ಬೆಂಬಲಿಗರು

ಬುಧವಾರ, ಜೂನ್ 19, 2013

ಕಿಡ್ನಿ ವೈಫಲ್ಯ -೨

ಮೂತ್ರ  ಪಿಂಡಗಳ ವೈಫಲ್ಯ ಧಿಡೀರ್ ಆಗಿ (acute) ಆಗಿ ಅಥವಾ ನಿಧಾನ ( ಕ್ರೋನಿಕ್) ವಾಗಿ ಬರ ಬಹುದು.ತೀವ್ರ ರಕ್ತ ಸ್ರಾವ,

ತೀವ್ರ ತರ ಸೋಂಕು ,ವಾಂತಿ ಬೇದಿ ,ಮೂಲತ ಕಿಡ್ನಿ ರೋಗಗಳು ಧಿಡೀರ್ ವೈಫಲ್ಯಕ್ಕೆ ಕಾರಣ ವಾಗ ಬಹುದು. ನಿಧಾನ

ವೈಫಲ್ಯಕ್ಕೆ ಸಕ್ಕರೆ ಕಾಯಿಲೆ ,ರಕ್ತದ ಒತ್ತಡ ಜಾಗತಿಕವಾಗಿ ಮುಖ್ಯ ಕಾರಣಗಳು.

ಸಕ್ಕರೆ ಕಾಯಿಲೆ  ರೋಗಿಗಳ ಮೂತ್ರದಲ್ಲಿ ಸಸಾರಜನಕ (ಅಲ್ಬುಮಿನ್) ಹೋಗ  ತೊಡಗುವುದು ಈ ರೋಗ ಕಿಡ್ನಿ ಗೆ

ವ್ಯಾಪಿಸಿರುವುದರ  ಸೂಚಕ .ಆದುದರಿಂದ ಸಕ್ಕರೆ ಕಾಯಿಲೆ ಯುಳ್ಳ ರೋಗಿಗಳು ಮೂತ್ರ ಪರೀಕ್ಷೆ ಮಾಡಿಸಿ ಅಲ್ಬುಮಿನ್

ಇದೆಯೇ ಎಂದು ಆಗಾಗ್ಗೆ ನೋಡಿ ಕೊಳ್ಳ ಬೇಕು.

ಕಿಡ್ನಿಗಳು ವೈಫಲ್ಯ ತೊಡಗುತ್ತಿದ್ದಂತೆ  ಅವುಗಳು ಸೋಸುವ ರಕ್ತ ದ ಪ್ರಮಾಣ ಕಡಿಮೆ ಆಗುತ್ತಾ ಬರುತ್ತದೆ.ಇದನ್ನು

ವೈದ್ಯಕೀಯ ಭಾಷೆಯಲ್ಲಿ ಗ್ಲೋಮರ್ಯುಲಾರ್ ಫಿಲ್ತ್ರೆಶನ್ ರೇಟ್ ಎನ್ನುತ್ತಾರೆ. ಗ್ಲೋಮರುಲಾಸ್ ಎಂದರೆ ಕಿಡ್ನಿಯ  ಇಂದು

ಕಾರ್ಯ ಕಾರಿ  ಯೂನಿಟ್.ರಕ್ತ ದಲ್ಲಿ ಕಿಡ್ನಿ ಕಾರ್ಯ ಪರೀಕ್ಷೆ ( ರೀನಲ್ ಫಂಕ್ಷನ್ ಟೆಸ್ಟ್ ) ಎಂದರೆ  ರಕ್ತದ ಯೂರಿಯಾ ಮತ್ತು

ಕ್ರಿಯಾಟಿನಿನ್  ಅಳೆಯುವುದು.ಉಭಯ  ಮೂತ್ರ ಪಿಂಡಗಳ ಕಾರ್ಯ ಕ್ಷಮತೆ ಶೇಕಡಾ ೫೦ ರಷ್ಟು ನಾಶ ವಾದಾಗ  ಈ

ಅಂಶಗಳು ರಕ್ತದಲ್ಲಿ ಹೆಚ್ಚಾಗ ತೊಡಗುತ್ತವೆ .ಆದುದರಿಂದ  ಬಹಳ ಮೊದಲೇ ಈ  ರೋಗವನ್ನು ಕಂಡು ಹಿಡಿಯುವುದು ಸ್ವಲ್ಪ

ಕಷ್ಟ .


ಕಿಡ್ನಿ ವೈಫಲ್ಯ ದ ಲಕ್ಷಣಗಳು 

                                     ಶರೀರದ ಎಲ್ಲಾ ಅಂಗಗಳ ಕ್ಷಮತೆ ಕಂಮಿಯಾಗುವುದು. ಅತಿಯಾದ

ಆಯಾಸ ,ಏಕಾಗ್ರತೆ ಇಲ್ಲದಿರುವುದು ,ನಿದ್ರೆ ಕಮ್ಮಿ ,ಮಾಂಸ ಖಂಡ ಗಳು ಹಿಡಿದು ಕೊಳ್ಳುವುದು ,ರಾತ್ರಿ ಆಗಾಗ್ಗೆ ಮೂತ್ರ

ವಿಸರ್ಜನೆ ,ಚರ್ಮ ಒಣಗಿದಂತಾಗಿ ತುರಿಸುವುದು ,ಸಾಮಾನ್ಯ ಔಷಧಿಗಳಿಂದ ಗುಣವಾಗದ ರಕ್ತ ಹೀನತೆ ,ಮತ್ತು ಏರುವ ರಕ್ತದ

ಒತ್ತಡ  ,ಕೊನೆಗೆ  ಮುಖ ಕಾಲುಗಳಲ್ಲಿ ನೀರು ,ದಮ್ಮು ಕಟ್ಟುವುದು.



ಮೊದಲೇ ಹೇಳಿದಂತೆ  ಆರಂಭದಲ್ಲಿ  ಅಂತಹ ರೋಗ ಕುರುಹುಗಳು ಕಾಣ ಬರುವುದಿಲ್ಲ .

ಕಿಡ್ನಿ ವೈಫಲ್ಯ ತಡೆಗಟ್ಟುವ ಮಾರ್ಗ :

ಸಕ್ಕರೆ ಕಾಯಿಲೆ ನಿಯಂತ್ರಣ ದಲ್ಲಿ ಇಡುವುದು .ಅದರಂತೆ  ಅಧಿಕ ರಕ್ತದ ಒತ್ತಡಕ್ಕೆ  ಯಾವುದೇ ರೋಗ ಲಕ್ಷಣ ಇಲ್ಲದಿದ್ದರೂ

ಚಿಕಿತ್ಸೆ ಮಾಡುವುದು .ನೋವಿನ ಮಾತ್ರೆಗಳನ್ನು ಅತಿಯಾಗಿ ಸೇವನೆ ಮಾಡದಿರುವುದು .ಮೂತ್ರ ನಾಳದ ಕಲ್ಲು , ಪ್ರಾಸ್ಟೇಟ್

ರೋಗಗಳಿಗೆ ಸರಿಯಾದ ಚಿಕಿತ್ಸೆ ಮಾಡುವುದೂ ಅಗತ್ಯ.

ಕಿಡ್ನಿ ವೈಫಲ್ಯ ಕಂಡು ಹಿಡಿಯುವುದು.

ರೋಗಿಯ ರೋಗ ಇತಿಹಾಸ, ಮೂತ್ರ ಮತ್ತು ರಕ್ತ ಪರೀಕ್ಷೆ ,ಅಲ್ಟ್ರಾ ಸೌಂಡ್ ಸ್ಕ್ಯಾನ್  ,ಅವಶ್ಯ ಬಿದ್ದರೆ  ಕಿಡ್ನಿ ಬಯೋಪ್ಸಿ

 ಮಾಡಿಸುವರು. ಸ್ಕ್ಯಾನ್ ನಲ್ಲಿ ಕಿಡ್ನಿ ಯಲ್ಲಿ ಜನ್ಮತ  ಊತ , ಕಲ್ಲುಗಳು ,ಪ್ರಾಸ್ಟೇಟ್ ಇತ್ಯಾದಿಗಳನ್ನು ಕಂಡು ಹಿಡಿಯ

ಬಹುದಲ್ಲದೆ  ವೈಫಲ್ಯ ದೊಡನೆ ಕುಂದುತ್ತ್ತಿರುವ  ಕಿಡ್ನಿಗಳ ಗಾತ್ರ ಗಳನ್ನು  ಗಮನಿಸುತ್ತಾರೆ.

ಚಿಕಿತ್ಸೆ .

ಆರಂಭದ ಹಂತದಲ್ಲಿ  ಕಟ್ಟು ನಿಟ್ಟಿನ  ಸಕ್ಕರೆ ಹಾಗೂ ರಕ್ತ ಒತ್ತಡ ದ ಹತೋಟಿ ,ರಕ್ತ ಉಂಟಾಗಲು ಏರಿಥ್ರೋಪೋಯಿಟಿನ್ ,


ಕ್ಯಾಲ್ಸಿಯಂ ಮತ್ತು ಪರಿಷ್ಕೃತ  ವಿಟಮಿನ್ ಡಿ ಯ ನ್ನು ಕೊಟ್ಟು  ರೋಗವನ್ನು ನಿಯಂತ್ರಣದಲ್ಲಿ  ಇಡಬಹುದು.


ಕಿಡ್ನಿಗಳು ತೀರಾ ಹದೆಗೆಟ್ತಾಗ  ಡಯಾಲಿಸಿಸ್ ಮಾಡುತ್ತಾರೆ. ಎಂದರೆ  ಕೃತಕ ಕಿಡ್ನಿ  ಯಂತ್ರದ ಮೂಲಕ ರೋಗಿಯ



ರಕ್ತವನ್ನು ಹಾಯಿಸಿ ಶುದ್ಧ ಗೊಳಿಸುತ್ತಾರೆ .
                                               

ಕಿಡ್ನಿಯ ಕಸಿ


  .ಇಲ್ಲಿ ದಾನಿಯ ಒಂದು ಕಿಡ್ನಿಯನ್ನು  ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು  ರೋಗಿಗೆ  ಜೋಡಿಸುವರು.ಕಸಿಯಾದ ಮೇಲೂ


ಅದನ್ನು ರೋಗಿಯ ಶರೀರ ತಿರಸ್ಕರಿಸದಂತೆ  ನಿರಂತರೆ ಔಷಧಿ ಸೇವನೆ ಅವಶ್ಯ.

                                                    


( ಮೇಲಿನ ಚಿತ್ರಗಳ ಮೂಲಕ್ಕೆ ಆಭಾರಿ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ