ಬೆಂಬಲಿಗರು

ಮಂಗಳವಾರ, ಜೂನ್ 18, 2013

ಕಿಡ್ನಿ(ಮೂತ್ರ ಪಿಂಡ) ವೈಫಲ್ಯ (Kidney failure) ೧

ಹಾರ್ಟ್ ಫೈಲ್ಯುರ್ ಬಗ್ಗೆ  ಎಲ್ಲರೂ ಕೇಳಿರುತ್ತೀರಿ.ಅದರಂತೆ ಕಿಡ್ನಿ(ಮೂತ್ರ ಪಿಂಡ)  ಫೇಲ್ಯೂರೂ ಇದೆ.ಬಹಳ ಮಂದಿಗೆ


ಮೂತ್ರ ಪಿಂಡಗಳ ಬಗ್ಗೆ ಮಾಹಿತಿ ಇಲ್ಲ. ಹಲವರು ವೃಷಣಗಳನ್ನೇ ಕಿಡ್ನಿ ಎಂದು ಕರೆಯುತ್ತಾರೆ.ದೇವರು ನಮಗೆ ಎರಡು


ಕಿಡ್ನಿಗಳನ್ನು ಕೊಟ್ಟಿದ್ದಾನೆ ,ಆದರೆ ಒಂದೇ ಹೃದಯ ,ಲಿವರ್ .ಹೃದಯದಿಂದ ಪಂಪ್ ಮಾಡಲ್ಪಟ್ಟ ರಕ್ತದ  ನಾಲ್ಕನೇ ಒಂದು ಪಾಲು


ಮೂತ್ರ ಪಿಂಡಗಳಿಗೆ ಹೋಗುವುದು.ಅಂದರೆ  ವನ ಸುಮ ದೋಲ್ ಕಾರ್ಯ ನಿರ್ವಹಿಸುವ ಈ ಅಂಗದ ಮಹತ್ವ



ಅರಿವಾಗುವುದು.

                                         
 
ಕಿಡ್ನಿಗಳು  ಉದರದ  ಹಿಂಬಾಗದಲ್ಲಿ  ,ಎಂದರೆ ಬಲದ ಬದಿ ಲಿವರ್ ನ  ಹಾಗು ಎಡದ ದಲ್ಲಿ  ಸ್ಪ್ಲೀನ್ ನ
 
 
ಹಿಂದೆ  ಬೆನ್ನಿಗೆ ಸಮೀಪ  ಇರುತ್ತವೆ .(ಎದೆಗೆ ತಾಗಿ ಕೊಂಡು).ವೈದ್ಯ ಶಾಸ್ತ್ರದಲ್ಲಿ  ಕಿಡ್ನಿ ಗಳು  ಬೀನ್ಸ್ ನ  ಆಕಾರದಲ್ಲ್ಲಿ
 
 
ಇರುತ್ತವೆ ಎಂದು ಹೇಳಿದರೆ ಸಸ್ಯ ಶಾಸ್ತ್ರದಲ್ಲಿ  ಬೀನ್ಸ್   ಕಿಡ್ನಿ ಶೇಪ್ ನಲ್ಲಿ ಇರುತ್ತವೆ ಎಂದು ಕಲಿಸುತ್ತಾರೆ.
 
 
 
 ಎಲ್ಲರೂ ತಿಳಿದಿರುವಂತೆ  ಕಿಡ್ನಿ ಗಳು  ನಮ್ಮ ರಕ್ತದಿಂದ  ಅಶುದ್ದ ಅಂಶಗಳನ್ನು  ಮೂತ್ರದ ಮೂಲಕ  ಹೊರ
 
 
ಹಾಕುತ್ತವೆ .ಕಿಡ್ನಿ ಗಳು ಮುಷ್ಕರ  ಹೂಡಿದರೆ  ಕಲ್ಮಶಗಳು  ಮತ್ತು  ನೀರು ಶರೀರದಲ್ಲ್ಲಿ ಶೇಖರವಾಗಿ  ಗಾರ್ಬೇಜ್  ತುಂಬಿದ
 
 
 
ಬೆ೦ಗಳೂರಿನಂತೆ  ನಮ್ಮ  ದೇಹ ನೆರಳುತ್ತದೆ.
 
 
 
ಬಹಳ ಮಂದಿಗೆ  ತಿಳಿದಿರದಂತಹ  ಕೆಲವು ಕಾರ್ಯಗಳನ್ನೂ ಮೂತ್ರ  ಪಿಂಡಗಳು  ನಿರ್ವಹಿಸುತ್ತವೆ .ಆಮ್ಲಜನಕ  ವಾಹಕ
 
 
ಗಳಾದ  ಕೆಂಪು ರಕ್ತ ಕಣಗಳು  ಮಜ್ಜೆಯಲ್ಲಿ  ಉತ್ಪಾದನೆ  ಆಗಲು  ಪ್ರೇರಕ ವಸ್ತು  ಏರಿತ್ರೋಪೋಯ್ತಿಣ್ ಕಿದ್ನಿಗಳಲ್ಲೇ
 
 
ಉಂಟಾಗುವುದು. ಈ ವಸ್ತು ಇಲ್ಲದಿದ್ದರೆ  ರಕ್ತ ಹೀನತೆ ಉಂಟಾಗುವುದು. ಇನ್ನು ನಮ್ಮ ಎಲುಬುಗಳಿಗೆ ಬೇಕಾದ
 
 
ಕ್ಯಾಲ್ಸಿಯಂ  ರಕ್ತ ಸೇರಲು  ಡಿ  ವಿಟಮಿನ್ ಬೇಕು ತಾನೆ. ಸೂರ್ಯನ ಬೆಳಕು ಮತ್ತು ಆಹಾರದಿಂದ ಲಭ್ಯವಾದ  ಕಚ್ಚಾ
 
 
ಡಿ ಅನ್ನಾಂಗವನ್ನು ಮೂತ್ರ ಪಿಂಡಗಳು  ಪರಿಷ್ಕರಿಸಿ ಉಪಯುಕ್ತ ವಸ್ತುವಾಗಿ ಮಾರ್ಪಡಿಸುತ್ತದೆ. ಆದುದರಿಂದ
 
 
ಕಿಡ್ನಿಗಳ ಅಸಹಕಾರದಲ್ಲ್ಲಿ  ಎಲುಬುಗಳೂ  ನಶಿಸುವುವು.
 
 
ಮೂತ್ರ ಪಿಂಡಗಳ  ವೈಫಲ್ಯಕ್ಕೆ  ಕಾರಣಗಳು  ಹಲವು. ಹೆಸರಿಸಬಹುದುದಾದ ಕೆಲವು
 
 
೧  ಸಕ್ಕರೆ ಕಾಯಿಲೆ
 
೨.ಅಧಿಕ ರಕ್ತದೊತ್ತಡ.
 
೩.ಮೂತ್ರಪಿಂಡದ ಮೂಲ ಕಾಯಿಲೆಗಳು
 
೪.ಔಷಧಿಗಳು ಉದಾ  ನೋವು ನಿವಾರಕಗಳು.
 
೫.ಇಲಿ ಜ್ವರ ,ಮಲೇರಿಯಾ ದಂತಹ ಸೋಂಕುಗಳು.
 
೬.ತೀವ್ರ ರಕ್ತ ಸ್ರಾವ ,ವಾಂತಿ ಭೇದಿ .
 
 
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ