ಬೆಂಬಲಿಗರು

ಮಂಗಳವಾರ, ಜೂನ್ 25, 2013

ಹೃದಯಾಘಾತ

ಹೃದಯ ದೇವರು  ನಿರ್ಮಿಸಿದ ಅದ್ಬುತ  ಪಂಪ್.ದೇಹದ ಎಲ್ಲಾ ಜೀವಕೋಶಗಳಿಗೆ ಆಹಾರ ಮತ್ತ್ತು ಆಮ್ಲಜನಕ ಸರಬರಾಜು

ಮಾಡುವುದಲ್ಲದೆ ಅಶುದ್ದ್ದ ರಕ್ತವನ್ನು ಸ್ವೀಕರಿಸಿ ಸ್ವಾಶಕೊಶಕ್ಕೆ ಶುದ್ದೀಕರಣಕ್ಕಾಗಿ ಕಳುಸಿಸಿ  ಕೊಡುತ್ತದೆ.ಅದರಲ್ಲೂ ಮೆದುಳಿನ 

ಜೀವಕೋಶಗಳು ಬಹಳ ಸೂಕ್ಷ್ಮ .ಕೆಲ ನಿಮಿಷಗಳ ರಕ್ತ ಸರಬರಾಜು ನಿಂತರೂ ಅವು ಸತ್ತು ಹೋಗುವವು.ಆದುದರಿಂದ

 ಯಾವುದೇ ವಿಶ್ರಾಂತಿ ಇಲ್ಲದೆ ಕೆಲಸ ಮಾಡುವ ಅಂಗ ಹೃದಯ. ಈ ಹೃದಯಕ್ಕೂ ರಕ್ತ ಸರಬರಾಜು ಬೇಕು. ಅದಕ್ಕೆಂದೇ 

ಮಹಾ ಅಪಧಮನಿ (ಅಯೋರ್ತ) ದಿಂದ ಉದ್ಭವಿಸುವ   ಕೊರೋನರಿ ರಕ್ತ ನಾಳಗಳು  ಹೃದಯದ ಮಾಂಸ ಖಂಡಗಳಿಗೆ 

ಬೇಕಾದ ಆಹಾರ ಮತ್ತು  ಆಮ್ಲಜನಕ ಒದಗಿಸುತ್ತವೆ. ಡಿಸೇಲ್  ಟ್ಯಾಂಕರ್  ಲಾರಿ ಗೆ  ಇಂಧನ ಒದಗಿಸಲು ಬೇರೆ  ಟ್ಯಾಂಕ್ 

ಇದೆಯಲ್ಲವೇ?
                                                           
ಹೃದಯದ ರಕ್ತ ನಾಳಗಳು.
ಬಲ ಮತ್ತು ಎಡ  ಎಂಬ ಎರಡು ಮುಖ್ಯ ನಾಳಗಳು ,ಎಡದ ಹೃದಯದ ಮಾಂಸ ಖಂಡಗಳು ಹೆಚ್ಚು 

ಕೆಲಸ ಮಾಡುವುದರಿಂದ ಎಡದ ರಕ್ತನಾಳ  ದೊಡ್ಡದಿದ್ದು ಎರಡು ಮುಖ್ಯ ಕವಲು ಗಳಾಗಿ  ಒಡೆಯುತ್ತದೆ.

ಇವು ಮೂರು ಮುಖ್ಯ ರಕ್ತನಾಳಗಳು. ಇವುಗಳು ಬ್ಲಾಕ್ ಆದಾಗ ಸಿಂಗಲ್ ವೆಸ್ಸೆಲ್  ಬ್ಲಾಕ್ , ಡಬ್ಬಲ್ ಮತ್ತು ಟ್ರಿಪಲ್ 

ವೆಸ್ಸೆಲ್ ಬ್ಲಾಕ  ಎಂದು ವೈದ್ಯರು ಕರೆಯುತ್ತಾರೆ. ಇಂಗ್ಲಿಷ್ ನಲ್ಲಿ ರಕ್ತನಾಳ ಕ್ಕೆ  ಬ್ಲಡ್ ವೆಸ್ಸಲ್ ಎಂದೂ ಕರೆಯುತ್ತಾರೆ.

ಈ ಕೊರೋನರಿ  ರಕ್ತನಾಳ ಗಳ ಒಳಗೆ  ಕೊಲೆಸ್ತೆರೋಲ್ ಮತ್ತು ಕೊಬ್ಬಿನ ಅಂಶ ಕುಳಿತು ರಕ್ತ ಸಂಚಾರಕ್ಕೆ 

ತಡೆಯುಂಟು ಮಾಡಿದರೆ ಹೃದಯ ದ ಮಾಂಸ ಖಂಡಗಳು ನೋವಿನಿಂದ  ಕೂಗುತ್ತವೆ. ಆ ಕೂಗೆ ಎದೆ ನೋವು.

ಹೃದಯ ಸಂಬಂದಿ ಎದೆ ನೋವು. ಈ ನೋವು  ಎದೆಯ ಮಧ್ಯ ಭಾಗದಲ್ಲಿ ಒತ್ತಿದಂತ  ಅನುಭವ , ಎಡದ ಕೈಗೂ 

ನೋವು ಪಸರಿಸ ಬಹುದು.  ರಕ್ತನಾಳ ಪೂರ್ಣವಾಗಿ ಬ್ಲಾಕ್  ಆದರೆ  ಅದನ್ನು ಅವಲಂಬಿಸಿಸುವ ಹೃದಯದ 

ಮಾಂಸ ಖಂಡಗಳು ಉಪವಾಸದಿಂದ ಸಾಯುತ್ತವೆ. ಇದನ್ನ್ನುರ್ ಮಯೊ ಕಾರ್ಡಿಯಲ ಇನ್ಫಾರ್ಕ್ಶನ್  ಅಥವಾ 

ಹೃದಯಾಘಾತ  ಎಂದು ಕರಯುತ್ತಾರೆ.ಇದು ತಿವ್ರವಾಗಿದ್ದರೆ ಮೆದುಳಿಗೆ ರಕ್ತ ಇಲ್ಲದೆ ವ್ಯಕ್ತಿ ಸಾವನ್ನು ಅಪ್ಪುವನು.

ಸಕ್ಕರೆ ಕಾಯಿಲೆ ಇರುವ ರೋಗಿಗಳಲ್ಲಿ ನರಗಳು  ಭಾದಿಸಲ್ಪತ್ತಿರುವುದರಿಂದ  ಅವರಿಗೆ ಉಳಿದವರಂತೆ ಎದೆ ನೋವು 

ಬಾರದಿರಬಹುದು.ಹೃದಯದ  ಅಡಿ ಭಾಗ ದ  ರಕ್ತನಾಳ ಗಳು ಮುಚ್ಚಿದ್ದರೆ  ಹೊಟ್ಟೆ ನೋವು ಬರಬಹುದು. ಇದನ್ನು 

ಗ್ಯಾಸ್ಟ್ರಿಕ್ ಎಂದು ಉಪೇಕ್ಷಿಸಿ  ಅನಾಹುತ ಆದ ನಿದರ್ಶನ ಗಳಿವೆ,.

ಹೃದಯಾಘಾತ  ಯಾರಲ್ಲಿ ಬರುತ್ತದೆ?

ಸಕ್ಕರೆ ಕಾಯಿಲೆ , ಅಧಿಕ ರಕ್ತದ ಒತ್ತಡ  ಇರುವವರು, ಕುಟುಂಬದಲ್ಲಿ ಹೃದಯಾಘಾತದ ಇತಿಹಾಸ ಉಳ್ಳವರು, ಧೂಮ 

ಪಾನಿಗಳು ,  ಶಾರೀರಿಕ  ವ್ಯಾಯಾಮ ಇಲ್ಲದವರು ಈ ಮಂದಿಯಲ್ಲಿ  ಹೃದಯಾಘಾತ ಹೆಚ್ಚು.ಇತ್ತೀಚಿಗಿನ 

ಉದ್ವೇಗದ ಜೀವನ ಶೈಲಿಯೂ ಕಾರಣ. ಗಂಡಸರಲ್ಲಿ ಇದು ಹೆಚ್ಚಾದರೂ ಮುಟ್ಟು ನಿಂತ ಮೇಲೆ  ಹೆಂಗಸರೂ 

ಇದಕ್ಕೆ ಹೊರತಲ್ಲ.

ಹಿಂದಿನ ಕಾಲದಲ್ಲಿ  ಹೃದಯಾಘಾತ ದಿಂದ  ಮರಣ ಹೊಂದಿದರೆ  ಭೂತ  ಪಿಶಾಚಿಗಳನ್ನ  ದೂರುತ್ತಿದ್ದರು.

ಅನಾಯಾಸೇನ ಮರಣಂ ಎಂದು ಬಯಸುವವರಿಗೆ  ಇದು ವರ ಪ್ರಸಾದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ