹಿಂತಿರಿಗುವಂತಿಲ್ಲ.ಅಲ್ಲಿಯೇ ಬೆಳೆದು ದೊಡ್ಡವನಾದ ರಾಮ್ ಭಾಜೂ ರಾಮ್ ಕಲ್ಯ ಎಂಬ ಬಿಹಾರಿ ಹುಡುಗಿಯನ್ನು


ಮದುವೆಯಾಗುತ್ತಾನೆ.ಕಾಂತ.,ಕವಾಲಿ(ಹುಡುಗಿ),ಮತ್ತು ರಾಮ್ ಶಾಂತ ಎಂಬ ಮೂರು ಮಕ್ಕಳಾದುವು.ದುರದ್ರುಸ್ತವಶಾತ್  ಪತ್ನಿ


ಮಕ್ಕಳನ್ನು ಬಿಟ್ಟು ಬೇರೆ ಯುವಕನೊಡನೆ ಓಡಿ ಹೋಗುತ್ತಾಳೆ.ರಾಮ್ ಭಾಜೂ ಪುನ ವಿವಾಹ ವಾಗದೆ ಮಕ್ಕಳನ್ನು ಸಲಹುತ್ತಾನೆ,ಓಡಿ

ಹೋದವಳನ್ನು ನಿಂದಿಸಲಿಲ್ಲ.(ಮಾಸ್ತಿಯವಯ ಕಟ್ಟಿಗೆಯನ ಕತೆ ನೆನಪಿಸುತ್ತದೆ.)
ಈ ಮಕ್ಕಳ ಪೈಕಿ ರಾಮ್ ಶಾಂತ ನೆ ಚಿಕ್ಕವನು.ತಾಯಿಯ ಆರೈಕೆ ಕಂಡವನಲ್ಲ .ಹುಡುಗನಾಗಿ ಕಬ್ಬಿನ ತೋಟ ,ಸಕ್ಕರೆ ಕಾರ್ಖಾನೆ ಗಳಲ್ಲಿ


ಕೆಲಸ.ತಂದೆಯವರಿಂದ ಉತ್ತಮ ಸಂಸ್ಕಾರ.ಕಳ ಬೇಡ ,ಹುಸಿಯ ನುಡಿಯಲು ಬೇಡ ದೇವರನ್ನು ನಂಬು ,ನಂಬಿ ಕೆಟ್ಟವರಿಲ್ಲ ,ಜೀವ

ಹೋದರೂ ಸರಿ ಚಾರಿತ್ರ್ಯ ಕೆಡಿಸಿಕೊಳ್ಳದೆ ಇರು ಇವು ತಂದೆ ಯವರು ತೋರಿದ ದಾರಿ .


ರಾಮ್ ಭಾಜೂ ಅಸೌಖ್ಯ ದಿಂದ ತೀರಿಕೊಂಡ ಮೇಲೆ ಕಿರಿಯ ರಾಮ ಶಾಂತ ದಿಕ್ಕಿಲ್ಲದವನಾಗಿ ಬಿಡುತ್ತಾನೆ.ಆಗ ಬರುತ್ತಾಳೆ ಗಾಡ್

ಮದರ್ .ಈಕೆ ಮನೆ ಕೆಲಸಕ್ಕೆ ನಗರಕ್ಕೆ ಹುಡುಗನ್ನು ಒಯ್ಯುತ್ತಾಳೆ.ಅಲ್ಲಿ ಮಗನಂತೆ ನೋಡಿ ಕೊಂಡು ಶಾಲೆಗೆ ಸೇರಿಸುತ್ತಾಳೆ.



ಶಾಲೆಯಲ್ಲಿ ಹೆಸರು ಕೆನ್ನೆತ್ ಲಲ್ಲ ಎಂದು ದಾಖಲಿಸುತ್ತಾರೆ.ಕೆನ್ನೆತ್ ಆದರೂ ಹಿಂದೂ ಧರ್ಮ ಬಿಡುವುದಿಲ್ಲ .ಮುಂದೆ ಇಂಗ್ಲಂಡ್ ಗೆ ತೆರಳಿ


ಬ್ಯಾರಿಸ್ಟರ್ ಪದವಿ ಗಳಿಸಿ ಕ್ರಮೇಣ ಹೆಸರಾಂತ ವಕೀಲ ರಾಗಿ , ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ.ದೇಶದ ಅಧ್ಯಕ್ಷರಾಗುವ

ಯೋಗ ಕೂದಲ ಎಳೆಯಲ್ಲಿ ತಪ್ಪುತ್ತದೆ.
                                                   
ಮುಂದೆ ತಮ್ಮ ಪೂರ್ವಜರ ನಾಡಿಗೆ ಬೇಟಿ ನೀಡುತ್ತಾರೆ.ಮನೆಯವರನ್ನು ಕಾಣುವ ಭಾಗ್ಯ ಸಿಗುವುದಿಲ್ಲ
.
ಇದು ಕೆನ್ನೆತ್ ಲಲ್ಲಾ ರ ಕತೆ,ಇದು ಶಿವನರೈನ್ ಚಂದ್ರ ಪಾಲ್ .ರೋಹನ್ ಕೆನ್ನಾಯ್ ಅವರ ಕತೆ ಆಗ ಬಹುದು.

ಬಾಲಂಗೋಚಿ.:ಈ ಪುಸ್ತಕವನ್ನು ಪ್ರಕಟಿಸಿದವರು ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಅವರು.ಈಗ ನೀವು ಏನ್ ಬಿ ಟಿ ಯ

ಪುಸ್ತಕಗಳನ್ನು ಆನ್ಲೈನ್ ತರಿಸಿಕೊಳ್ಳ ಬಹುದು.ಒಳ್ಳೆಯ ಮಕ್ಕಳ ಪುಸ್ತಕಗಳು ಇವೆ.ಇವರ ಸೇವೆ ಉತ್ತಮವಾಗಿದೆ.

ಈ  ಪುಸ್ತಕದಲ್ಲಿ ಗೋಯಿಂಗ್ ಔಟ್ ಡ್ರೆಸ್ ಎಂಬ  ಶಬ್ದ ಬರುತ್ತದೆ.ನಮ್ಮಲ್ಲೂ  ಹೊರಗೆ ಹೋಗುವ ಉಡುಪು ಎಂದು ಇರುತ್ತಿತ್ತು.ನೆಂಟರ

ಮನೆಗೆ ಹೋಗುವಾಗ ,ಮದುವೆ ಸಮಾರಂಭಗಳಿಗೆ ಮಾತ್ರ ಮಿಸಲಿದ್ದ ಡ್ರೆಸ್.ಇದನ್ನು ಜಿರಳೆ ಗುಳಿಗೆಗಳ ರಕ್ಷಣೆಯಲ್ಲಿ ಟ್ರಂಕ್ ನಲ್ಲಿ

ಇಸ್ತ್ರಿ ಯಿಲ್ಲದೆ ಮಡಿಸಿ ಇಡುತ್ತಿದ್ದರು.ಅದರ ವಾಸನೆ (ಪರಿಮಳ?) ಮತ್ತು ಜನ ತುಂಬಿದ ಬಸ್ಸಿನ ಯಾತ್ರೆ ಸೇರಿ ಉಡುಪಿನ ಮೇಲೆ

ವಾಂತಿಯ  ಸಿಂಚನ ಆಗುತ್ತಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ