ದಮ್ಮು ಕಟ್ಟುವುದೆಲ್ಲಾ ಬ್ರೊಂಕಿಯಲ್ ಅಸ್ತಮ ಅಲ್ಲ. ಹೃದಯ ಕಾಯಿಲೆಯಲ್ಲೂ ದಮ್ಮು ಬರುತ್ತದೆ. ಹೃದಯದ ಕೊರೋನರಿ
ರಕ್ತನಾಳ ಗಳು ಕೊಬ್ಬು ತುಂಬಿ ಒಳಗೆ ಸಪುರವಾದಾಗ ಹೃದಯದ ಮಾಂಸ ಖಂಡ ಗಳಿಗೆ ರಕ್ತ ಸಂಚಾರ ಕಡಿಮೆಯಾಗುತ್ತದೆ.
ವಿಶ್ರಾಂತ ಸ್ತಿತಿಯಲ್ಲಿ ಎಲ್ಲಾ ಸರಿಯಿದ್ದರೂ ಕಷ್ಟದ ಕೆಲಸ ಮಾಡುವಾಗ ,ಏರಿ ಏರುವಾಗ ,ಓಡುವಾಗ ಬೇಕಾದ ಹೆಚ್ಚಿನ ರಕ್ತ --
ಮತ್ತು ಅದರ ಮೂಲಕ ಆಮ್ಲಜನಕ ಸಿಕ್ಕದಿದ್ದರೆ ಎದೆ ನೋವು ಅಥವಾ ದಮ್ಮು ಕಟ್ಟಿದ ಅನುಭವ ಆಗುವುದು.
ಇನ್ನೊಂದು ಕಾರಣ ಶ್ವಾಶಕೊಶದಲ್ಲಿ ನೀರು ತುಂಬುವುದು.ನಿಮಗೆ ತಿಳಿದಂತೆ ದೇಹದ ಸಕಲ ಮೂಲೆಗಳಿಂದ ಅಶುದ್ದ ರಕ್ತ
ಅಭಿಧಮನಿಗಳ ಮೂಲಕ ಹೃದಯದ ಬಲ ಬಾಗ ಕ್ಕೆ ಬಂದು ಅಲ್ಲಿಂದ ಶುದ್ದೀಕರಣ ಕ್ಕಾಗಿ ಶ್ವಾಶಕೊಶಗಳಿಗೆ
ರವಾನಿಸಲ್ಪಡುತ್ತದೆ.ಅಲ್ಲಿಂದ ಶುದ್ದ ರಕ್ತ ಎಡ ಭಾಗದ ಹೃದಯಕ್ಕೆ ಬಂದು ದೇಹದ ಎಲ್ಲಾ ಮೂಲೆಗಳಿಗೆ ಪಂಪ್
ಮಾಡಲ್ಪಡುತ್ತದೆ. ಈಗ ಹೃದಯಾಘಾತವಾಗಿ ಎಡ ಹೃದಯದ ಮಾಂಸ ಖಂಡಗಳು ಕಾರ್ಯ ವಿಮುಖವಾದರೆ
ಅವು ರಕ್ತವನ್ನು ಹೊರಕಳಿಸಲು ಸಾಧ್ಯವಾಗುವುದಿಲ್ಲ .ಇದರಿಂದ ಶ್ವಾಸಕೋಶದಿಂದ ರಕ್ತವನ್ನು ಸ್ವೀಕರಿಸಲು ಸ್ಥಳಾವಕಾಶ
ಕಡಿಮೆಯಾಗಿ ಅದು ಶ್ವಾಶ ಕೋಶದಲ್ಲಿ ಉಳಿದು ತೀವ್ರ ತರದ ದಮ್ಮು ಉಂಟು ಮಾಡುತ್ತದೆ.ಇದನ್ನು ವೈದ್ಯಕೀಯ
ಭಾಷೆಯಲ್ಲಿ ಪಲ್ಮನರಿ ಎಡಿಮ ಎಂದು ಕರೆಯುತ್ತಾರೆ.ಈ ಸಂಧರ್ಭದಲ್ಲಿ ಆಮ್ಲಜನಕ ,ಶರೀರದಿಂದ ನೀರು ಮೂತ್ರ ರೂಪದಲ್ಲಿ
ಹೋಗಲು ಮತ್ತು ಅಭಿದಮನಿಗಳನ್ನು ಹಿಗ್ಗಿಸಿ ಅವು ಹೃದಯಕ್ಕೆ ತರುವ ರಕ್ತದ ಪ್ರಮಾಣ ಕಮ್ಮಿ ಮಾಡುವ ಔಷಧ ಕೊಟ್ಟು
ಶಮನ ಸಿಗುವಂತೆ ಮಾಡುತ್ತಾರೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ