ನಮ್ಮ ದೇಶ ಕಂಡ ಮುತ್ಸದ್ದಿ ರಾಜಕಾರಿಣಿ ಮಾತು ಅಪ್ರತಿಮ ಆಡಳಿತಗಾರ ರಾಜಾಜಿ.
ಭಾರತ ರತ್ನ ಸಿ ಸುಬ್ರಹ್ಮಣ್ಯಂ ಆಗಿನ ಮದ್ರಾಸ್ ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದ ರಾಜಾಜಿ ಸಂಪುಟದಲ್ಲಿ
ಸಚಿವರಾಗಿದ್ದವರು. ತಮ್ಮ ಜೀವನ ಚರಿತ್ರೆ ಹ್ಯಾಂಡ್ ಆಫ್ ಡೆಸ್ಟಿನಿ ಯಲ್ಲಿ ತಾವು ಆಡಳಿತ ಒಳ ಹೊರಗುಗಳನ್ನು
ರಾಜಾಜಿಜಯವರಿಂದಲೇ ಕಲಿತೆ ಎಂದು ಬರೆದಿದ್ದಾರೆ. ಒಂದು ಬಾರಿ ಯಾವುದೊ ವಿಷಯ ಚರ್ಚಿಸಲು ಫೈಲ್
ಸಹಿತ ಮುಖ್ಯಮಂತ್ರಿಗಳ ಕೊಟಡಿಗೆ ಸುಬ್ರಹ್ಮಣ್ಯ೦ ತೆರಳುತ್ತಾರೆ.ಅಲ್ಲಿ ಒಂದು ಫೈಲ್ ಬಗ್ಗೆ ಚರ್ಚೆ ಮಾಡಿ
ಅದನ್ನು ಬದಿಗಿಟ್ಟು ಇನ್ನೊಂದು ವಿಷಯಕ್ಕೆ ತೊಡಗುವಾಗ ರಾಜಾಜಿಯವರು ಸುಬ್ರಮಣ್ಯಮ್ ಅವರಿಗೆ
ಮೊದಲ ಫೈಲಿನ ಪಟ್ಟಿ (ದಾರ)ಕಟ್ಟಿ ನಂತರ ಮಾತನಾಡುವಂತೆ ಹೇಳುತ್ತಾರೆ.ಯಾಕೆಂದರೆ ಪ್ರಮುಖ ನಿರ್ಧಾರ
ಗಳಿರುವ ಫೈಲ್ ನ ಹಾಳೆಗಳು ಅದಲು ಬದಲು ಆಗದಂತೆ ನೋಡಿಕೊಳ್ಳುವುದು ಮುಖ್ಯ ಎನ್ನುತ್ತಾರೆ.
ಇನ್ನೊಂದು ಪ್ರಕರಣ ನಮ್ಮವರೇ ಆದ ನಿವೃತ್ತ ಪೋಲಿಸ್ ಅಧಿಕಾರಿ ರತ್ನಾಕರ ರೈ ಅವರ ಜೀವನ್ ಚರಿತ್ರೆ
ಖಾದಿ ಮತ್ತು ಖಾಕಿ ಯಲ್ಲಿ ಬರುತ್ತದೆ.ಅವರು ಮದ್ರಾಸ್ ಸರ್ವಿಸ್ ನಲಿ ಇದ್ದ ದಿನಗಳು.ಆಂಧ್ರ ಪ್ರಾಂತ್ಯ ನಿರ್ಮಾಣ ವಾಗುವಾಗ
ಮದ್ರಾಸ್ ಗೆ ಸಮೀಪವಿರುವ ತಿರುತ್ತಣಿ ನಗರ ತಮಗೆ ಸೇರಬೇಕೆಂದು ತಮಿಳರೂ ,ತೆಲುಗರೂ ಚಳುವಳಿ ಆರಂಬಿಸಿದರು .
ಒಂದು ದಿನ ಜನಪ್ರಿಯ ತಮಿಳ್ ನೇತಾರರು ಭಾರೀ ಪ್ರತಿಭಟನಾ ರಾಲಿ ಸಂಘಟಿಸುವರಿದ್ದು ಕಾನೂನು ಸುವ್ಯವಸ್ತೆ
ಗಾಗಿ ಲಾಟಿ ಪ್ರಯೋಗ ಬೇಕಾಗಿ ಬರಬಹುದಿತ್ತಿತ್ತು. ಮುನ್ನಾ ದಿನ ರಾಜಾಜಿಯವರು ರತ್ನಾಕರ ರೈ ಯವರನ್ನು
ಕರೆಸಿ ತಿರುತ್ತ್ತಣಿಯಲ್ಲಿ ಹುಣಿಸೆ ಮರಗಳ ತೋಪು ಇದೆ ,ಅವುಗಳ ಬೆತ್ತ ಮಾಡಿ ಇಟ್ಟುಕೊಳ್ಳಿ ,ಅವಶ್ಯ ಬಂದರೆ ಅದರಲ್ಲೇ
ಚಾರ್ಜ್ ಮಾಡಿ ,ಅದರಿಂದ ನೋವಾಗುತ್ತದೆ ,ಎಲುಬು ಮುರಿಯದು ಎಂದು ಸಲಹೆ ಇತ್ತರು. ಮತ್ತು ಅದು
ನೂರಕ್ಕೆ ನೂರು ಸರಿ ಆಯಿತು ಎಂದು ಉಲ್ಲೇಖಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ