ಬೆಂಬಲಿಗರು

ಶುಕ್ರವಾರ, ಜೂನ್ 14, 2013

ಉಗಾಂಡಾ ದ ಬಗ್ಗೆ ಎರಡು ಪುಸ್ತಕಗಳು

ಶತಮಾನಗಳ ಹಿಂದೆ ನಮ್ಮ ದೇಶದಿಂದ ಆಫ್ರಿಕ ,ವೆಸ್ಟ್ ಇಂಡಿಸ್ ,ಫಿಜಿ ಮುಂತಾದ ನಾಡುಗಳಿಗೆ ತೆರಳಿ ತಮ್ಮ ಬದುಕನ್ನು

ಅಲ್ಲಿಯೇ ರೂಪಿಸಿ ಕೊಂಡ ಭಾರತೀಯ ರ ಬಗ್ಗೆ ನನಗೆ ವಿಸ್ಮಯ ಭರಿತ ಕುತೂಹಲ.ಈಗಿನ ಸಂಪರ್ಕ ಸಾಧನ ಗಳು ಇಲ್ಲದಿದ್ದ

ದಿನಗಳಲ್ಲ್ಲಿ ಖಂಡಾಂತರ ಯಾತ್ರೆ ಮಾಡಿ ಅರಿಯದ ನಾಡಿನಲ್ಲಿ ಬದುಕನ್ನು ಅರಸಿ ಮುಂದೆ ಹಲವು ಮಂದಿ ಉದ್ದ್ದಿಮೆಗಳ

ಅರಸರಾದರು.ಅವರಲ್ಲಿ ಮಧ್ವಾನಿ ಕುಟುಂಬ ಆಫ್ರಿಕಾದ ರಾಷ್ಟ್ರ ಗಳ ಉದ್ದಗಲಕ್ಕೆ ತಮ್ಮಮ ಜಾಲವನ್ನು ಹಬ್ಬಿಸಿ ಹೆಸರು

ಪಡೆದಂತಹುದು.ಉಗಾಂಡ ದೇಶವನ್ನು ಕೇಂದ್ರವಾಗಿಟ್ಟುಕೊಂಡು ಅವರ ವ್ಯವಹಾರ ಆರಂಭ.ಮಜ್ಲಿಭಾಯ್ ಮಧ್ವಾನಿ

ಯವರು ಉಗಾಂಡಾದಲ್ಲಿ ಆರಂಬಿಸಿದ ಕಕಿರಾ ಸಕ್ಕರೆ ಕಾರ್ಖಾನೆ ,ನೈಲ್ ಬ್ರುವೆರಿಎಸ್ ,ಜವುಳಿ ಉದ್ದಿಮೆ ,ಮತ್ತು

ಗಾಜಿನ ಕಾರ್ಖಾನೆಗಳು ಉಗಾಂಡಾ ,ಕೀನ್ಯ ,ಗಳಿಂದ ತೊಡಗಿ ಲೆಬನಾನ್ ,ಸೌದಿ ಅರೇಬಿಯಾ ಕ್ಕೂ ಲಗ್ಗೆ ಇಟ್ಟಿತು.

ಉಗಾಂಡಾ ದ ಕಕಿರಾ ಸಕ್ಕರೆ ಉದ್ಯಮ ೧೦೦೦೦ ಹೆಕ್ಟೇರ್ ಗಿಂತಲೂ ಅಧಿಕ ಪ್ರದೇಶವನ್ನು ಒಳಗೊಂಡಿದೆ.ಇಲ್ಲಿ

ಮಧ್ವಾಣಿ ನಗರವೆಂಬ ಊರೆ  ನಿರ್ಮಾಣ ವಾಯಿತು .ಅಸ್ಟೆಲ್ಲ  ಆಗುವಾಗ ಧೂಮಕೇತುವಿನಂತೆ ಬಂದವನು  ಇದಿ

ಅಮಿನ್.ಸೇನಾ ಬಂಡಾಯದ ಮೂಲಕ ಮಿಲ್ಟನ್ ಒಬೋಟೆಯನ್ನು ಪದಚ್ಯುತ ಗೊಳಿಸಿ ತಾನೆ ಅಧ್ಯಕ್ಷನಾದನು .

ತನಗೆ ತಾನೇ ಫೀಲ್ಡ್ ಮಾರ್ಷಲ್ ,ಡಾಕ್ಟರೇಟ್, ಇತ್ಯಾದಿ ಪದವಿಗಳನ್ನು ಸೇರಿಸಿಕೊಂಡನು. 'ಹಿಸ್ ಎಕ್ಷೆಲ್ಲೆನ್ಸಿ

ಅಜೀವ ಅಧ್ಯಕ್ಷ ,ಆಲ್ ಹಜ್ ,ಫೀಲ್ಡ್ ಮಾರ್ಷಲ್,ಡಾಕ್ಟರ್ ಇದಿ ಅಮಿನ್ ವಿ.ಸಿ.  ,ಡಿ ಎಸ.ಓ., ಎಂ ಸಿ, ಜಗತ್ತಿನ  ನೆಲದ ಮೇಲಿನ


ಎಲ್ಲಾ ಪ್ರಾಣಿಗಳ ಮತ್ತು ಸಮುದ್ರದೊಳಗಿನ ಮೀನುಗಳ ಒಡೆಯ , ಆಫ್ರಿಕಾದಲಿ ಮುಖ್ಯವಾಗಿ ಉಗಾಂಡದಲ್ಲಿ  ಬ್ರಿಟಿಷರನ್ನು

ಮರ್ದಿಸಿದ ವೀರ ,ಹಾಗೂ ಈ ನೆಲೆಯಲ್ಲಿ ಸ್ಕೊಟ್ಲಂಡ್ನ ಅನಭ್ಶಿಕ್ತ  ದೊರೆ 'ಇವು  ಆತನು ತನ್ನನ್ನು ಕರೆಸಿಕೊಲ್ಲುತ್ತ್ತದ್ದ  ಪರಿ.

ವಿದೇಶಿ ಮೂಲ ದ  ಎಲ್ಲರು ಉಗಾಂಡಾ ಬಿಟ್ಟು  ತೆರಳುವಂತೆ ಅದೇಶಿದ. ಏಷ್ಯಾ ಮೂಲದವರು ಹಸುವನ್ನು ಹಿಂಡುತ್ತಾರೆ

ಆದರೆ  ಅದಕ್ಕೆ ಆಹಾರ ಹಾಕುವುದಿಲ್ಲ ಎಂಬುವುದು  ಅವನ ಆರೋಪ .ಪ್ರತಿಷ್ಟಿತ  ಮಧ್ವಾಣಿ ಗುಂಪಿನ  ಮನು ಭಾಯ್

ಅವರನ್ನು ಜೈಲಿನಲ್ಲಿ ಇರಿಸಿ ಉಳಿದ  ಎಷ್ಯನ್ನರನ್ನ್ನು ಹೆದರಿಸಿದ ಭೂಪ.ಇವನ  ಕಾಲದಲ್ಲಿಯೇ  ಇಸ್ರೇಲಿಗಳು ಅಪಹೃತ

ವಿಮಾನವನ್ನು ಮೈ ನವಿರೇಳಿಸುವ  ಕಮಾಂಡೋ  ಕಾರ್ಯಚರಣೆಯಲ್ಲಿ   ಎಂಟೆಬ್ಬೆ  ನಿಲ್ದಾಣದಿಂದ ಬಿಡಿಸಿ  ಕೊಂಡುಡು.

ಈಯೆಲ್ಲ ವಿವರಗಳನ್ನು ಒಳಗೊಂಡ ಎರಡು ಉತ್ತಮ ಹೊತ್ತಿಗೆಗಳು. ಟೈಡ್ ಆಫ್ ಫಾರ್ಚ್ಯೂನ್  ಮನುಭಾಯ್ ಮಧ್ವಾಣಿ

ಯವರ ರೋಚಕ ಆತ್ಮ ಕತೆ,  ಉಗಾಂಡದಲ್ಲಿ ನಮ್ಮ ರಾಯಭಾರಿ ಆಗಿದ್ದ ,ಬರಹಗಾರ ,ಸ್ವಾನಂತ್ರ್ಯ ಹೋರಾಟಗಾರ

ಮದನ್ಜಿತ್ ಸಿಂಗ್ ರ  ಕಲ್ಚರ್ ಆಫ್ ಸೇಪಲ್ಚರ್ ಇದಿ ಅಮಿನ್ ನ ಮುಖಗಳನ್ನು ತೋರಿಸುವ  ನೆನಪುಗಳು.

ಹಿಂದಿನ ದಿನಗಳ ಹಿಂದಿ ಚಿತ್ರ ತಾರೆ ಮಮ್ತಾಜ್  ಮಧ್ವಾಣಿ ಕುಟುಂಬದ  ಮಯೂರ್ ಮಧ್ವಾನಿಯವರನ್ನು  ವಿವಾಹವಾದರು .

ಇದಿ ಅಮಿನ್ ಒಂದು ಸಲ ಎಲ್ಲಾ ರಾಜ ತಾಂತ್ರಿಕರನ್ನು  ಆಗಮಿಸುತ್ತಿರುವ ವಿಶೇಷ  ಅತಿಥಿಯನ್ನು ಸ್ವೀಕರಿಸಲು ವಿಮಾನ

ನಿಲ್ದಾಣಕ್ಕೆ ಬರ ಹೇಳುತ್ತಾರೆ. ಅಲ್ಲಿ ನೋಡಿದರೆ ವಿಮಾನದಿಂದ  ಬ್ರಿಟನ್ ದೇಶದಿಂದ ಆಮದು ಮಾಡಿದ ಹಸುಗಳು

ಬೋಇಂಗ್ ನಿಂದ ಇಳಿಯುತ್ತಿರುತ್ತವೆ.ಇನ್ನು ಉಗಾಂಡದ ಜನತೆ  ಪುಡಿ ಹಾಲಿನ ಬದಲಿಗೆ ಶುದ್ದ್ದ ಹಾಲು ಕುಡಿಯುವರು ಎಂದು

ಘೋಷಣೆ ಮಾಡುತ್ತಾನೆ .ಆದರೆ  ಕೆಲ ದಿನಗಲ್ಲೇ ಅವು ಅಮಿನ್ ಮತ್ತು ಸೈನ್ಯಾಧಿಕಾರಿಗಳ ಭೋಜನಕ್ಕೆ  ಬಲಿಯಾಗುತ್ತವೆ.

ತನ್ನ ವಿರೋಧಿಗಳೆ೦ಬ ಸಂಶಯದಲ್ಲಿ  ಲಕ್ಷಾಂತರ  ನಾಗರಿಕರನ್ನು ಕೊಲ್ಲಿಸಿದ ಕಟುಕ ಅಮಿನ್ , ತಮ್ಮ ಆಡಳಿತವನು

ವಿಮರ್ಶಿಸಿದ ಉಗಾಂಡದ ಸುಪ್ರಿಂಕೋರ್ಟ್ ಮುಖ್ಯ ನ್ಯಯಧಿಶರನ್ನೇ ಬಂದಿಸಿ  ಕೊಲೆ ಗೈದ  ಪಾಪಿ.
                                                             ಮನು ಭಾಯ್ ಮಧ್ವಾನಿ


                                                 
ಮದನಜೀತ್ ಸಿಂಗ್

2 ಕಾಮೆಂಟ್‌ಗಳು:

  1. ಈ ಪುಸ್ತಕಗಳ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ಈದಿ ಅಮೀನ್ ಕಾಲದ ಘಟನೆಗಳು ಘೋರ ಮತ್ತು ರೋಚಕ. ಈತನ ಕತೆಯುಳ್ಳ ಕೆಲವು ಇಂಗ್ಲೀಷ್ ಸಿನೆಮಾಗಳನ್ನು ನೋಡಿದ್ದೇನೆ. ಇಸ್ರೇಲ್ ಹೈಜಾಕ್ ಆದ ವಿಮಾನದಲ್ಲಿ ತನ್ನ ಪ್ರಜೆಗಳನ್ನು ಈತನ ದೇಶದೊಳಗೇ ನುಗ್ಗಿ ಬಿಡಿಸಿಕೊಂಡು ಹೋದ ಘಟನೆಯಂತೂ ಬಹಳ ರೋಚಕ.

    ಪ್ರತ್ಯುತ್ತರಅಳಿಸಿ
  2. ಇದಿ ಅಮಿನ್ ಕುರಿತು Forest Whitaker ಅಭಿನಯದ The Last King of Scotland ಒಂದು ಉತ್ತಮ ಸಿನಿಮಾ http://www.imdb.com/title/tt0455590/

    ಪ್ರತ್ಯುತ್ತರಅಳಿಸಿ